ಪುನೀತ್ ಕೊನೆಯದಾಗಿ ಕರೆ ಮಾಡಿದ್ದು ಯಾರಿಗೆ ಗೊತ್ತಾ?

Date:

ಚಂದನವನದ ‘ರಾಜಕುಮಾರ’, ಸಹಸ್ರಾರು ಅಭಿಮಾನಿಗಳ ‘ವೀರ ಕನ್ನಡಿಗ’ ಪುನೀತ್​ ರಾಜ್​ಕುಮಾರ್​ ಅವರು ಬಾರದೂರಿಗೆ ಪಯಣ ಬೆಳೆಸಿದ್ದು, ಕರುನಾಡು ಕಣ್ಣೀರ ಕಡಲಲ್ಲಿ ಮುಳುಗಿದೆ. ಸಾವಿಗೂ ಮುನ್ನ ಪುನೀತ್​ ಕೊನೆಯದಾಗಿ ಕರೆ ಮಾಡಿದ್ದು, ಡಾನ್ಸ್​ ಮಾಡಿದ್ದು, ಕಾರ್ಯಕ್ರಮ… ಈ ಕುರಿತ ಮಾಹಿತಿ ಇಲ್ಲಿದೆ.

ಇಂದು ಬೆಳಗ್ಗೆ ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿದ್ದ ಪುನೀತ್​ ಅವರು ಮ್ಯಾನೇಜರ್​ಗೆ ಕರೆ ಮಾಡಿ, ‘ಎಲ್ಲಿದ್ದೀಯಾ?’ ಎಂದು ಕೇಳಿದ್ದರು. ‘ಥಿಯೇಟರ್​ನಲ್ಲಿರುವೆ’ ಎಂದ ಮ್ಯಾನೇಜರ್​ ಅನ್ನು ‘ಬೇಗ ಮನೆಗೆ ಬಾ, ರೆಡಿಯಾಗಿ ಭಜರಂಗಿ ಸಿನಿಮಾಗೆ ಹೋಗೋಣ’ ಎಂದಿದ್ದರು. ಆಮೇಲೆ ‘ಯಾಕೋ ಸ್ವಲ್ಪ ಸುಸ್ತಾಗಿದೆ, ಬೇಗ ಬಾ..’ ಎಂದೂ ಹೇಳಿದ್ದರು. ಪುನೀತ್​ರ ಮೊಬೈಲ್​ನಿಂದ ಹೋದ ಕೊನೇ ಕರೆ ಇದಾಗಿತ್ತು.

ಸರಳ ಜೀವಿ, ಮಹಾನ್​ ಪ್ರತಿಭಾವಂತ ನಟ ಅಪ್ಪು ಅವರು ಸಾವಿಗೂ ಮುನ್ನ ಅಣ್ಣ ಶಿವರಾಜ್​ಕುಮಾರ್​ ಅವರ ಭಜರಂಗಿ-2 ಸಿನಿಮಾ ಬಿಡುಗಡೆಗೂ ಮುನ್ನ, ಅ.26ರಂದು ನಡೆದ ಕಾರ್ಯಕ್ರಮವನ್ನ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಆ ವೇದಿಕೆಯಲ್ಲಿ ಯಶ್​, ಪುನೀತ್​, ಶಿವಣ್ಣ ಸ್ಟೆಪ್​ ಹಾಕಿದ್ರು. ಇದೇ ಪುನೀತ್​ರ ಕೊನೇ ಡಾನ್ಸ್​.

ಇಂದು ಬಿಡುಗಡೆಯಾಗಿದ್ದ ಭಜರಂಗಿ ಸಿನಿಮಾಕ್ಕೆ ಟ್ವೀಟ್​ ಮೂಲಕ ಅಪ್ಪು ಶುಭ ಕೋರಿದ್ದರು. ಶುಕ್ರವಾರ ಬೆಳಗ್ಗೆ 7.33 ನಿಮಿಷಕ್ಕೆ ಟ್ವೀಟ್​ ಮಾಡಿದ್ದರು. ಇದೇ ಅವರ ಕೊನೇ ಟ್ವೀಟ್​ ಆಯ್ತು.
ನಿನ್ನೆ(ಗುರುವಾರ) ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್​ರ ಬರ್ತ್​ ಡೇ ಪಾರ್ಟಿಯಲ್ಲಿ ವಿಶೇಷ ಅತಿಥಿಯಾಗಿ ಪುನೀತ್​ ದಂಪತಿ ಪಾಲ್ಗೊಂಡಿದ್ದರು. ಇದು ಪುನೀತ್​ ಬದುಕಿದ್ದಾಗ ಪಾಲ್ಗೊಂಡ ಕೊನೇ ಪಾರ್ಟಿ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...