ನೋಡೋಕೆ ಸೇಮ್ ಪುನೀತ್ ಥರಾನೇ ಇದ್ದಾರೆ ಈ ಅಭಿಮಾನಿ ದೇವ್ರು

Date:

ಜೂನಿಯರ್ ರಾಜ್​ಕುಮಾರ್, ಜೂನಿಯರ್ ವಿಷ್ಣುವರ್ಧನ್​, ಜೂನಿಯರ್ ಶಂಕರ್​ನಾಗ್​, ಜೂನಿಯರ್ ಅಂಬರೀಷ್, ಜೂನಿಯರ್ ಉಪೇಂದ್ರ.. ಹೀಗೆ ಸ್ಯಾಂಡಲ್​​ವುಡ್​ನ ದೊಡ್ಡದೊಡ್ಡ ನಟರನ್ನೇ ಹೋಲುವಂಥ, ತಕ್ಷಣಕ್ಕೆ ನೋಡಿದರೆ ಅವರೇ ಅನಿಸುವಂಥವರಿದ್ದಾರೆ.

ಇದೀಗ ಅದೇರೀತಿ ಅಪ್ಪುವನ್ನೇ ಒಪ್ಪುವ ರೂಪಿನ ಯುವಕನೊಬ್ಬ ಜನರ ಗಮನ ಸೆಳೆಯಲಾರಂಭಿಸಿದ್ದಾನೆ.

ಹೌದು.. ಈಗ ಎಲ್ಲೆಡೆ ಪುನೀತ್ ರಾಜಕುಮಾರ್ ಅವರ ವಿಚಾರವೇ ಚರ್ಚೆಯಲ್ಲಿ ಇರುವ ಈ ಸಂದರ್ಭದಲ್ಲಿ ಇಲ್ಲೊಬ್ಬ ಜೂನಿಯರ್ ಪುನೀತ್ ರಾಜಕುಮಾರ್​ ಎಂದೇ ಗುರುತಿಸಿಕೊಳ್ಳುತ್ತಿರುವ ಯುವಕನೊಬ್ಬ ನೋಡುಗರ ಗಮನವನ್ನು ಸೆಳೆಯಲಾರಂಭಿಸಿದ್ದಾನೆ. ಮೂಲತಃ ತೀರ್ಥಹಳ್ಳಿಯ ನಿವಾಸಿ ಆಗಿರುವ ಈತನ ಹೆಸರು ಪ್ರವೀಣ್ ಆಚಾರ್ಯ.

ಸದ್ಯ ಈತ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಗ್ಯಾರೇಜ್ ನಡೆಸುತ್ತಿದ್ದಾನೆ. ನೋಡಲು ಪುನೀತ್ ಥರವೇ ಕಾಣುವ ಈತ ಪುನೀತ್ ಥರವೇ ಉಡುಗೆ-ತೊಡುಗೆ ತೊಟ್ಟು ಕಾಣಿಸಿಕೊಳ್ಳುತ್ತಾನೆ. ಮಾತ್ರವಲ್ಲ ಪುನೀತ್ ಧ್ವನಿಯನ್ನು ಅನುಕರಿಸಿ ಮಾತನಾಡುವುದನ್ನೂ ಅಭ್ಯಾಸ ಮಾಡಿಕೊಂಡಿರುವ ಈತ ಕುಂದಾಪುರ ಪರಿಸರದಲ್ಲಿ ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಗುರುತಿಸಿಕೊಳ್ಳುತ್ತಿದ್ದಾನೆ. ಪುನೀತ್ ಅಭಿಮಾನಿಯಾಗಿರುವ ಈತ ಅಪ್ಪು ಅಗಲಿಕೆಯಿಂದ ಸದ್ಯ ನೊಂದುಕೊಂಡಿದ್ದಾನೆ.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...