ಸಿನಿಮಾ ಮಂದಿರದಲ್ಲಿ ಮಹಿಳೆಯ ಮೇಲೆ ಕೈಹಾಕಿದವನಿಗೆ ಬಿತ್ತು ಗೂಸಾ

Date:

ಸಿನಿಮಾಗಳು ಅಂದಮೇಲೆ ಅದರಲ್ಲಿ ರೊಮ್ಯಾಂಟಿಕ್​​ ದೃಶ್ಯಗಳು ಇರೋದು ಸರ್ವೇ ಸಾಮಾನ್ಯ. ಆದರೆ ಇಂತಹ ದೃಶ್ಯಗಳನ್ನು ನೋಡುವ ಮುನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಇಲ್ಲವಾದರಲ್ಲಿ ನೀವು ಬಹುದೊಡ್ಡ ಯಡವಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದೇ ರೀತಿಯ ಘಟನೆಯೊಂದು ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಹಾಗೂ ನಟಿ ಕತ್ರಿನಾ ಕೈಫ್​ ಅಭಿನಯದ ಸೂರ್ಯವಂಶಿ ಸಿನಿಮಾ ವೀಕ್ಷಣೆ ಸಂಭವಿಸಿದೆ.

ಭೂಪಾಲ್​​ನ ಸಂಗಮ್​ ಕಾಂಪ್ಲೆಕ್ಸ್​ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ಯುವಕನೊಬ್ಬ ರೊಮ್ಯಾಂಟಿಕ್​ ದೃಶ್ಯವನ್ನು ನೋಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ .ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಮಹಿಳೆ ಹಾಗೂ ಇತರೆ ಪ್ರೇಕ್ಷಕರು ಯುವಕನನ್ನು ತರಾಟೆಗೆ ತೆಗೆದುಕೊಂಡ ಬಳಿಕ ಆತ ಘಟನೆ ಸಂಬಂಧ ಕ್ಷಮೆಯಾಚಿಸಿದ್ದಾನೆ. ಈ ಘಟನೆ ಸಂಬಂಧ ಈವರೆಗೆ ಯಾವುದೇ ಪೊಲೀಸ್​ ದೂರು ದಾಖಲಾಗಿಲ್ಲ.

ಮಹಿಳೆಯ ಮುಂದೆ ಕೂತಿದ್ದ ಯುವಕ ರೊಮ್ಯಾಂಟಿಕ್​ ದೃಶ್ಯವನ್ನು ನೋಡಿದ ಬಳಿಕ ಮಹಿಳೆಯ ಕಡೆ ಮುಖಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. ಮೊದಲು ಇದನ್ನು ಮಹಿಳೆ ಕಡೆಗಣಿಸಿದ್ದಾರೆ. ಆದರೆ ಯುವಕ ಮತ್ತೆ ಮತ್ತೆ ಅಶ್ಲೀಲತೆ ತೋರುತ್ತಿದ್ದಂತೆಯೇ ಆತನ ವಿರುದ್ಧ ಧ್ವನಿ ಎತ್ತಿದ್ದಾಳೆ.

ಮಹಿಳೆ ವಿರೋಧಿಸಿದ ಬಳಿಕವೂ ಯುವಕ ಅಶ್ಲೀಲವಾಗಿ ಮಾತನಾಡುವುದನ್ನು ಮುಂದುವರಿಸಿದ್ದ. ತನ್ನ ಸೀಟಿನಿಂದ ಎದ್ದು ನಿಂತ ಮಹಿಳೆ ಚಪ್ಪಲಿಯಿಂದ ಆತನಿಗೆ ಬಾರಿಸಿದ್ದಾಳೆ. ಕೂಡಲೇ ಇತರೆ ಪ್ರೇಕ್ಷಕರು ಮಹಿಳೆಗೆ ಸಾಥ್​ ನೀಡಿದ್ದು ಯುವಕನಿಗೆ ನಿಂದಿಸಿದ್ದಾರೆ. ಬಳಿಕ ಆತನನ್ನು ಸಿನಿಮಾ ಹಾಲ್​ನಿಂದ ಹೊರ ಹಾಕಲಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...