ಧೋನಿಯು ಒಬ್ಬ ಆದರ್ಶ ನಾಯಕರಲ್ಲೊಬ್ಬ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ.2007 ರಿಂದ ಆರಂಭಿಸಿ ಅವನು ತಂಡದ ಮುಂದಾಳತ್ವ ವಹಿಸಿದ ರೀತಿ ನಿಜಕ್ಕೂ ಶ್ಲಾಘನೀಯ ಹಾಗೂ ಅವನ ನಾಯಕತ್ವದಲ್ಲಿ ನಮ್ಮ ಕ್ರಿಕೆಟ್ ತಂಡ ತೋರಿದ ಸಾಧನೆ ಬಗ್ಗೆ ಎರಡು ಮಾತಿಲ್ಲ.ಅವನೊಂದಿಗೆ ಸರಿಸಮಾನವಾಗಿ ಹೋಲಿಸುವುದಾದಲ್ಲಿ ಇದುವರೆಗೆ ಬಂದು ಹೋದವರಲ್ಲಿ ಕೇವಲ ಬೆರಳೆಣಿಕೆಯಷ್ಟು ನಾಯಕರನ್ನು ಮಾತ್ರ ಹೋಲಿಸಬಹುದು.ಕೇವಲ ಆಟದ ಮೈದಾನದಲ್ಲಿ ಮಾತ್ರವಲ್ಲ,ಬದಲಾಗಿ ಪ್ರತೀಯೊಬ್ಬ ಯುವ ಆಟಗಾರನ ಬೆನ್ನ ಹಿಂದೆ ನಿಂತು ಪ್ರೇರೇಪಿಸಿದ್ದಾನೆ.ನಮ್ಮಧೋನಿಯನ್ನು ಹೊರತುಪಡಿಸಿ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಮುಂದಿನ ಪಂದ್ಯಗಳಲ್ಲಿನಮ್ಮ ತಂಡ ಜಯಶಾಲಿಯಾಗಲು ನಿಜವಾಗಲೂ ಅವನ ಮಾತುಗಳು ಒಂದು ಸ್ಪೂರ್ಥಿ ಎಂದು ಹೇಳಬೇಕಾಗಿಲ್ಲ.
BCCI ನಿಂದ ದೊರೆತ ಈ ವೀಡಿಯೋದಲ್ಲಿನಮ್ಮ ನಾಯಕ ಧೋನಿಯವರ ಮಾತುಗಳು ಯುವ ಆಟಗಾರರಿಗೆ ಯಾವ ರೀತಿಯಲ್ಲಿ ಪ್ರೇರಣೆ ನೀಡಿತು ಎಂದು ನೋಡಿ.
ಒಂದು ಸಣ್ಣ ಕಾರ್ಯಕ್ರಮ. ನಮ್ಮ ಹೊಸ ಕೋಚ್ ನೀಡಿದ ಸಲಹೆಯ ಮೇರೆಗೆ ಮೊದಲು ಡ್ರಮ್ ಬಾರಿಸುವುದರೊಂದಿಗೆ ಆರಂಭವಾಯಿತು
ನಂತರ ಧೋನಿಯವರು ಕ್ರಿಕೆಟ್ ಆಟರಗಾರರನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನು ನಾವು, 45 ನಿಮಿಷಗಳಿಂದ ಬಾರಿಸುತ್ತಿದ್ದೇವೆ,ಇದ್ರಲ್ಲಿ ನಮಗೆ ಸಂತೋಷವಾದ್ರೆ,ಖಂಡಿತವಾಗಿಯೂ ಕ್ರಿಕೆಟ್ನಲ್ಲೂ ನಾವು ಸಂತೋಷ ಪಡುತ್ತೇವೆ.
ಧೊನಿಯವರ ಪ್ರಕಾರ,ಮುಂದೆ ನಡೆಯಲಿರುವ ಆ ಪಂದ್ಯವು ನಮಗೊಂದು ಉತ್ತಮ ಪಾಠ ಕಲಿಸುತ್ತದೆ,ಪಂದ್ಯದಲ್ಲಿ ಸೋಲು ,ಗೆಲುವು ಕಟ್ಟಿಟ್ಟ ಬುತ್ತಿ.
“ಎಂದಿಗೂ ಒಗ್ಗಟ್ಟಿನಲ್ಲಿರಿ,ಎಲ್ಲರೂ ಪಂದ್ಯದಲ್ಲಿ ಚೆನ್ನಾಗಿ ಆಡಲು ಅಸಾಧ್ಯವಾಗಬಹುದು ಕೆಲವ್ರು ಸೋತೂ ಹೋಗಬಹುದು,ಆದ್ರೆ ನೀವಾಡುವ 17 ಟೆಸ್ಟ್ ಪಂದ್ಯಗಳೆ ನಿಮ್ಮ ಗೆಲುವಿಗೆ ಸಾಕ್ಷಿ.ಕಷ್ಟಕರವಾದ ಸನ್ನಿವೇಶದಲ್ಲಿ ನಾವು ಸಂತೋಷದಿಂದಿರುವುದು ಮುಖ್ಯ.ಅದ್ರೆ ಎಲ್ಲಿಯವರೆಗೆ,ನಿಮ್ಮ ನಿಲುವಿನಲ್ಲಿ ದೃಡತೆ ಇರುತ್ತದೋ,ಎಲ್ಲಿಯವರೆಗೆ ನೀವು ಸಂತೋಷವಾಗಿರುತ್ತೀರೋ,ಆಗ ನಿಮ್ಮನ್ನು ತಡೆಯಲು ಯಾವ ಶಕ್ತಿಯಿಂದಲೂ ಅಸಾಧ್ಯ”
ಇಲ್ಲಿಂದ ಮುಂದೆ,ಕೇವಲ ಆಟ ಕ್ಕಿಂತಲೂ ತೀರಾ ಮುಖ್ಯವಾದ ಇನ್ನೊಂದು ವಿಷಯದ ಬಗ್ಗೆ ಧೋನಿ ಏನನ್ನುತ್ತಾರೆ ನೋಡಿ!
“ಕ್ರಿಕೆಟ್ನಲ್ಲಿ ನಾವು ಕಲಿಯೋ ಪಾಠಕ್ಕಿಂತಲೂ ಇದು ಜೀವನಕ್ಕೆ ಅಗತ್ಯವಾದ ವಿಷಯ.ಬಯಸಿದ್ರೂ,ಇಲ್ಲದಿದ್ದ್ರೂ,ನಾವೆಲ್ಲಾರೂ ಒಟ್ಟಿಗೆ ಮುಂದಿನ 8 ವರುಷಗಳ ತನಕ ಆಡಬೇಕು,ಆದ ಕಾರಣಕ್ಕಾಗಿ ನಾವು ನಮ್ಮ ಜೀವನದಲ್ಲಿ ಜೊತೆಜೊತೆಯಾಗಿ ಸಂತೋಷವನ್ನು ಅನುಭವಿಸಬೇಕು.”
ಆಟಗಾರರು ಧೋನಿಯ ಭಾಷಣವನ್ನು ತದೇಕಚಿತ್ತರಾಗಿ ಕೇಳುತ್ತಿದ್ದು,ಧೋನಿಯು ಅವ್ರಾಡಲಿರುವ ಪಂದ್ಯಗಳಿಗೆ ಶುಭ ಹಾರೈಸಿದರು.
- ಸ್ವರ್ಣಲತ ಭಟ್
POPULAR STORIES :
ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!
ಮುಂಬೈನ ಮರೀನ್ ಡ್ರೈವ್‍ನಲ್ಲಿರೋ ಕಲ್ಲುಗಳೇಕೆ ಹೀಗಿವೆ ಗೊತ್ತಾ.?