ಗರ್ಭಿಣಿಯಾದಾಗಿನಿಂದ ಪ್ರತಿಯೊಬ್ಬ ಹೆಣ್ಣು ಸಾಕಷ್ಟು ಜಾಗೃತವಾಗಿರುತ್ತಾಳೆ. ಆದರೆ ಎಲ್ಲಾ ಮುನ್ನೆಚ್ಚರಿಕೆಗಳ ಆಚೆಗೆ ಕೆಲವೊಮ್ಮೆ ಅವಘಡಗಳು ಸಂಭವಿಸಿ ಬಿಡುತ್ತೆ. ಇಲ್ಲಿ ಆಗಿದ್ದೂ ಅದೇ. ತಾಯಿ ಕಣ್ಣು ಮುಚ್ಚಿದರೆ, ನವಜಾತ ಶಿಶು ಸ್ವಲ್ಪದರಲ್ಲಿ ಬಚಾವ್ ಆಗಿದೆ.
ಅಪರೂಪದಲ್ಲಿ ಅತೀ ಅಪರೂಪ ಪ್ರಕರಣದಲ್ಲಿ ಗದಗ ವೈದ್ಯರು ಯಶಸ್ವಿಯಾಗಿದ್ದಾರೆ. ಮೃತ ಗರ್ಭಿಣಿಯ ಹೊಟ್ಟೆಯಿಂದ ಹೆಣ್ಣು ಮಗುವನ್ನು ಹೊರ ತೆಗೆದು ಬದುಕಿಸಿದ್ದಾರೆ. ಗದಗ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಅಪರೂಪದ ಘಟನೆ ನಡೆಸಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ಅನ್ನಪೂರ್ಣ ಮೂರ್ಛೆ ರೋಗ, ಲೋ ಬಿಪಿಯಿಂದ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದರು. ತಕ್ಷಣ ಎಚ್ಚರಿಕೆಯ ಹೆಜ್ಜೆ ಇಟ್ಟ ವೈದ್ಯರು ಮಗುವಿನ ಪ್ರಾಣ ಉಳಿಸಿದ್ದಾರೆ.
ಮೂರ್ಛೆ ರೋಗ, ಲೋ ಬಿಪಿ ಆಗಿ ತಾಯಿ ಮೃತಪಟ್ಟರೂ ಮಗುವನ್ನ ಬದುಕಿಕಿಸಿದ್ದಾರೆ. ಕುಟುಂಬ ಸದಸ್ಯರ ಮನವೊಲಿಸಿ ಕೇವಲ 10 ನಿಮಿಷದಲ್ಲಿ ಆಪರೇಷನ್ ಮಾಡಿ ಶಿಶುವನ್ನು ಕಾಪಾಡಿದ್ದಾರೆ.
ತಾಯಿ ಸಾವಿನ ಮಗು ಸೇರಿದರೆ ಆಕೆ ಮಗು ಸಾವನ್ನು ಗೆದ್ದಿದೆ. ಸದ್ಯ ದಂಡಪ್ಪ ಮಾನ್ವಿ ಆಸ್ಪತ್ರೆಯ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ