ವಿದ್ಯಾರ್ಥಿನಿಗೆ ವೇಶ್ಯೆ ಎಂದ ಶಿಕ್ಷಕನ ಬಂಧನ

Date:

ಮುಂಬೈನ ಅಂಧೇರಿ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, 16 ವರ್ಷದ ವಿದ್ಯಾರ್ಥಿನಿಯನ್ನ ವೇಶ್ಯೆ ಎಂದು ಕರೆದ 48 ವರ್ಷದ ಶಿಕ್ಷಕನನ್ನ ಪೊಲೀಸರು ಬಂಧಿಸಿದ್ದಾರೆ.

ತಾನು ತರಗತಿಗೆ ಬಂದಾಗ, ವಿದ್ಯಾರ್ಥಿನಿ ಗೆಳೆಯ ಆಕೆಯ ತೊಡೆಯ ಮೇಲೆ ಮಲಗಿದ್ದ ಎಂದಿರುವ ಶಿಕ್ಷಕ, ಕೋಪಗೊಂಡು ವಿದ್ಯಾರ್ಥಿನಿಯನ್ನ ಜರಿದಿದ್ದಾನೆ ಎಂದಿದ್ದಾನೆ.

 

ಸಧ್ಯ ಲೈಂಗಿಕ ಅಪರಾಧಗಳಿಂದ ಮಕ್ಕಳ ಕಠಿಣ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೋಧಕನನ್ನ ಬಂಧಿಸಲಾಗಿದೆ.

ಓಶಿವಾರ ಪೊಲೀಸರ ಪ್ರಕಾರ, ಶಿಕ್ಷಕ ಅಂಧೇರಿಯಲ್ಲಿ (ಪಶ್ಚಿಮ) ಖಾಸಗಿ ಬೋಧನಾ ತರಗತಿಗಳನ್ನ ನಡೆಸುತ್ತಾನೆ. ಅಕ್ಟೋಬರ್ 29ರಂದು ತರಗತಿ ನಡೆಯುತ್ತಿರುವಾಗ ಈ ಆಘಾತಕಾರಿ ಘಟನೆ ನಡೆದಿದ್ದು, ತರಗತಿಯಲ್ಲಿ ಕನಿಷ್ಠ 10 ವಿದ್ಯಾರ್ಥಿಗಳು ಹಾಜರಿದ್ದರು.

ಇನ್ನು ಒಬ್ಬ ಪುರುಷ ವಿದ್ಯಾರ್ಥಿ ತನ್ನ ತಲೆಯನ್ನ ವಿದ್ಯಾರ್ಥಿನಿಯ ತೊಡೆಯ ಮೇಲಿಡಲು ಅನುಮತಿಸುವುದನ್ನ ತಾನು ನೋಡಿದ್ದೇನೆ ಎಂದು ಶಿಕ್ಷಕರು ಹೇಳಿದರು. ಇನ್ನೀದು ಆತನನ್ನ ಕೆರಳಿಸಿದ್ದು, ವಿದ್ಯಾರ್ಥಿಯನ್ನ ವೇಶ್ಯೆ ಎಂಬ ಪದವನ್ನ ಒಳಗೊಂಡಂತೆ, ಅಸಭ್ಯವಾಗಿ ಬೈದಿದ್ದಾನೆ. ಇನ್ನು ಹದಿಹರೆಯದ ವಿದ್ಯಾರ್ಥಿನಿ ಮನೆಗೆ ಹೋಗಿ ಘಟನೆಯನ್ನ ತನ್ನ ಪೋಷಕರಿಗೆ ವಿವರಿಸಿದ್ದು, ಮರುದಿನ ಕುಟುಂಬಸ್ಥರು ಓಶಿವಾರ ಪೊಲೀಸ್ ಠಾಣೆಯಲ್ಲಿ ಬೋಧಕನ ವಿರುದ್ಧ ಎಫ್ ಐಆರ್ ದಾಖಲಿಸಿದರು.

ವಿದ್ಯಾರ್ಥಿನಿಯ ಪ್ರಕಾರ, ಆ ಹುಡುಗ ತನ್ನ ಪೆನ್ಸಿಲ್ ಕೆಳಗೆ ಬೀಳಿಸಿಕೊಂಡಿದ್ದು, ಅದನ್ನ ಎತ್ತಿಕೊಳ್ಳುವಾಗ ಅವನ ತಲೆ ಆಕೆಯ ತೊಡೆಗೆ ತಾಕಿದೆ. ಇನ್ನು ವಿದ್ಯಾರ್ಥಿನಿಯ ದೂರ ಆಧರಿಸಿ, ಬೋಧಕನ ವಿರುದ್ಧ ಐಪಿಸಿ ಸೆಕ್ಷನ್ 509 (ಮಹಿಳೆಯ ವಿನಯವನ್ನು ಅವಮಾನಿಸುವ ಉದ್ದೇಶದ ಕೃತ್ಯ, ಪದ ಅಥವಾ ಸನ್ನೆ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 12 (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...