ಬೆಂಗಳೂರಿನ ಈ ಏರಿಯಾಗಳಲ್ಲಿ 3 ದಿನ ಪವರ್ ಕಟ್

Date:

ಬೆಂಗಳೂರಿನ ಟೀಚರ್ಸ್​ ಕಾಲೋನಿ, ಶ್ರೀನಿವಾಸನಗರ, ಬ್ಯಾಂಕ್ ಕಾಲೋನಿ, ಕತ್ರಿಗುಪ್ಪೆ ಮುಂತಾದ ಏರಿಯಾಗಳಲ್ಲಿ ಇಂದು ಬೆಸ್ಕಾಂ ಮತ್ತು ಕೆಪಿಟಿಸಿಎಲ್​ನ ಕೇಬಲ್ ಕನ್ವರ್ಷನ್ ಕೆಲಸ ನಡೆಯುತ್ತಿರುವುದರಿಂದ ಇಂದು ಪವರ್ ಕಟ್ ಇರಲಿದೆ.

ಬಹುತೇಕ ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ (Work from Home) ಅಂತ್ಯವಾಗಿದ್ದರೂ ಕೆಲವು ಕಂಪನಿಗಳ ಉದ್ಯೋಗಿಗಳು ಇನ್ನೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂದಿನಿಂದ ಬುಧವಾರದವರೆಗೂ (ನ. 17) ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ (Power Cut) ಬೆಂಗಳೂರಿಗರು ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. 3 ದಿನಗಳ ಪವರ್ ಕಟ್ ಬಗ್ಗೆ ಬೆಸ್ಕಾಂ (BESCOM) ಮಾಹಿತಿ ನೀಡಿದೆ. ಹಾಗಾದರೆ, ಬೆಂಗಳೂರಿನ ಯಾವೆಲ್ಲ ಏರಿಯಾಗಳಲ್ಲಿ ಇಂದಿನಿಂದ 3 ದಿನ ಪವರ್​ ಕಟ್ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಟೀಚರ್ಸ್​ ಕಾಲೋನಿ, ಶ್ರೀನಿವಾಸನಗರ, ಬ್ಯಾಂಕ್ ಕಾಲೋನಿ, ಕತ್ರಿಗುಪ್ಪೆ ಮುಂತಾದ ಏರಿಯಾಗಳಲ್ಲಿ ಇಂದು ಬೆಸ್ಕಾಂ ಮತ್ತು ಕೆಪಿಟಿಸಿಎಲ್​ನ ಕೇಬಲ್ ಕನ್ವರ್ಷನ್ ಕೆಲಸ ನಡೆಯುತ್ತಿರುವುದರಿಂದ ಇಂದು ಪವರ್ ಕಟ್ ಇರಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಜಕ್ಕಸಂದ್ರ, ಹೆಚ್​ಎಸ್​ಆರ್​ ಸೆಕ್ಟರ್ 5, ಟೀಚರ್ಸ್ ಕಾಲೋನಿ, ವೆಂಕಟಾಪುರ ಭಾಗಗಳು, ಮೀನಾಕ್ಷಿ ಲೇಔಟ್, ಮೈಸೂರು ಬ್ಯಾಂಕ್ ಕಾಲೋನಿ, ಶ್ರೀನಿವಾಸನಗರ, ಕತ್ರಿಗುಪ್ಪೆ, ಆವಲಹಳ್ಳಿ, ಎಸ್​ಬಿಐ ಲೇಔಟ್, ಬಿಳೇಕಹಳ್ಳಿಯಲ್ಲಿ ಪವರ್ ಕಟ್ ಇರಲಿದೆ.

ನಾಳೆ ಅಂದರೆ ಮಂಗಳವಾರ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ 6, ಬಿಡಿಎ ಅಂಜನಾಪುರ, ವೀವರ್ಸ್ ಕಾಲೋನಿ, ಕೃಷ್ಣಪ್ಪ ಲೇಔಟ್, ಮೀನಾಕ್ಷಿ ಲೇಔಟ್, ಆವಲಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.

ಬುಧವಾರ (ನ. 17) ಹೆಚ್‌ಎಸ್‌ಆರ್ ಲೇಔಟ್ 17ನೇ ಕ್ರಾಸ್, ಅಂಜನಾಪುರ 3ನೇ ಬ್ಲಾಕ್, ಜಯರಾಮ ರೆಡ್ಡಿ ಲೇಔಟ್, ಜಿಬಿ ಪಾಳ್ಯ ರಸ್ತೆ, ರಾಘವನ ಪಾಳ್ಯ, ಆವಲಹಳ್ಳಿ, ಸಹಾರಾ ಬೇಕರಿ ರಸ್ತೆಯಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...