No menu items!
12.4 C
Munich
Wednesday, April 29, 2026

ಪುನೀತ್ ಓದಿಸುತ್ತಿದ್ದ ಮಕ್ಕಳ ಜವಾಬ್ದಾರಿ ಹೊತ್ತ ತಮಿಳುನಟ ವಿಶಾಲ್

Must read

ಮೈಸೂರಿನ ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಹೊರಲು ತಮಿಳು ನಟ ವಿಶಾಲ್ ಸಿದ್ಧರಾಗಿದ್ದಾರೆ. ಇಂದು ದಿ. ನಟ ಪುನೀತ್ ರಾಜ್‍ಕುಮಾರ್ ಮನೆಗೆ ಆಗಮಿಸಿದ ವಿಶಾಲ್, ಪುನೀತ್ ಪತ್ನಿ ಅಶ್ವಿನಿ ಬಳಿ ಈ ಬಗ್ಗೆ ಮನವಿ ಮಾಡಿಕೊಂಡರು.

ನಿನ್ನೆ ಶಿವರಾಜ್ ಕುಮಾರ್ ಜೊತೆ ಮಾತನಾಡಿದ್ದ ವಿಶಾಲ್ ಇಂದು ಪುನೀತ್ ಮನೆಗೆ ಆಗಮಿಸಿ ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಬಗ್ಗೆ ಅಶ್ವಿನಿ ಜೊತೆ ಪ್ರಸ್ತಾಪ ಮಾಡಿ ಅನುಮತಿ ಕೇಳಿದರು. ಕೆಲವೇ ದಿನಗಳಲ್ಲಿ ಈ ಬಗ್ಗೆ ತಿಳಿಸುವುದಾಗಿ ಅಶ್ವಿನಿ ಭರವಸೆ ನೀಡಿದರು.

1,800 ವಿದ್ಯಾರ್ಥಿಗಳ ಜವಾಬ್ದಾರಿ ಬಗ್ಗೆ ವಿಶಾಲ್, ಅಶ್ವಿನಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಶಿವಣ್ಣ ಬಳಿಯೂ ಈ ಬಗ್ಗೆ ಚರ್ಚೆ ನಡೆಸಿದರು. ಈ ಮೊದಲು ಅಪ್ಪು ಸಮಾಧಿ ಬಳಿ ತೆರಳಿದ ವಿಶಾಲ್ ಪೂಜೆ ಸಲ್ಲಿಸಿದರು.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article