ಮಂಚಕ್ಕೆ ಬಾರದ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಯುವತಿ

Date:

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನ ಖಾಸಗಿ ಅಂಗವನ್ನು ಚಾಕುವಿನಿಂದ ಕತ್ತರಿಸಿದ್ದಾಳೆ. ಕೃತ್ಯವೆಸಗಿದ ಬಳಿಕ ಪರಾರಿಯಾಗಿದ್ದ ಆಕೆ, ಪ್ರಿಯಕರನ ಕೋರಿಕೆಯ ಮೇರೆಗೆ ಮನೆಗೆ ವಾಪಸಾಗಿದ್ದು, ನೋವಿನಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ.

ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾದ ಪ್ರಿಯಕರ ಗೆಳತಿಯ ವಿರುದ್ಧ ಜೈಪುರದ ಭಂಕ್ರೋಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಯುವಕ ಮತ್ತು ಯುವತಿ ಇಬ್ಬರು ಯೋಗ ಶಿಕ್ಷಕರಾಗಿದ್ದಾರೆ. ಯುವಕ ಬಿಕಾನೇರ್ ನಿವಾಸಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಯೋಗ ತರಬೇತಿಯಲ್ಲಿದ್ದ. ಈ ವೇಳೆ ರೀಮಾ ಪರಿಚಯವಾಗಿ ಇಬ್ಬರ ನಡುವೆ ಗೆಳೆತನ ಬೆಳೆದಿದ್ದು, ಆಗಾಗ ಭೇಟಿಯಾಗುತ್ತಿದ್ದರು. ಮನೆಗೆ ಆತನನ್ನು ಕರೆಸಿಕೊಂಡು ಊಟ ಕೊಟ್ಟಿದ್ದ ರೀಮಾ, ನಂತರ ಆತನ ಮನೆಗೆ ಹೋಗಿದ್ದು, ಅದೇ ದಿನ ರಾತ್ರಿ ಖಾಸಗಿ ಅಂಗ ಕತ್ತರಿಸಿದ್ದಾಳೆ.

ಆಕೆ ಆಹಾರದಲ್ಲಿ ಅಮಲು ಪದಾರ್ಥ ನೀಡಿದ್ದು, ಅವನು ಪ್ರಜ್ಞೆ ಕಳೆದುಕೊಂಡಿದ್ದ ವೇಳೆ ಖಾಸಗಿ ಅಂಗ ಕತ್ತರಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಯುವಕನಿಗೆ ಪ್ರಜ್ಞೆ ಮರಳಿದ ಸಂದರ್ಭದಲ್ಲಿ ಬಟ್ಟೆ ಹರಿದಿದ್ದು, ಹಾಸಿಗೆಯ ಮೇಲೆ ರಕ್ತ ಚೆಲ್ಲಿತ್ತು. ಆತನಿಗೆ ತಡೆಯಲಾಗದ ನೋವಾಗಿತ್ತು. ಆತನೇ ರೀಮಾಗೆ ಕರೆ ಮಾಡಿದಾಗ ನನ್ನನ್ನು ಕ್ಷಮಿಸಿ ಎಂದು ಅಳುತ್ತಾ ಹೇಳಿದ ರೀಮಾ ಆತನ ಕೋರಿಕೆಯ ಮೇರೆಗೆ ಮನೆಗೆ ಹಿಂತಿರುಗಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಪ್ರಥಮ ಚಿಕಿತ್ಸೆಯ ನಂತರ ಸವಾಯ್ ಮಾನಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದು ಬಿಡುಗಡೆಯಾದ ನಂತರ ಭಂಕ್ರೋಟಾ ಪೊಲೀಸ್ ಠಾಣೆಗೆ ತೆರಳಿದ ಯುವಕ ರೀಮಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾನೆ.

ಘಟನೆಯ ನಂತರ ಆರೋಪಿ ಗೆಳತಿ ರೀಮಾ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಸ್ಥಳ ಪತ್ತೆ ಹಚ್ಚಲಾಗುತ್ತಿಲ್ಲ.

ಸಂತ್ರಸ್ತ ಯುವಕನ ಮಾಹಿತಿ ಪ್ರಕಾರ, ಆಕೆ ಅಮಲು ಪದಾರ್ಥ ನೀಡಿ ತನ್ನೊಂದಿಗೆ ತಪ್ಪಾಗಿ ಪ್ರಚೋದಿಸಿದ್ದಾಳೆ. ಅದಕ್ಕೆ ನಿರಾಕರಿಸಿದಾಗ ಇಂತಹ ಕೃತ್ಯ ಎಸಗಿದ್ದಾಳೆ. ಆದರೆ, ಪೊಲೀಸರ ಪ್ರಕಾರ, ರೀಮಾ ಸಿಕ್ಕಿಬಿದ್ದ ನಂತರವಷ್ಟೇ ಆಕೆ ಯಾಕೆ ಇಂತಹ ಕೃತ್ಯ ಎಸಗಿದ್ದಾಳೆ ಎಂಬುದು ಗೊತ್ತಾಗಲಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...