99 ರೂ ಇಯರ್ ಫೋನ್ ಗಾಗಿ 40 ಲಕ್ಷ ಕಳೆದುಕೊಂಡ ಮಹಿಳೆ!

Date:

ವರ್ಷದ ಹಿಂದಷ್ಟೇ ಅನಾರೋಗ್ಯದಿಂದ ಗಂಡನನ್ನು ಕಳೆದುಕೊಂಡ ಅವಿದ್ಯಾವಂತೆ ಮಹಿಳೆಯು ತನ್ನ ಮೂವರು ಮಕ್ಕಳ ಜವಬ್ದಾರಿಯನ್ನು ಹೊತ್ತಿದ್ದಳು. ಆಕೆಗೆ ಗಂಡ ಮಾಡಿಸಿದ್ದ ಜೀವ ವಿಮೆಯೇ ಆಸರೆಯಾಗಿತ್ತು.

ಆದರೆ, ಕಡಿಮೆ ಬೆಲೆಗೆ ಇಯರ್​ ಫೋನ್ ಖರೀದಿಸುವ ಆಸೆಗೆ ಬಿದ್ದ ಮಹಿಳೆ ತನ್ನ ಎರಡು ಬ್ಯಾಂಕ್​ ಖಾತೆಗಳಲ್ಲಿದ್ದ 33 ಲಕ್ಷ ರೂ. ಹಣವನ್ನು ಕ​ಳೆದುಕೊಂಡ ಕಂಗಾಲಾಗಿದ್ದಾಳೆ. ಸೈಬರ್​ ಖದೀಮರ ಜಾಲಕ್ಕೆ ಸುಲಭವಾಗಿ ಬಿದ್ದ ಮಹಿಳೆ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.

32 ವರ್ಷದ ಕಾರ್ಮಿಕ ಗುತ್ತಿದಾಗ ಮೌಲಾಲಿ ಕಳೆದ ನವೆಂಬರ್​ನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ. ಬದುಕಿರುವಾಗಲೇ ಮೌಲಾಲಿ ವಿಮೆ ಮಾಡಿಸಿದ್ದರಿಂದ ಆತನ ಪತ್ನಿಗೆ ವಿಮಾ ಕಂಪನಿಯಿಂದ 50 ಲಕ್ಷ ರೂ. ಹಣ ಸಿಕ್ಕಿತ್ತು. ಹಣ ಮಡೆದಿದ್ದ ಮಹಿಳೆ ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಸ್ಥಿರ ಠೇವಣಿ ಇಟ್ಟಿದ್ದಳು. ಉಳಿದ ಹಣವನ್ನು ಎರಡು ಬ್ಯಾಂಕ್​ ಖಾತೆಗಳಲ್ಲಿ ಇಟ್ಟಿದ್ದಳು. ಹೀಗಿರುವಾಗ ಆಕೆಯ 8ನೇ ತರಗತಿಯ ಮಗಳು ತಾಯಿಯ ಮೊಬೈಲ್​ ತೆಗೆದುಕೊಂಡು ಆನ್​ಲೈನ್​ ಕ್ಲಾಸ್​ ಸಲುವಾಗಿ ಆನ್​ಲೈನ್​ನಲ್ಲಿ ಹೆಡ್​ಫೋನ್​ ಬುಕ್​ ಮಾಡಲು ಮುಂದಾಗಿದ್ದಳು. ಆದರೆ, ಬೆಲೆ ಹೆಚ್ಚಾಗಿದ್ದರಿಂದ ತಾಯಿ ಬೇಡ ಎಂದಿದ್ದಕ್ಕೆ ಸುಮ್ಮನಾಗಿದ್ದಳು. ಆದರೆ, ವೆಬ್​ಸೈಟ್​ ಒಂದಲ್ಲಿ ಕೇವಲ 99 ರೂ. ಹೆಡ್​ಫೋನ್​ ಸಿಗುತ್ತದೆ ಎಂಬುದನ್ನು ನೋಡಿದ ಆಕೆ ಹಿಂದು-ಮುಂದು ನೋಡದೇ ಬುಕ್​ ಮಾಡಿ ಇಯರ್​ ಫೋನ್​ ಖರೀದಿಸಿದ್ದಳು.

ಇದಾದ ಕೆಲವು ದಿನಗಳ ನಂತರ ಮಹಿಳೆ ಹಣ ತರಲೆಂದು ಬ್ಯಾಂಕ್​ಗೆ ಹೋಗಿದ್ದಾಳೆ. ಆದರೆ, ಎರಡು ಬ್ಯಾಂಕ್​ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್​ ತೋರಿದ್ದನ್ನು ನೋಡಿ ಮಹಿಳೆ ಶಾಕ್​ ಆಗಿದ್ದಾಳೆ. ಕೇವಲ 15 ದಿನದಲ್ಲೇ ಆಕೆಯ ಖಾತೆಯಿಂದ ಒಟ್ಟು 33 ಲಕ್ಷ ರೂ. ನಾಪತ್ತೆಯಾಗಿದೆ. ಇದರಿಂದ ಗಾಬರಿಗೊಂಡ ಮಹಿಳೆ ರಾಚಕೊಂಡ ಸೈಬರ್​ ಕ್ರೈಂ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಬ್ಯಾಂಕ್​ ಖಾತೆಯನ್ನು ಪರಿಶೀಲಿಸಿದಾಗ ಸೈಬರ್​ ಖದೀಮರು ಆಕೆಯ ಎರಡು ಬ್ಯಾಂಕ್​ ಖಾತೆಗಳನ್ನು ಹ್ಯಾಕ್​ ಮಾಡಿ ಹಣ ಎಗರಿಸಿರುವುದು ಗೊತ್ತಾಗಿದೆ.

ಆಗಿದ್ದೇನು?
ಇಯರ್​ ಫೋನ್​ ಖರೀದಿಸಿದ ಬಳಿಕ ಅಶೋಕ್​ ಎಂಬ ವ್ಯಕ್ತಿ ಮಹಿಳೆಯ ನಂಬರ್​ಗೆ ಕರೆ ಮಾಡಿದ್ದಾನೆ. ನೀವು ಆನ್​ಲೈನ್​ನಲ್ಲಿ ಇಯರ್​ ಫೋನ್​ ಖರೀದಿಸಿದ್ದಕ್ಕೆ ನಿಮಗೆ 15 ಲಕ್ಷ ಮೌಲ್ಯದ ಕಾರು ಬಹುಮಾನವಾಗಿ ಬಂದಿದೆ. ನಿಮಗೆ ಕಾರು ಬೇಡವಾದರೆ ಹಣವನ್ನು ಪಡೆಯಬಹುದು. ನಾವು ಕಳುಹಿಸಿರುವ ಎಸ್​ಎಂಎಸ್​ ಅನ್ನು ಕ್ಲಿಕ್​ ಮಾಡಿ ಬ್ಯಾಂಕ್​ ಖಾತೆಯ ಮಾಹಿತಿಯನ್ನು ಅಪ್​ಲೋಡ್​ ಮಾಡಿ ಬಹುಮಾನದ ಮೊತ್ತವನ್ನು ನಿಮ್ಮ ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದಾನೆ. ತಾನು ಅವಿದ್ಯಾವಂತೆ ಆಗಿದ್ದರಿಂದ ಮಗಳ ಕೈಗೆ ಫೋನ್​ ನೀಡಿದ್ದಾಳೆ.

ಇತ್ತ ಕರೆ ಮಾಡಿದವನ ಮಾತಿಗೆ ಮರುಳಾದ ಮಹಿಳೆ ಮತ್ತು ಆಕೆಯ ಮಗಳು ಎನಿ ಡೆಸ್ಕ್​ ಆಯಪ್​ ಡೌನ್​ಲೋಡ್​ ಮಾಡಿ ಸೈಬರ್​ ಖದೀಮರು ಹೇಳಿದಂತೆ ತಮ್ಮ ಬ್ಯಾಂಕ್​ ಖಾತೆಯ ಮಾಹಿತಿ, ಡೆಬಿಟ್​ ಕಾರ್ಡ್​ ಮತ್ತು ಒಟಿಪಿಯನೆಲ್ಲಾ ನೀಡಿದ್ದಾರೆ. ಅವರು ಹೇಳಿದ ಎಲ್ಲ ಮಾಹಿತಿಯನ್ನು ಇಂಟರ್ನೆಟ್​ ಬ್ಯಾಂಕಿಂಗ್​ನಲ್ಲಿ ನಮೂದಿಸಿದ ಬಿಹಾರದ ಸೈಬರ್​ ಗ್ಯಾಂಗ್​ ಮೊದಲು ಖಾತೆಯ ಫೋನ್​ ನಂಬರ್​ ಬದಲಾಯಿಸಿ, ಬಳಿಕ ಫೋನ್​ ಪೇ ಮತ್ತು ಗೂಗಲ್​ ಪೇ ಅನ್ನು ಡೌನ್​ಲೋಡ್​ ಮಾಡಿಕೊಂಡು ಖಾತೆಯಲ್ಲಿ ಹಣವನ್ನೆಲ್ಲ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಇದಿಷ್ಟು ಕೃತ್ಯವನ್ನು ಬಿಹಾರದಿಂದ ಎಸಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ. ಒಟಿಪಿ, ಡೆಬಿಟ್​ ಕಾರ್ಡ್​ ನಂಬರ್​ ಅನ್ನು ಯಾರೇ ಕೇಳಿದರೂ ಸ್ವತಃ ಬ್ಯಾಂಕ್​ನವರು ಕೇಳಿದರೂ ಕೊಡಬೇಡಿ ಎಂದು ಬ್ಯಾಂಕ್​ನವರು ಎಷ್ಟು ಬಾರಿ ಹೇಳಿದರೂ ಕೇಳದೇ ಎಲ್ಲವನ್ನು ನೀಡಿ ಇದೀಗ ಹಣ ಕಳೆದುಕೊಂಡು ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ

Share post:

Subscribe

spot_imgspot_img

Popular

More like this
Related

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ: ವಿಜಯೇಂದ್ರ

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ:...

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು ಎಷ್ಟಿದೆ ದರ?

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು...

ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ

ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ ಬೆಂಗಳೂರು:...

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ!

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ! ನಿಂಬೆಹಣ್ಣು ಕೇವಲ ರಸಕ್ಕಾಗಿ...