ಸೌತ್ ಆಫ್ರಿಕಾದಲ್ಲಿ ಹುಟ್ಟಿರುವ ಓಮಿಕ್ರಾನ್ ವೈರಸ್ ಈಗ ಇಡೀ ಜಗತ್ತನ್ನು ಚಿಂತೆಗೆ ಈಡು ಮಾಡಿದೆ. ಓಮಿಕ್ರಾನ್ ವೈರಸ್ ಜನಸಮೂಹಕ್ಕೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವ ಸಲುವಾಗಿ ಈಗಾಗಲೇ ಹಲವು ದೇಶಗಳು ವಿಮಾನಯಾನ ಸಂಚಾರ ಬಂದ್ ಮಾಡಿದ್ದು, ಹಲವು ಕಟ್ಟು ನಿಟ್ಟಿನ ಆದೇಶಗಳನ್ನು ಹೊರಡಿಸಿದೆ.
ಓಮಿಕ್ರಾನ್ ರೂಪಾಂತರ ವೈರಸ್ ಬಗ್ಗೆ ರಾಜ್ಯ ಸರ್ಕಾರದ ಕ್ರಮ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶಾಲಾ-ಕಾಲೇಜ್ಗಳಲ್ಲಿ ಕೋವಿಡ್ ಬಗ್ಗೆ ನಿಗಾವಹಿಸಿ ಅಂತ ಸೂಚನೆ ನೀಡಲಾಗಿದ್ದು, ರಜೆ ನೀಡುವ ಅಗತ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು, ಈಗಾಗಲೇ ಈ ಬಗ್ಗೆ ಕೇಂದ್ರ ಸರ್ಕಾರದ ಬಳಿ ಮಾತನಾಡಲಾಗಿದೆ ಅಂತ ಹೇಳಿದರು. ಇನ್ನೂ ಲಾಕ್ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಜನ ಆತಂಕ ಪಡುವ ಅಗತ್ಯವಿಲ್ಲ ಹೇಳಿದರು.