No menu items!
12.4 C
Munich
Wednesday, April 29, 2026

ಅಪ್ಪು ಅಗಲಿ ಒಂದು ತಿಂಗಳು; ಈಗಲೂ ಹರಿದು ಬರ್ತಿದೆ ಜನಸಾಗರ

Must read

ಅ.29ರಂದು ಅಪ್ಪು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅದನ್ನು ಯಾರಿಂದಲೂ ನಂಬಲು ಸಾಧ್ಯವಾಗಿರಲಿಲ್ಲ. ಅಭಿಮಾನಿಗಳು ಮತ್ತು ಕುಟುಂಬದವರು ಈಗ ನೋವಿನ ಜೊತೆಯಲ್ಲಿಯೇ ಜೀವನ ಮುಂದುವರಿಸುವುದು ಅನಿವಾರ್ಯವಾಗಿದೆ.

ಅಪ್ಪು ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡು, ಮುಂದಿನ ಕಾರ್ಯಗಳನ್ನು ಮಾಡಲಾಗುತ್ತಿದೆ. ಪುನೀತ್ ನೋಡಿಕೊಳ್ಳುತ್ತಿದ್ದ ‘ಪಿಆರ್ ಕೆ ಪ್ರೊಡಕ್ಷನ್ಸ್’, ‘ಪಿಆರ್ ಕೆ ಆಡಿಯೋ’, ‘ಶಕ್ತಿಧಾಮ’ ಸೇರಿದಂತೆ ಹಲವು ಸಂಸ್ಥೆಗಳ ಜವಾಬ್ದಾರಿಗಳನ್ನು ಅವರ ಕುಟುಂಬ ನಿಭಾಯಿಸುತ್ತಿದೆ. ಅಪ್ಪು ಅಗಲಿ ಇಂದಿಗೆ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಕುಟುಂಬದವರು ಕಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

ಪ್ರತಿದಿನ ಪುನೀತ್ ಸಮಾಧಿ ದರ್ಶನಕ್ಕೆ ಸಾವಿರಾರ ಜನರು ಆಗಮಿಸುತ್ತಲೇ ಇದ್ದಾರೆ. ಪುನೀತ್ ನಿಧನರಾಗಿ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

ಹೃದಯಾಘಾತದಿಂದ ಮೃತರಾಗುವುದಕ್ಕೂ ಮುನ್ನ ಪುನೀತ್ ರಾಜ್ಕುಮಾರ್ ಅವರು ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಆ ಚಿತ್ರಗಳು ತೆರೆ ಕಾಣುವುದಕ್ಕೂ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದು ವಿಪರ್ಯಾಸ. ಪುನೀತ್ ನಟಿಸುತ್ತಿದ್ದ ಒಂದೆರಡು ಚಿತ್ರದ ಕೆಲಸಗಳು ಪೂರ್ಣಗೊಂಡಿವೆ ಎಂಬುದು ಸಮಾಧಾನಕರ ಸಂಗತಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article