ಎಚ್‌ಐವಿ ಮತ್ತು ಏಡ್ಸ್ ಕುರಿತು ಜಾಗೃತಿ(Awareness on HIV and AIDS) ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ(World AIDS Day)ವನ್ನ ಆಚರಿಸಲಾಗುತ್ತದೆ. ವಾಸ್ತವವಾಗಿ, HIVಯ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳಲು ಹಲವು ವರ್ಷಗಳು ತೆಗೆದುಕೊಳ್ಳಬಹುದು.
ಆದ್ರೆ, ಮೂರನೇ ಎರಡರಷ್ಟು ಜನರು ವೈರಸ್‌ಗೆ ಒಡ್ಡಿಕೊಂಡ ಎರಡು ವಾರಗಳಲ್ಲಿ HIVಯ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ವೆ. ಜನರು ಅವುಗಳನ್ನ ಸಾಮಾನ್ಯ ಕಾಯಿಲೆಗಳೆಂದು ನಿರ್ಲಕ್ಷಿಸುತ್ತಾರೆ ನಂತ್ರ ಈ ವೈರಸ್ ಏಡ್ಸ್ ಕಾರಣವಾಗುತ್ತದೆ.
HIV/AIDSನ ಆರಂಭಿಕ ಲಕ್ಷಣಗಳು..!
HIV.gov ಪ್ರಕಾರ, ಈ ಕೆಳಗಿನ ಲಕ್ಷಣಗಳು ಸಾಮಾನ್ಯ ಸಮಸ್ಯೆಗಳಾಗಿರಬಹುದು. ಆದ್ರೆ, ನೀವು ಇತ್ತೀಚೆಗೆ ಎಚ್‌ಐವಿ/ಏಡ್ಸ್‌ನ ಯಾವುದೇ ಕಾರಣಕ್ಕೆ ತುತ್ತಾಗಿದ್ರೆ, ಈ ರೋಗಲಕ್ಷಣಗಳನ್ನ ಅನುಭವಿಸುತ್ತಿದ್ದರೆ, ತಕ್ಷಣವೇ ಎಚ್‌ಐವಿ ಪರೀಕ್ಷೆಯನ್ನ ಮಾಡಿಸಿಕೊಳ್ಳಿ.
ಜ್ವರ : HIV ಸೋಂಕಿಗೆ ಒಳಗಾದಾಗ, ರೋಗಿಯು 2 ರಿಂದ 4 ವಾರಗಳಲ್ಲಿ ಜ್ವರ ತರಹದ ಲಕ್ಷಣಗಳನ್ನ ತೋರಿಸಲು ಪ್ರಾರಂಭಿಸುತ್ತಾನೆ. ಇದರಿಂದಾಗಿ ನೀವು ತಲೆನೋವು, ಜ್ವರ, ಶಕ್ತಿಯ ಕೊರತೆಯಂತಹ ಸಾಮಾನ್ಯ ಸಮಸ್ಯೆಗಳನ್ನ ಅನುಭವಿಸಬಹುದು.
ದುರ್ಬಲತೆ : HIV ಅಂದ್ರೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ದೇಹವು ಸೋಂಕಿನಿಂದ ರಕ್ಷಿಸಿಕೊಳ್ಳುವಲ್ಲಿ ದುರ್ಬಲಗೊಳ್ಳುತ್ತದೆ. ಈ ಕಾರಣದಿಂದಾಗಿ, ನೀವು ನ್ಯುಮೋನಿಯಾ ಅಥವಾ ಇತರ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನ ಮತ್ತೆ ಮತ್ತೆ ಪಡೆಯಲು ಪ್ರಾರಂಭಿಸುತ್ತೀರಿ. ಇದರೊಂದಿಗೆ ಟಿಬಿ, ಕಿಡ್ನಿ, ಶ್ವಾಸಕೋಶ ಇತ್ಯಾದಿಗಳ ದೀರ್ಘಕಾಲದ ಸೋಂಕು ಕೂಡ ಇರಬಹುದು.
ಜ್ವರದೊಂದಿಗೆ ರಾತ್ರಿ ಬೆವರುವಿಕೆ : HIVಯ ಸಾಮಾನ್ಯ ರೋಗಲಕ್ಷಣಗಳು ಜ್ವರದೊಂದಿಗೆ ರಾತ್ರಿ ಬೆವರುವುದನ್ನ ಒಳಗೊಂಡಿರುತ್ತವೆ. ಈ ಜ್ವರವು ತುಂಬಾ ಸೌಮ್ಯವಾಗಿರಬಹುದು. ಇನ್ನು ಇದರ ಹಿಂದಿನ ಕಾರಣವೆಂದ್ರೆ, ದೇಹದಲ್ಲಿ ಏನಾದರೂ ತಪ್ಪು ಸಂಭವಿಸಿದಾಗ, ದೇಹದ ಉಷ್ಣತೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ.
4. ಊದಿಕೊಂಡ ದುಗ್ಧರಸ ಗ್ರಂಥಿಗಳು : ದುಗ್ಧರಸ ಗ್ರಂಥಿಗಳು ಕುತ್ತಿಗೆ, ತಲೆಯ ಹಿಂಭಾಗ, ಆರ್ಮ್ಪಿಟ್ಗಳು ಮುಂತಾದ ದೇಹದ ವಿವಿಧ ಭಾಗಗಳಲ್ಲಿ ನೆಲೆಗೊಂಡಿವೆ. ಇದು ದೇಹದಲ್ಲಿನ ಯಾವುದೇ ಸೋಂಕನ್ನ ನಾಶಪಡಿಸಲು ಸಹ ಸಹಾಯ ಮಾಡುತ್ತೆ. ದೇಹದಲ್ಲಿ ಎಚ್‌ಐವಿ ಸೋಂಕು ಪ್ರಾರಂಭವಾದಾಗ, ದುಗ್ಧರಸ ಗ್ರಂಥಿಗಳು ಹೈಪರ್‌ಆಕ್ಟಿವ್ ಆಗುತ್ತವೆ ಮತ್ತು ಹಿಗ್ಗುತ್ತವೆ.
5. ಚರ್ಮದ ದದ್ದುಗಳು : HIV ಸೋಂಕಿಗೆ ಒಳಗಾದ ನಂತರ, ಹೆಚ್ಚಿನ ಜನರು ಚರ್ಮದ ದದ್ದುಗಳು ಅಥವಾ ಚರ್ಮದ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಇದು HIV/AIDSನ ಸಾಮಾನ್ಯ ಲಕ್ಷಣವಾಗಿದೆ.
ಎಚ್‌ಐವಿಯ ಈ ಸಾಮಾನ್ಯ ಲಕ್ಷಣಗಳನ್ನು ನಿರ್ಲಕ್ಷಿಸಿದರೆ, ವೈರಸ್ ಏಡ್ಸ್‌ಗೆ ಕಾರಣವಾಗಬಹುದು. ಇದರ ನಂತ್ರ ಪಿರಿಯಡ್ಸ್ ಬದಲಾವಣೆ, ತೂಕ ಇಳಿಕೆ, ಕೀಲು ನೋವು, ಉಸಿರಾಟದ ತೊಂದರೆ, ದೀರ್ಘಕಾಲದ ಕೆಮ್ಮು, ಅಲ್ಪಾವಧಿಯ ಸ್ಮರಣೆ ನಷ್ಟ, ಗೊಂದಲ, ಕೋಮಾ ಮುಂತಾದ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳಬಹುದು.