ಪ್ರೀತಿಸಿ ಮದುವೆಯಾದ 65 ವರ್ಷದ ವೃದ್ಧ ಜೋಡಿ

Date:

ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬುದಕ್ಕೆ ಈ ಮದುವೆಯೇ ಸಾಕ್ಷಿ.

ಅವರಿಬ್ಬರ ವಯಸ್ಸು 65. ಆದರೂ ಜೀವನ ಪ್ರೀತಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಪ್ರೇಯಸಿಗಾಗಿ ಬರೋಬ್ಬರಿ ಮೂವತೈದು ವರ್ಷ ಕಾದ ಪ್ರಿಯಕರ ಕೊನೆಗೂ ತಾನು ಇಷ್ಟಪಟ್ಟಾಕೆಯೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಇಂತಹ ಅಪರೂಪದ ಮದುವೆ ಮೇಲುಕೋಟೆಯಲ್ಲಿ ಗುರುವಾರ ನಡೆದಿದ್ದು, 65 ವರ್ಷ ಇಳಿವಯಸ್ಸಿನ ವೃದ್ಧಜೋಡಿ ಹಸೆಮಣೆ ಏರಿದ ಫೋಟೋ ವೈರಲ್​ ಆಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ ಜೋಡಿಯ ಹೆಸರು ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ ಮತ್ತು ಜಯಮ್ಮ. ಮೂವತ್ತೈದು ವರ್ಷಗಳ ಬಳಿಕ ಲವ್ ಸಕ್ಸಸ್ ಆದ ಖುಷಿ ಚಿಕ್ಕಣ್ಣರ ಮುಖದಲ್ಲಿ ಗೋಚರಿಸುತ್ತಿತ್ತು.

ಜಯಮ್ಮಗೆ ಈ ಹಿಂದೆ ಬೇರೊಬ್ಬರೊಂದಿಗೆ ಮದುವೆ ಆಗಿತ್ತು. ಆದರೆ ಮಕ್ಕಳು ಇರಲಿಲ್ಲ. ಜಯಮ್ಮರನ್ನು ಗಂಡ ಬಿಟ್ಟು ಹೋಗಿದ್ದ. ಅತ್ತ ಜಯಮ್ಮರನ್ನು ಪ್ರೀತಿಸುತ್ತಿದ್ದರು ಚಿಕ್ಕಣ್ಣ, ಆಕೆಯ ನೆನಪಲ್ಲೇ ಬರೋಬ್ಬರಿ 35 ವರ್ಷ ಕಳೆದರು. ಕೊನೆಗೂ ಜಯಣ್ಣರ ಪ್ರೀತಿಗೆ ಕರಗಿದ ದೇವರು ಅಸ್ತು ಎಂದಿದ್ದು, 35 ವರ್ಷದ ನಂತರ ಲವ್ ಸಕ್ಸಸ್ ಆಗಿದೆ.

ಇವರಿಬ್ಬರೂ ಪರಸ್ಪರ ಒಪ್ಪಿ ಮೇಲುಕೋಟೆ ಶ್ರೀ ಚೆಲುವರಾಯಸ್ವಾಮಿ ದೇವಾಲಯ ‌ಮುಂಭಾಗದ ಶ್ರೀನಿವಾಸ್ ಗುರುಜೀ ಅವರ ಆಶ್ರಮದಲ್ಲಿ ಗುರುವಾರ ಮದುವೆ ಆದರು. ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...