ಹಿರಿಯ ನಟ ಶಿವರಾಂ ಅವರು ವಿಧಿವಶರಾದ ಹಿನ್ನೆಲೆ, ನಟ & ನಿರ್ದೇಶಕ ರಮೇಶ್ ಅರವಿಂದ್ ಅವರು ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾತನಾಡಿದ ಅವರು, ಶಿವರಾಮಣ್ಣ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಶೂಟಿಂಗ್ ನಲ್ಲೂ ತುಂಬಾ ಸಮಯ ಪಾಲನೆ ಮಾಡುತ್ತಿದ್ದರು.
ಅವರಿಗೆ ಸಾಹಿತ್ಯದಲ್ಲಿ ಹೆಚ್ಚು ಒಲವಿದ್ದು, ಅವರ ಕೊಡುಗೆ ಚಿತ್ರರಂಗಕ್ಕೆ ಅಪಾರವಾಗಿದೆ. ಅವರ ಅಗಲಿಕೆ ನೋವು ತುಂಬಾ ದುಖಃ ತಂದಿದ್ದು, ಈ ದುಖಃವನ್ನು ತಡೆದುಕೊಳ್ಳುವ ಶಕ್ತಿಯನ್ನು ಅಭಿಮಾನಿಗಳಿಗೆ & ಕುಟುಂಬದವರಿಗೆ ದೇವರು ನೀಡಲಿ ಎಂದು ನಟ ರಮೇಶ್ ಅರವಿಂದ್ ಭಾವುಕರಾಗಿದ್ದಾರೆ.