ಪಾಕಿಸ್ತಾನದಲ್ಲಿ ಧರ್ಮ ನಿಂದನೆ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯನ್ನು ಹತ್ಯೆ ಮಾಡಲಾಗಿದೆ. ಪಂಜಾಬ್ ಪ್ರಾಂತ್ಯದ ಫ್ಯಾಕ್ಟರಿಯೊಂದಕ್ಕೆ ನುಗ್ಗಿದ ಕಟ್ಟರ್ವಾದಿ ಇಸ್ಲಾಮಿಕ್ ಸಂಘಟನೆ ತೆಹ್ರೀಕ್ ಇ ಲಬ್ಬೈಕ್ ಬೆಂಬಲಿಗರು ಶ್ರೀಲಂಕಾದ ಪ್ರಜೆ ಪ್ರಿಯಾಂತ ಕುಮಾರನನ್ನು ಟಾರ್ಗೆಟ್ ಮಾಡಿದ್ದಾರೆ.
ಆತನನ್ನು ಹತ್ಯೆ ಮಾಡಿ, ಶವವನ್ನು ಸುಟ್ಟುಹಾಕಿದ್ದಾರೆ. 40 ವರ್ಷದ ಪ್ರಿಯಾಂತ ಕುಮಾರ ಸಿಯಾಲ್ಕೋಟ್ ಜಿಲ್ಲೆಯ ಫ್ಯಾಕ್ಟರಿಯೊಂದ್ರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ರು. ಅಂದಹಾಗೆ ಈ ಫ್ಯಾಕ್ಟರಿಯ ಗೋಡೆ ಮೇಲೆ ತೆಹ್ರೀಕ್ ಇ ಲಬ್ಬೈಕ್ ಪಾಕಿಸ್ತಾನ್ ಸಂಘಟನೆಯ ಪೋಸ್ಟರ್ ಅಂಟಿಸಲಾಗಿತ್ತು. ಅದ್ರಲ್ಲಿ ಕುರಾನ್ನ ಕೆಲವೊಂದು ಸಾಲುಗಳನ್ನು ಕೂಡ ಉಲ್ಲೇಖಿಸಲಾಗಿತ್ತು. ಆದ್ರೆ ಪ್ರಿಯಾಂತ ಕುಮಾರ ಆ ಪೋಸ್ಟರ್ನ್ನು ಹರಿದು ಡಸ್ಟ್ಬಿನ್ಗೆ ಹಾಕಿದ್ರು. ಈ ವೇಳೆ ಫ್ಯಾಕ್ಟರಿಯ ಕೆಲ ಕಾರ್ಮಿಕರು ಇದನ್ನ ಗಮನಿಸಿದ್ರು. ನಂತರ ಈ ವಿಚಾರ ಎಲ್ಲೆಡೆ ಹರಡಿ, ಸಂಘಟನೆಯ ನೂರಾರು ಬೆಂಬಲಿಗರು ಫ್ಯಾಕ್ಟರಿಗೆ ಬಂದು ಈ ಕೃತ್ಯ ಎಸಗಿದ್ದಾರೆ. ಶವದ ಸುತ್ತಲೂ ಸಂಘಟನೆಯ ಸದಸ್ಯರು ನಿಂತು ಘೋಷಣೆಗಳನ್ನು ಕೂಗುತ್ತಿರೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಸಂಬಂಧ ಪ್ರತಿಕ್ರಿಯಿಸಿರೋ ಪ್ರಧಾನಿ ಇಮ್ರಾನ್ ಖಾನ್, ಈ ಪ್ರಕರಣದ ತನಿಖೆಯನ್ನು ನಾನೇ ಮೇಲ್ವಿಚಾರಣೆ ಮಾಡ್ತೀನಿ. ಇದೊಂದು ಭಯಾನಕ ದಾಳಿಯಾಗಿದ್ದು, ಇಡೀ ಪಾಕಿಸ್ತಾನಕ್ಕೇ ಅವಮಾನದ ದಿನ. ತಪ್ಪಿತಸ್ಥರು ಯಾರೇ ಆಗಿದ್ರೂ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುತ್ತೆ ಅಂತ ಹೇಳಿದ್ದಾರೆ. ಆದ್ರೆ ಇದೇ ಇಮ್ರಾನ್ ಖಾನ್ ಸರ್ಕಾರ ತೆಹ್ರೀಕ್ ಇ ಲಬ್ಬೈಕ್ ಸಂಘಟನೆ ಜೊತೆ ಕಳೆದ ತಿಂಗಳು ಸೀಕ್ರೆಟ್ಟಾಗಿ ಒಪ್ಪಂದ ಮಾಡ್ಕೊಂಡಿತ್ತು. ಬಳಿಕ ಸಂಘಟನೆಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ, ಅದ್ರ ಮುಖ್ಯಸ್ಥ ಸಾದ್ ರಿಜ್ವಿ ಸೇರಿದಂತೆ 1500 ಮಂದಿ ಸದಸ್ಯರನ್ನು ರಿಲೀಸ್ ಮಾಡಿತ್ತು. ಈಗ ಅದೇ ಸಂಘಟನೆ ಈ ಕೃತ್ಯ ಎಸಗಿದೆ. ಇಮ್ರಾನ್ ಖಾನ್ ಅವರ ವಿರುದ್ಧ ಕ್ರಮ ಕೈಗೊಳ್ಳೋ ಮಾತಾಡ್ತಿದ್ದಾರೆ.