ತನ್ನ ತಾಯಿಯ ಮೃತ್ಯುವಿನ ಅರಿವಿರದ ಪುಟ್ಟ ಆನೆ ಮರಿಯು ತನ್ನ ತಾಯಿಯನ್ನು ಜೀವಂತಗೊಳಿಸಲು ಮಾಡಿದ ಶತ ಪ್ರಯತ್ನ.
ಸೋಷಲ್ ಮೀಡಿಯಾದಲ್ಲಿ ಮನ ಮುಟ್ಟುವ ಒಂದು ವೀಡಿಯೋ ವೈರಲ್ ಆಗುತ್ತಿದೆ.ಈ ವೀಡಿಯೋದಲ್ಲಿ ತನ್ನ ತಾಯಿಯ ಮೃತ್ಯುವಿನ ಬಳಿಕ ಅದರ ಕಂದ ಅದನ್ನು ಜೀವಂತವಾಗಿಡಲು ಹರ ಸಾಹಸ ಪಡುತ್ತಿರೋ ದೃಶ್ಯ…ಎಂತಹದೇ ವ್ಯಕ್ತಿಯನ್ನಾದರೂ ಕ್ಷಣ ವಿಚಲಿತನನ್ನಾಗಿಸದೇ ಬಿಡದು.ಪುಟ್ಟ ಆನೆ ಮರಿ ಅದರ ತಾಯಿಯನ್ನು ಸೊಂಡಿಲಿಂದ ತಟ್ಟುತ್ತದೆ,ಕಿವಿಗೆ ಗಾಳಿ ಊದುತ್ತದೆ,ನಾಲ್ಕೂ ಕಡೆಗಳಿಂದಲೂ ದೂಡಿ ತನ್ನ ತಾಯಿಯನ್ನು ಎಬ್ಬಿಸಲು ನೋಡುತ್ತದೆ,ಆದರೆ ತಾಯಿ ಏಳುತ್ತಿಲ್ಲ.ಏನಿದು ನೋಡೋಣ!
ಇದು ಕೇರಳದ ಪಲ್ಲಂ ಜಿಲ್ಲೆಯಲ್ಲಿ ಸಂಭವಿಸಿದ ಘಟನೆ.25 ವರುಷದ ಆನೆಯು ತನ್ನ 2 ವರುಷದ ಮರಿ ಆನೆಯೊಂದಿಗೆ ಕವಾಡಿಮಲ್ ದೇವಸ್ಥಾನದ ಹಾದಿಯಾಗಿ ಹೋಗುತ್ತಿತ್ತು.ಅಚಾನಕ್ಕಾಗಿ ಆ ಆನೆಯು ಕೆಳಗೆ ಬಿತ್ತು.ಮರಿ ಆನೆಯು ತಯಿಯನ್ನು ಎಬ್ಬಿಸಲು ಎಷ್ಟೊ ಪ್ರಯತ್ನ ಮಾಡಿತು,ಆದ್ರೆ ಯಾವುದೂ ಪ್ರಯೋಜನವಾಗಲಿಲ್ಲ.ಈ ನಡುವೆ ವನ ವಿಭಾಗದ ಸಿಬ್ಬಂದಿಗಳು ಬಂದರು ಮರಿ ಆನೆ ಯಾರನ್ನೊ ತನ್ನ ತಾಯಿಯ ಬಳಿ ಸುಳಿಯ ಬಿಡಲಿಲ್ಲ.
ತುಂಬಾ ಹೊತ್ತಿನ ಪ್ರಯತ್ನಗಳ ಬಳಿಕವಷ್ಟೇ ಮರಿಯನ್ನು ತಾಯಿಯಿಂದ ಬೇರ್ಪಡಿಸಲಾಯಿತು.ಡಾಕ್ಟರ್ ಪರೀಕ್ಷೆಯ ಬಳಿಕ ದೇಹದೊಳಗೆ ಆದ ಗಾಯದಿಂದ ಈ ರೀತಿಯಾಗಿ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.ನಿಮ್ಮನ್ನು ತಲ್ಲಣಗೊಳಿಸುವ ಈ ವೀಡಿಯೋ ನೋಡಿ.
POPULAR STORIES :
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!