4 ವರ್ಷದ ಪ್ರೀತಿ, ಮದುವೆ, ಯುವತಿ ಆತ್ಮಹತ್ಯೆ, ಡೆತ್‌ನೋಟ್!

Date:

ಸತತ ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸಿ, ಪರಸ್ಪರ ಅರ್ಥ ಮಾಡಿಕೊಂಡ ಬಳಿಕ, ಇಬ್ಬರು ಸಾಫ್ಟ್ ವೇರ್ ಇಂಜಿನಿಯರ್ ವಿವಾಹವಾಗಿದ್ದರು. ಆದ್ರೇ, ಇಂದು ಪ್ರೀತಿಸಿ ಮದುವೆಯಾಗಿದ್ದಂತ ಯುವತಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

 

ಸಾಯುವ ಮುನ್ನಾ ಡೆತ್ ನೋಟ್ ಬರೆದಿಟ್ಟಿರೋದು ಸಿಕ್ಕಿದ್ದು, ಅದರಲ್ಲಿ ಏನ್ ಬರೆದಿದೆ ಎನ್ನುವ ಬಗ್ಗೆ ಮುಂದೆ ಓದಿ. ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಂತ ಇಬ್ಬರು ಟೆಕ್ಕಿಗಳು, ಪರಸ್ಪರ ಪ್ರೀತಿಸಿ, ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಪ್ರೀತಿಸಿ ವಿವಾಹವಾಗಿದ್ದಂತ ಸಂಗೀತಾ (26) ಬೆಂಗಳೂರಿನ ಅಮೃತಹಳ್ಳಿಯ ವೀರಣ್ಣ ಪಾಳ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಮದುವೆಯಾದ ನಂತ್ರ ಕೆಲ ವರ್ಷಗಳವರೆಗೆ ಖುಷಿಯಿಂದ ಇದ್ದ ದಂಪತಿಗಳ ನಡುವೆ, ಕಳೆದ ಕೆಲ ವರ್ಷಗಳಿಂದ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರವಾಗಿ ಆಗಾಗ ಜಗಳ ಕೂಡ ನಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೇ ಕೌಟುಂಬಿಕ ಕಲಹ ತಾರಕಕ್ಕೇರಿದ ಕಾರಣ ಸಂಗೀತಾ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಹೇಳಲಾಗುತ್ತಿದೆ.

 

ಈ ಬಗ್ಗೆ ಯುವತಿ ಬರೆದಿಟ್ಟಂತ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಪತಿಯ ಕಿರುಕುಳಕ್ಕೆ ಬೇಸತ್ತು ತಾನು ಆತ್ಮಹತ್ಯೆಗೆ ಶರಣಾಗುತ್ತಿರೋದಾಗಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಮೃತಹಳ್ಳಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಬ್ರಹ್ಮಚಾರಿಣಿಯ ಪೂಜಾ ವಿಧಾನ !

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.ಇವರು ತಪಸ್ಸು, ಧೈರ್ಯ, ಶ್ರದ್ಧೆ...

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...