RRR ಸದ್ಯ ಭಾರತ ಚಿತ್ರರಂಗದಲ್ಲಿ ಅತಿ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ಚಿತ್ರ. ರಾಜಮೌಳಿ ನಿರ್ದೇಶನ ಮಾಡಿರುವ ಹಾಗೂ ಎನ್ ಟಿಆರ್ ಮತ್ತು ರಾಮ್ ಚರಣ್ ನಟಿಸಿರುವ ಈ ಚಿತ್ರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.
ಹೇಳಿಕೇಳಿ ರಾಜಮೌಳಿ ಸಿನಿಮಾ ಎಂದರೆ ಸಾಕು ಹೀರೋ ಯಾರೇ ಇರಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಕೊಂಡು ಬಿಡುತ್ತದೆ ಮೊದಲನೇ ದಿನದ ಮೊದಲನೇ ಶೋ ನೋಡಿ ಬಿಡಬೇಕು ಎಂದು ದೇಶದಾದ್ಯಂತ ಸಿನಿಪ್ರೇಕ್ಷಕರು ಕಾಯುತ್ತಿರುತ್ತಾರೆ. ಅಂಥದ್ದರಲ್ಲಿ ಈ ಬಾರಿ ರಾಜಮೌಳಿ ಜತೆಗೆ ಇಬ್ಬರು ದೊಡ್ಡ ನಟರಾದ ಎನ್ ಟಿಆರ್ ಮತ್ತು ರಾಮ್ ಚರಣ್ ಕೈಜೋಡಿಸಿರುವುದು ಆ ಹೈಪ್ ಮತ್ತು ಕ್ರೇಜ್ 3 ಪಟ್ಟು ಹೆಚ್ಚಾಗುವಂತೆ ಮಾಡಿದೆ.
ಅದರಲ್ಲಿಯೂ ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ ಸಿನಿಮಾ ಮೇಲಿನ ಆಸಕ್ತಿ ಗಗನ ಮುಟ್ಟಿದೆ. ಇನ್ನೂ ಆರ್ಆರ್ಆರ್ ಚಿತ್ರ ಕನ್ನಡದ ಅವತರಣಿಕೆಯಲ್ಲಿಯೂ ಕೂಡಾ ಬಿಡುಗಡೆಯಾಗುತ್ತಿದ್ದು ಇತ್ತೀಚೆಗಷ್ಟೇ ನಡೆದ ಕನ್ನಡ ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗವಹಿಸಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರೋರ್ವರು ಕನ್ನಡದಲ್ಲಿ ಯಾವ ನಟನಿಗೆ ಚಿತ್ರ ಮಾಡುತ್ತೀರಿ ಎಂದು ರಾಜಮೌಳಿಗೆ ಪ್ರಶ್ನೆ ಹಾಕಿದರು. ಈ ಪ್ರಶ್ನೆಗೆ ಉತ್ತರ ನೀಡಿದ ರಾಜಮೌಳಿ ನಾನು ಈ ಪ್ರಶ್ನೆಗೆ ಉತ್ತರಿಸುವುದಿಲ್ಲ ನಾನೇನಾದರೂ ಇದಕ್ಕೆ ಉತ್ತರಿಸಿದರೆ ನೀವು RRR ಚಿತ್ರದ ಬಗ್ಗೆ ಸುದ್ದಿ ಮಾಡುವುದನ್ನು ಬಿಟ್ಟು ರಾಜಮೌಳಿ ಈ ನಟನಿಗೆ ಚಿತ್ರ ಮಾಡುತ್ತಾರಂತೆ ಎಂದು ಸುದ್ದಿ ಮಾಡುತ್ತೀರಿ ಆಗ ಈ ಚಿತ್ರಕ್ಕೆ ಪ್ರಚಾರ ಸಿಗುವುದಿಲ್ಲ ಎಂದು ಜಾಣ್ಮೆಯಿಂದ ಉತ್ತರಿಸಿದರು. ಆದರೆ ರಾಜಮೌಳಿ ಕನ್ನಡ ನಟರಿಗೆ ಚಿತ್ರ ಮಾಡುವುದಿಲ್ಲ ಎಂಬುದು ತಿಳಿದಿರುವ ವಿಷಯವೇ..
ಆದರೆ ಇದೇ ರಾಜಮೌಳಿ ತಮಿಳು ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ರಜನಿಕಾಂತ್ ಜೊತೆ ಮೋದಿ ಮಾಡಬೇಕೆಂಬ ಆಸೆಯಿದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಇಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದಾಗ ಈ ಚಿತ್ರದ ಮೇಲೆ ಎಫೆಕ್ಟ್ ಆಗುತ್ತದೆ ಆದ್ದರಿಂದ ನಾನು ಉತ್ತರಿಸುವುದಿಲ್ಲ ಎಂದು ಹೇಳಿದ ರಾಜಮೌಳಿ ತಮಿಳುನಾಡಿನಲ್ಲಿ ರಜನಿಕಾಂತ್ ಅವರಿಗೆ ಚಿತ್ರ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಕನ್ನಡ ನಟರಿಗಿಂತ ತಮಿಳು ನಟರಿಗೆ ಚಿತ್ರ ಮಾಡುವುದರಲ್ಲಿ ರಾಜಮೌಳಿಗೆ ಹೆಚ್ಚು ಆಸಕ್ತಿ ಇದ್ದಂತಿದೆ.