ಅವನು ಮೂಲತಃ ಇಂಗ್ಲೆಂಡಿನ `ಹೆನ್ರಿವಿಲ್ಲೇ’ ಎಂಬ ಊರಿನವನು.6ನೇ ವಯಸ್ಸಿನಲ್ಲಿ ತಂದೆ ಮೃತಪಟ್ಟ ಬಳಿಕ ಇಡೀ ಸಂಸಾರದ ನೊಗ ಹೊತ್ತಿದ್ದ.ಒಂದುಹೊತ್ತು ಊಟಕ್ಕಾಗಿ ವ್ಯವಸಾಯ, ಕಂಡಕ್ಟರ್, ಸೇಲ್ಸ್‍ಮೆನ್ ಹೀಗೆ ಹಲವಾರು ಕೆಲಸಗಳನ್ನು ಮಾಡಿದ್ದ.ಆದರೆ 40ರ ವಯಸ್ಸು ಅವನ ಜೀವನದ ದಿಕ್ಕನ್ನೇ ಬದಲಾಯಿಸಿತ್ತು. ಒಬ್ಬ ಸಾಮಾನ್ಯ ಕುಕ್ ಆಗಿ ವೃತಿಗಿಳಿದವನು ಮುಂದೊಂದು ದಿನ ಇದೇ ಕಾರ್ಯ ಅಷ್ಟೊಂದು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಬಹುಶಃ ಅವನು ನಿರೀಕ್ಷಿಸಿರಲಿಲ್ಲ. ಈಗ ಇವತ್ತು ಇವನ ಹೆಸರು ವಿಶ್ವದ `ಮೊಸ್ಟ್ ಇನ್‍ಫ್ಲೂಯೆನ್ಷಲ್ ಪರ್ಸನ್’ಗಳ ಪಟ್ಟಿಯಲ್ಲಿದೆ.ಯೆಸ್ ವಿಶ್ವದಲ್ಲಿ ಬಹುಶಃ ಏಲ್ಲಾ ಕಡೆ ಕಂಡುಬರುವ ಕೆ.ಎಫ್.ಸಿ.ಮಾಲೀಕನಿವನು.ಇವನ ಹೆಸರು `ಹಾರ್ಲೆಂಡ್ ಡೇವಿಡ್ ಸ್ಯಾಂಡರ್ಸ್’.40ರ ವಯಸ್ಸಿನಲ್ಲಿ ಕೆಂಟುಕಿಯ ಸರ್ವಿಸ್ ಸ್ಟೇಷನ್ನೊಂದರಲ್ಲಿ ಫ್ರೈಡ್ ಚಿಕನ್ ಮಾರುತ್ತಿದ್ದ. ಆದರೆ ಅದೆಷ್ಟೋ ವರ್ಷಗಳ ದುಡಿತದ ನಂತರವೂ ಇವನ ಗಳಿಕೆ ಸೊನ್ನೆಯಾಗಿತ್ತು.ಹೀಗಾಗಿ ಆ ವೃತ್ತಿಯನ್ನು ತೊರೆದು “ಸೋಷಿಯಲ್ ಸೆಕ್ಯೂರಿಟಿ ಚೆಕ್ ಆಫೀಸರ್” ಆಗಿ ಸೇರಿಕೊಂಡ.ಅಲ್ಲಿ ಅವನು ತನಗೆ ಪರಿಚಯವಾದವರಿಗೆಲ್ಲ ತಾನೇ ತಯಾರಿಸಿದ ಫ್ರೈಡ್ ಚಿಕನ್ ಅನ್ನು ಟೇಸ್ಟ್ ಮಾಡಲು ಕೊಡುತ್ತಿದ್ದ.ತಿಂದವರೆಲ್ಲರೂ ಬಹಳ ಚೆನ್ನಾಗಿದೆ ಅನ್ನುವವರೇ ಜಾಸ್ತಿ.ಇಂತಹ ಮಾತುಗಳು ಅವನ ನಿದ್ದೆಗೆಡಿಸಿದವು.ಅವನು ಮೊದಲು ಮಾಡುತ್ತಿದ್ದ ಕಾರ್ಯವೇ ಸಮಂಜಸವೆನಿಸಿತು. ಹೀಗಾಗಿ ಪುನಃ ಅತ್ಯಂತ ಉತ್ಸಾಹದಿಂದ ಮತ್ತೆ ಚಿಕನ್ ತಯಾರಿಸಿ ಮನೆಮನೆಗಳಿಗೆ ಮಾರಲು ಹೊರಟ. ಹೀಗೆ ಹೊರಟವನು ಮುಂದೊಂದು ದಿನÀ ರೆಸ್ಟೊರೆಂಟ್ ತೆಗೆಯಲು ಇಚ್ಚಿಸಿದ.ತನಗೆ ಬೇಕಾದ ಬ್ಯುಸಿನೆಸ್ ಪಾರ್ಟನರ್‍ಗಾಗಿ ಯಾವ ಹೋಟೆಲ್‍ಗಳಿಗೆ ತೆರೆಳಿದರೂ ಯಾರೂ ಒಪ್ಪಲಿಲ್ಲ. ಅಷ್ಟಕ್ಕೆ ಧೃತಿಗೆಡದೆ ಅವನು ಹುಡುಕಾಟ ನಡೆಸುತ್ತಲೇ ಇದ್ದ. ಕೊನೆಗೂ ಸುಮಾರು 1009 `ನೋ’ ಬಳಿಕ `ಯೆಸ್’ ಎನ್ನೋ ಪದ ಅವನಿಗೆ ಸಿಕ್ಕಿತು. ಮೊದಲ ಮಳಿಗೆ ತೆಗೆದಾಗ ಅವನು ಗ್ರಾಹಕರಿಕೆ ಚಿಕ್ಕ ನಿಕೆಲ್ ವಸ್ತು ಕೊಡುವುದಾಗಿ ಆಫರ್ ಇಟ್ಟ. ತನ್ನ ಮೊದಲ ಫ್ರಾಂಚೈಸಿ ಮೆಕ್ಸಿಕೋ ಹತ್ತಿರದಲ್ಲಿರುವ ಸಾಲ್ಟ್ ಲೇಕ್ ಸಿಟಿಯ “ಪಿ.ಟಿ.ಹರ್ಮನ್” ಎಂಬ ಸಂಸ್ಥೆ ಕೊಂಡುಕೊಂಡಿತು.ಸುಮಾರು 1964ರ ಹೊತ್ತಿನಲ್ಲಿ ಅವನ ಟ್ರೇಡ್ ಮಾರ್ಕಿನಲ್ಲಿ ಸುಮಾರು 600 ಫ್ರಾಂಚೈಸಿಗಳಿದ್ದವು. ಈ ಸಮಯದಲ್ಲಿ 2 ಮಿಲಿಯನ್ ಡಾಲರ್‍ಗಳಿಗೆ ಅವನ ಕೆಲವು ಶೇರ್‍ಗಳನ್ನು ಮಾರಿದರೂ ಅವನು ಅಷ್ಟರಲ್ಲಿ ಜಗತ್ತಿನ ಮೋಸ್ಟ್ ರೆಕಾಗ್‍ನೈಸೆಬಲ್ ಪಟ್ಟಿಯಲಿದ್ದ.1950ರಲ್ಲಿ ಕೆಂಟುಕಿಯ ಆಗಿನ ಗವರ್ನರ್ ರೂಬಿ ಲಫೂನ್ ಇವನಿಗೆ “ಕೊಲೋನೆಲ್” ಎಂಬ ಬಿರುದು ನೀಡಿತು.ಕೆ.ಎಫ್.ಸಿ ಅದೆಷ್ಟು ಉತ್ತುಂಗ ಮಟ್ಟಿದಲ್ಲಿತ್ತು ಎಂದರೆ 285 ಮಿಲಿಯನ್‍ಗೆ ಆಗಿನ ಫೇಮಸ್ ಕಂಪನಿ ಹ್ಯುಬಿಲಿನ್ ಸಂಸ್ಥೆ ತನ್ನದಾಗಿಸಿಕೊಂಡಿತ್ತು.ಅದಾದ ಬಳಿಕ ಸುಮಾರು ಕಂಪನಿಗಳು ಅದರ ಕೈವಶವಾದವು.ಸದ್ಯಕ್ಕೆ ವಿಶ್ವದ ದೊಡ್ಡ ಸಂಸ್ಥೆಯೊಂದು ಈ ಮಳಿಗೆ ನಡೆಸುತ್ತಿದೆ. ಅವತು ಅವರೇನಾದ್ರೂ ಕೇವಲ ಸೆಕ್ಯೂರಿಟಿ ಆಫಿಸರ್ ಆಗಿಯೋ ಅಥವಾ ತನಗೆ ಯಾವ ಬ್ಯುಸಿನೆಸ್ ಪಾರ್ಟ್‍ನರ್‍ಗಳು ಸಿಕ್ಕಿಲ್ಲವೆಂದು ಕೈಚೆಲ್ಲಿ ಕೊತಿದ್ದರೆ ಇವತ್ತಿಗೆ ನಾವು ಕೂತು ಬಾಯಿ ಚಪ್ಪರಿಸುವ ಕೆ.ಎಫ್.ಸಿ ರೆಸ್ಟೋರೆಂಟ್‍ಗಳೇ ಇರುತ್ತಿರಲಿಲ್ಲ. ವಯಸ್ಸು ಅರವತ್ತು ದಾಟಿದ ಬಳಿಕ “ಸೀನಿಯರ್ ಸಿಟಿಜನ್” ಎಂಬ ಹಣೆಪಟ್ಟಿಯಲ್ಲೂ ಏನಾದರೂ ಸಾಧಿಸಬೇಕೆಂಬ ಹೊರಟಿರುವ ಜನಗಳಿಗೆ ಇವರು ರೋಲ್‍ಮಾಡೆಲ್.
- ವಿಶು
POPULAR STORIES :
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!