ಸುಕುಮಾರ್ ನಿರ್ದೇಶನದ , ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ: ದಿ ರೈಸ್ ಪ್ಯಾನ್ ಇಂಡಿಯಾ ಸಿನಿಮಾ ಡಿಸೆಂಬರ್ 17 ರಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದೆ..
ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ..
ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಮಾಡಿರುವ ಪುಷ್ಪ ಹವಾ ಡಿಸೆಂಬರ್ 24 ರಿಂದ ಕಡಿಮೆಯಾಗಲಿದೆ.. ಯಾಕೆಂದ್ರೆ ಡಿಸೆಂಬರರ್ 24 ಕ್ಕೆ ರಣವೀರ್ ಸಿಂಗ್ ನಟನೆಯ ‘ 83’ ಸಿನಿಮಾ 5 ಭಾಷೆಗಳಲ್ಲಿ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ.. ಈ ಸಿನಿಮಾ ಭಾರತದ ಕ್ರಿಕೆಟ್ ದಂಥಕಥೆ ಕಪಿಲ್ ದೇವ್ ಅವರ ಜೀವನಾಧಾರಿತ ಕಥೆ ಹೊಂದಿದ್ದು , ಐತಿಹಾಸ ವಿಶ್ವಕಪ್ ಕಪ್ ಗೆದ್ದ ಕಥೆಯನ್ನ ಸಿನಿಮಾರೂಪದಲ್ಲಿ ಅದ್ರಲ್ಲೂ 3Dಯಲ್ಲಿ ಬರುತ್ತಿದೆ.. ಹೀಗಾಗಿ ಭಾರತದಾದ್ಯಂತ 83 ಹವಾ ಶುರುವಾಗುತ್ತೆ.. ಆಗ ಪುಷ್ಪಾ ಸಿನಿಮಾಗೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಕಾಂಪಿಟೇಷನ್ ಏರ್ಪಡಲಿದೆ.
ಮೂಲಗಳ ಪ್ರಕಾರ ಪುಷ್ಪ ಸಿನಿಮಾ ಶೀಘ್ರವೇ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಕಲೆಕ್ಷನ್ ದಾಟಲಿದೆ ಎನ್ನಲಾಗ್ತಿದೆ.
ಟ್ರೇಡ್ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಟ್ವೀಟ್ ನಲ್ಲಿ ಈ ಬಗ್ಗೆ ನೀಡಿರುವ ಮಾಹಿತಿಯಂತೆ , ಪುಷ್ಪ ಐದು ದಿನಗಳಲ್ಲಿ 150 ಕೋಟಿ ರೂಪಾಯಿಗಳ ಗಡಿ ದಾಟಿದೆ..
ದಿನ 1 – ರೂ 57.83 ಕೋಟಿ ರೂಪಾಯಿ
ದಿನ 2 – ರೂ 36.79 ಕೋಟಿ ರೂಪಾಯಿ
ದಿನ 3 – ರೂ 37.91 ಕೋಟಿ ರೂಪಾಯಿ
ದಿನ 4 – ರೂ 12.34 ಕೋಟಿ ರೂಪಾಯಿ
ದಿನ 5 – ರೂ. 9.68 ಕೋಟಿ ರೂಪಾಯಿ
ಒಟ್ಟು – ರೂ 154. 55 ಕೋಟಿ ರೂಪಾಯಿ