ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶೀರನಕಟ್ಟೆಯ ಕೋಡಿಹಳ್ಳಿಹಟ್ಟಿ ಗ್ರಾಮದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮುದ್ದಪ್ಪ, ಸುದೀಪ, ಕೋಟೇಶ ಮತ್ತು ಅಭಿ ಬಂಧಿತ ಆರೋಪಿಗಳು. ಇವರು ವಿದ್ಯಾರ್ಥಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳದಿಂದ ಬೇಸತ್ತು ಯುವತಿ ಡಿಸೆಂಬರ್ 19 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಪೋಷಕರು ಆರೋಪಿಗಳ ವಿರುದ್ಧ ದೂರು ನೀಡಿದ್ದರು.
ಈ ದೂರಿನನ್ವಯ ಹಿರಿಯೂರು ಡಿವೈ ಎಸ್ ಪಿ ರೋಶನ್ ಜಮೀರ್ ಮತ್ತು ಪಿಐ ಫೈಜುಲ್ಲಾ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಉಮೇಶ್, ಧ್ರುವಕುಮಾರ, ಗಂಗಾಧರ, ಮಹಮ್ಮದ್ ರಫಿ, ರುದ್ರಮುನಿ ಸ್ವಾಮಿ ಯವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯವನ್ನು ಎಸ್ ಪಿ ರಾಧಿಕಾ ರವರು ಶ್ಲಾಘಿಸಿದ್ದಾರೆ.