ವಾಂಕ್ ಅಂಡ್ ಟಾಕ್, ಟಾಕ್ ಅಂಡ್ ವರ್ಕ್ ಎಂಬ ಜಾಹೀರಾತು ನೀವು ನೋಡಿಯೇ ಇರುತ್ತೀರಿ. ಅದೊಂದು ಖಾಸಗಿ ದೂರವಾಣಿ ಕಂಪನಿಯ ಜಾಹೀರಾತು. ಅದು ಬಿಡಿ ನಮಗೆ ಅದು ಮುಖ್ಯವಲ್ಲ. ಬದಲಾಗಿ ನಾವು ಹೇಳುತ್ತಿರುವುದು ಇನ್ನೊಂದು ಸಂಗತಿಯ ಬಗ್ಗೆ ಅದೇ ಆಫೀಸ್‍ಗಳಲ್ಲಿ ಸಭೆಗಳನ್ನು ಕುಳಿತು ನಡೆಸುವ ಬದಲು `ನಡೆಯುತ್ತಾ ನಡೆಸುವುದು’. (ವಾಕಿಂಗ್ ಮೀಟಿಂಗ್ಸ್). ಈ ವಿನೂತನ ಹವ್ಯಾಸ ರೂಢಿಸಿಕೊಳ್ಳುವುದರಿಂದ ವೃತಿಪರ ಕೆಲಸಗಾರರ (ವೈಟ್ ಕಾಲರ್ ವರ್ಕರ್ಸ್) ದೈಹಿಕ ಚಟುವಟಿಕೆ ಮಟ್ಟ ಕನಿಷ್ಠ ಹತ್ತು ನಿಮಿಷಗಳವರೆಗಾದರೂ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ಧೃಡಪಟ್ಟಿದೆ.
ಅಧ್ಯಯನ ಏನು ಹೇಳುತ್ತದೆ?
ಲಕ್ಷಾಂತರ ವೃತ್ತಿಪರ ಕೆಲಸಗಾರರು ಸಾಮಾನ್ಯವಾಗಿ ಕುಳಿತಲ್ಲೇ ಕೆಲಸ ಮಾಡುತ್ತಾರೆ. ಇದರಿಂದ ಅವರ ದೈಹಿಕ ಚಟುವಟಿಕೆಗಳು ಕುಗ್ಗುತ್ತವೆ. ಇದನ್ನು ತಪ್ಪಿಸುವುದಕ್ಕಾಗಿಯೇ ವಿನೂತನ ರೀತಿಯಲ್ಲಿ ಕೆಲಸಕ್ಕೂ ಕುತ್ತು ಬರದಂತೆ ಆರೋಗ್ಯ ಕಾಪಾಡಿಕೊಳ್ಳುವ ಚಟುವಟಿಕೆಗಳನ್ನು ಈ ಅಧ್ಯಯನ ತಿಳಿಸುತ್ತದೆ.
ಪ್ರಯೋಗ
ಕೆಲ ವೃತ್ತಿಪರ ಕೆಲಸಗಾರರ ದೈಹಿಕ ಚಟುವಟಿಕೆ ಸಾಮಥ್ರ್ಯವನ್ನು ಅಳೆಯುವ ಉz್ದÉೀಶದಿಂದ ಮೂರು ವಾರಗಳವರೆಗೆ ಇವರಿಗೆ `ಆ್ಯಕ್ಸಿಲೋಮೀಟರ್’ ಎನ್ನುವ ಸಾಧನವನ್ನು ಕೆಲಸದ ಸಮಯದಲ್ಲಿ ಬಳಸುವಂತೆ ತಿಳಿಸಲಾಗಿತ್ತು. ಮೂರು ವಾರಗಳ ನಂತರ ಈ ಸಾಧನದ ಸಹಾಯದಿಂದ ಫಲಿತಾಂಶಗಳನ್ನು ಪಡೆಯಲಾಗಿತ್ತು.
ಇದಲ್ಲದೇ ವೃತ್ತಿಪರರಿಗೆ `ನಡೆಯುತ್ತಲೇ ಸಭೆಗಳನ್ನು ನಡೆಸುವ ಶಿಷ್ಟಾಚಾರ’ (ವಾಕಿಂಗ್ ಮೀಟಿಂಗ್ ಪೆÇ್ರೀಟೋಕಾಲ್) ವಿಧಾನ ಅನುಸರಿಸಲೂ ತಿಳಿ ಹೇಳಲಾಗಿತ್ತು. ಇದರಲ್ಲಿ ಇವರಿಗೆ ಅತ್ತಿತ್ತ ನಡೆದಾಡುತ್ತಲೇ ಸಭೆ ನಡೆಸುವುದರ ಜತೆಯಲ್ಲಿ ಟಿಪ್ಪಣಿ (ನೋಟ್ಸ್) ತೆಗೆದುಕೊಳ್ಳಲು ಸೂಚಿಸಲಾಗಿತ್ತು.
ಫಲಿತಾಂಶ
ವ್ಯಕ್ತಿಗಳು ಲಘು ವ್ಯಾಯಾಮದ ಜತೆಗೆ ಕನಿಷ್ಠ ಹದಿನೈದು ನಿಮಿಷಗಳವರೆಗೆ ಜೋರಾಗಿ ನಡೆಯುವುದರಿಂದ ಅವರ ಫಿಟ್ನೆಸ್ ಲೆವಲ್ ಹೆಚ್ಚಾಗುತ್ತದೆ ಎಂದು ಸಂಶೋಧನೆಯಲ್ಲಿ ಧೃಡಪಡಿಸಲಾಗಿತ್ತು.
ಆದರೆ, ಕೆಲಸದ ಸಮಯದಲ್ಲಿ ವೃತ್ತಿಪರರು ಬ್ಯುಸಿಯಾಗುವುದರಿಂದ ಇವರು ದೈಹಿಕ ಚಟುವಟಿಕೆಗಳಿಗೆ ಹೆಚ್ಚಾಗಿ ಗಮನವನ್ನು ನೀಡುವುದಿಲ್ಲ. ಹೀಗಾಗಿ ಸಂಶೋಧಕರು, ಇವರ ಸಮಸ್ಯೆಗೆ ಸೂಕ್ತವಾದ ಉತ್ತರ ನೀಡಿದ್ದು, ಸಾಮಾನ್ಯವಾಗಿ ನಡೆಸುವ ಸಭೆಗಳನ್ನು ಕುಳಿತು ಮಾಡುವುದರ ಬದಲು ಓಡಾಡುತ್ತಾ ಮಾಡಬಹುದು ಎಂದು ಸೂಚಿಸಿದ್ದಾರೆ. ಇದರಿಂದ ಕೆಲಸವೂ ಪೂರ್ಣಗೊಳ್ಳುತ್ತದೆ ಜತೆಗೆ ದೈಹಿಕ ಚಟುವಟಿಕೆಗಳೂ ಚುರುಕುಗೊಳ್ಳುತ್ತವೆ.
ವೃತ್ತಿಪರರ ಸಾಮಾನ್ಯ/ ಕಠಿಣ ದೈಹಿಕ ಚಟುವಟಿಕೆಗಳು
ಮೊದಲ ವಾರದಲ್ಲಿ 107 ನಿಮಿಷಗಳಿಂದ
ಎರಡನೇ ವಾರಕ್ಕೆ 114 ನಿಮಿಷಗಳು
ಹಾಗೂ ಮೂರನೇ ವಾರಕ್ಕೆ 117 ನಿಮಿಷಗಳು ಏರಿಕೆಯಾಗಿತ್ತು ಎಂದ ಅಧ್ಯಯನ ತಿಳಿಸಿದೆ.
- ವಿಶು
POPULAR STORIES :
ಕೋಟಿ ಕೋಟಿ ಕಮಾಯಿಯ ಸುಲ್ತಾನ್‍ನ ಕೆಲವೊಂದು ಸಿಲ್ಲಿ ಮಿಸ್ಟೇಕ್ಸ್..! ನಿರ್ದೇಶಕರೇ ಎಡವಿದ್ದೀರಿ!!!!!!
ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!