ಅವನು ಬಂದು ಮಾತನಾಡಿಸುವಾಗ ನಾನು ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದೆ…!

Date:

ಜೀವನ ಒಂಥರಾ ವಿಚಿತ್ರ ಕಣ್ರಿ,ಈ ನಮ್ಮ ಜೀವನದಲ್ಲಿ ಬಂದು ಹೋಗೋ ಜನ್ರೂ ನೂ ಹಾಗೇ ! ಒಬ್ಬೊಬ್ಬ್ರು ಒಂದೊಂಥರಾ! ಇವ್ರು ಯಾಕೆ ಹೀಗೆ?ಅವ್ರ್ಯಾಕೆ ಹೀಗ್ ಮಾಡಿದ್ರು? ಹೀಗೆ..ಅನೇಕ ಬಾರಿ ಹಲವು ಪ್ರಶ್ನೆಗಳಿಗೆ ಉತ್ತರಾನೇ ಸಿಗೋಲ್ಲ….ಕೆಲವೊಬ್ರು ಹೀಗೂ ಇರ್ತಾರಾ ಅನೋಷ್ಟ್ರ ಮಟ್ಟಿಗೆ ನಂಗೆ ಹತ್ರ ಆಗ್ತಾರೆ! ಸರಿ ಬಿಡಿ! ಬರೀತಾ ಹೋದ್ರೆ ಪೀಠಿಕೆನೇ ಜಾಸ್ತಿಯಾಗುತ್ತೆ..

2 ವರುಷಗಳ ಹಿಂದೆ ದೆಹಲಿಯಲ್ಲಿ, ಡಿಸೆಂಬರ್ 31.ಎಲ್ಲಾರೂ ಹೊಸ ವರುಷದ ಸಂಭ್ರಮದಲ್ಲಿದ್ದೆವು.ನಡು ರಾತ್ರಿ,  ನಾವು ಫ಼್ರೆಂಡ್ಸ್ ಜೊತೆ ಸೇರ್ಕೊಂಡು ಬರ್ತಾ ಇದ್ದ ಸಮಯ.ನಮ್ಮ ಪ್ರೆಂಡ್ಸ್ ಎಲ್ಲಾರೂ ಬೇರೆ ಬೇರೆ ಕಡೆ ಹೋಗುವವರಾದ್ದರಿಂದ ನಾವು ನಮ್ಮ ನಮ್ಮ ದಾರಿ ಹಿಡಿದೆವು.ಇದೇ ನನಗೆ ಭಯ ಪಡುವಂತೆ ಮಾಡಿದ ಕ್ಷಣ,ತುಂಬಾ ತಡವಾಗಿತ್ತು.ಗಾಬರಿಯಲ್ಲಿ ಬರುತ್ತಿದ್ದಂಗೆ ನನ್ನ ಸೆಲ್ ಫೋನ್ ಬೇರೆ ಆವತ್ತೇ ಕಳೆದು ಹೋಗಬೇಕೆ??ಮನೆಯಲ್ಲಿ ಬೇಗನೆ ಬರುತ್ತೇನೆಂದು ಹೇಳಿ ಮೊತ್ತಮೊದಲ ಬಾರಿಗೆ ನಾನು ಹೊಸ ವರುಷದ ಪ್ರೋಗ್ರಾಂ ನೋಡಲು ಗೆಳತಿಯರ ಒತ್ತಾಯಕ್ಕೆ ಮಣಿದು ಧೈರ್ಯ ವಹಿಸಿ ಮನೆಯಿಂದ ಹೊರಟಿದ್ದೆ.ಮನೆಯಲ್ಲಿ ಏನು ಮಾಡುತ್ತಾರೋ ಅನ್ನೋ ಆತಂಕ ಒಂದು ಕಡೆಯಾದರೆ ಇನ್ನೊಂದು ಕಡೆ ಮನೆ ಹೇಗೆ ತಲಪುವುದು ಎಂಬ ಸಮಸ್ಯೆ.ರಸ್ತೆಯೇನೂ ನಿರ್ಜನ ವಾಗಿರಲಿಲ್ಲ.ಆದ್ರೆ ರಸ್ತೆಯಲ್ಲಿ ಒಂದೆ ಒಂದು ಕ್ಯಾಬ್ ಇರಲಿಲ್ಲ.ರಸ್ತೆಯಲ್ಲಿ ಓಡಾಡುತ್ತಿದ್ದ ಸುಮಾರು 5-6 ಮಹಿಳೆಯರಲ್ಲಿ ಸೆಲ್ ಫೋನ್ ಗಾಗಿ ವಿಚಾರಿಸಿದೆ.ಆದ್ರೆ ಅವ್ರು ನನ್ನನೇ ವಿಚಿತ್ರವಾಗಿ ನೋಡುತ್ತಾ ಹೊರಟೆ ಹೋದರು.

ನಾನು ಸಂಪೂರ್ಣವಾಗಿ ನಡು ರಸ್ತೆಯಲ್ಲಿ ನನ್ನನ್ನು ಕಳೆದುಕೊಂಡೇ ಬಿಟ್ಟಿದ್ದೆ.ಆಗ ಅಲ್ಲೊಬ್ಬ ಯುವಕ ಕಾಣಿಸಿಕೊಂಡ.ಅವನು ನನ್ನ ಬಳಿ ಬಂದು ಕಾರಣ ವಿಚಾರಿಸಿದ.ನನಗೇನು ಮಾಡಲೂ ತೋಚಲಿಲ್ಲ,ಮೊದಲೇ ಹೇಳಿ ಕೇಳಿ ದೆಹಲಿ.ಅನೇಕ ವಿಷಯಗಳು ನನ್ನ ತಲೆಯಲ್ಲಿ ಓಡಾಡುತ್ತಿತ್ತು.ದೆಹಲಿಯು ಹೆಂಗಸರಿಗೆ ಸುರಕ್ಷಿತವಲ್ಲ ಎಂದು ಅಲ್ಲಿ ನಡೆದ ಅನೇಕ ಘಟನೆಗಳಿಂದ ತಿಳಿದಿರುವ ನಾನು ಸಿಕ್ಕಾಪಟ್ಟೆ ಭಯಬೀತಳಾದೆ,ಆದ್ರೆ ಈ ಮನುಷ್ಯ ನನ್ನ ಬಳಿ ಬಂದು ಹೇಳಿದ” ಭಯ ಪಡಬೇಡಿ,ನಾನು ನಿಮಗೆ ಕೇವಲ ಸಹಾಯ ಮಾಡುತ್ತೇನೆ”ಹಾಗೂ ಅವನು ಅದರಂತೆ ನಡೆದುಕೊಂಡೂ ಬಿಟ್ಟ.ಅವನೆಲ್ಲಿಗೆ ಹೋಗುವವನೋ ಗೊತ್ತಿಲ್ಲ,ಪುಣ್ಯಾತ್ಮ,ಅವನು ಹೋಗುವ ಹಾದಿಯಿಂದ ಹಿಂತಿರುಗಿ ಬಂದು ನನ್ನನ್ನು ಮನೆ ತನಕ ಸುರಕ್ಶಿತವಾಗಿ ಬಿಟ್ಟು ಹೋದ.

ಇದೇ ಈ ಪ್ರಪಂಚದಲ್ಲಿ ನಡೆಯುವುದು.ನಾವು ಏನನ್ನೋ ಓದಿರುತ್ತೇವೆ,ಏನನ್ನೋ ಅಂದುಕೊಂಡಿರುತ್ತೇವೆ,ಇದರಿಂದಾಗಿಯೆ ನಾವು ಯಾರನ್ನೂ ಯಾವುದನ್ನೂ ತುಂಬಾ ಈಸಿಯಾಗಿ ನಂಬಲಾರೆವು.ನಮಗೆ ಯಾರಾದ್ರೂ ಸಹಾಯ ಮಾಡುತ್ತಾರೆ ಎಂಬ ಕಿಂಚಿತ್ ನಂಬಿಕೆ ನಮಗಿಲ್ಲವಾಗಿ ಹೋಗಿದೆ.ಆ ದಿನ ನನಗೆ ಸಹಾಯದ ತೀರ ಅವಶ್ಯಕತೆ ಇತ್ತು.ನನಗೆ ಸಹಾಯ ಮಾಡಬಹುದೆಂದು ನಂಬಿದ್ದ ಆ 6 ಜನ ಹೆಂಗಸರಿಂದ ನನಗೆ ಸಹಾಯ ಸಿಗಲಿಲ್ಲ,ಬದಲಾಗಿ ನಾನು ನಂಬಲೇ ಸಾಧ್ಯವಿಲ್ಲದ ವ್ಯಕ್ತಿ ನನಗೆ ಸಹಾಯ ಹಸ್ತ ಚಾಚಿದ್ರು.

ಎಲ್ಲಾ ಗಂಡಸರೂ ನೀವು ನ್ಯೂಸ್ ಪೇಪರ್ನಲ್ಲಿ ಓದಿದಂಗೆ ಇರೋಕೆ ಸಾಧ್ಯವಿಲ್ಲ.ಯಾರದ್ದೋ ತಪ್ಪಿಗೆ ಇನ್ನ್ಯಾರಿಗೋ ಶಿಕ್ಷೆನೇ? ಇದು ಸರಿಅಲ್ಲ.ಅಂತಹದ್ದನ್ನು ನಂಬುವುದನ್ನು ಬಿಟ್ಟುಬಿಡಿ.

  • ಸ್ವರ್ಣಲತ ಭಟ್

POPULAR  STORIES :

ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?

ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?

ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!

ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...