ಕಂಪನಿ ನಿಂಟೆಂಡೋ ಲಿಮಿಟೆಡ್ ನಿಂದ ತಯಾರಿಸಲಾದ ಈ ಗೇಮ್ ಪೋಕಿಮಾನ್ ಗೋ(Pokemon-Go) ಕೇವಲ ಎರಡೇ ದಿನದಲ್ಲಿ ಕಂಪನಿಯ ಮಾರ್ಕೆಟ್ ಕ್ಯಾಪ್ನ್ 50,000(504 ಅರಬ್) ಕೋಟಿಗೆ ಹೆಚ್ಚಿಸಿದೆ.ಕಂಪನಿಯು ಅಮೇರಿಕಾದಲ್ಲಿ ಈ ಗೇಮನ್ನು ಜುಲೈ 6 ಕ್ಕೆ ಹೊರತಂದಿತ್ತು.ಈಗ ಇದು ಅಮೇರಿಕಾದ ಹೊರತಾಗಿ,ಆಸ್ಟ್ರೆಲಿಯಾ ಹಾಗೂ ನ್ಯೂಜಿಲ್ಯಾಂಡ್ ನ ಮಾರ್ಕೆಟ್ನಲ್ಲಿ ಲಭ್ಯವಿದೆ.ಎರಡೇ ದಿನದಲ್ಲಿ 5% ಸ್ಮಾರ್ಟ್ ಫೋನ್ ಆನ್ಡ್ರೋಯಿಡ್ ಬಳಕೆದಾರರು ಈ ಗೇಮನ್ನು ಡೌನ್ ಲೋಡ್ ಮಾಡಿದ್ದಾರೆ.ಸತತ 43 ನಿಮಿಷಗಳ ತನಕ ಜನರು ಈ ಗೇಮನ್ನು ಆಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
- ಎರಡು ದಿನದಲ್ಲಿ ನಿಂಟೆಂಡೋ ಕಂಪನಿಯ ಮಾರ್ಕೆಟ್ನಲ್ಲಿ ಆದ ಬದಲಾವಣೆಯಿಂದ ದೊಡ್ದ ದೊಡ್ಡ ಕಂಪನಿಗಳೂ ಆಶ್ಚರ್ಯ ಚಕಿತವಾಗಿವೆ.
- ಇದರ ನಿರಂತರ ಬಳಕೆ ಮಾಡುವವರ ಸಂಖ್ಯೆಯು ಟ್ವಿಟ್ಟರ್ ನ ಬರಾಬರಿಯಲ್ಲಿದೆ.
- ಜನರು ಈ ಗೇಮ್ ನಲ್ಲಿ ಕಳೆಯುವ 43 ನಿಮಿಷಗಳು ವಾಟ್ಸ್ ಆಪ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಳೆಯುವ ಸಮಯಕ್ಕಿಂತ ಹೆಚ್ಚಾಗಿದೆ.
- ಜಪಾನ್ ಉಳಿದಂತೆ ಇತರ ದೇಶಗಳಲ್ಲಿ ಇದನ್ನು ಇನ್ನೂ ಹೊರತಂದಿಲ್ಲ
- ಈ ಗೇಮ ನ್ನು ಕಂಪನಿಯು ಕಳೆದ ವರುಷವೇ ತಯಾರು ಮಾಡಿತ್ತು.
ಅಮೇರಿಕಾದಲ್ಲಿ ಜನರು ಯಾವುದರಲ್ಲಿ ಅಧಿಕ ಸಮಯ ಕಳೆಯುತ್ತಾರೆ ಎಂದು ನೋಡಿ.
Pokemon GO-43 min
Whats app -30 min
Instagram -25 min
ಇದನ್ನು ಅಮೇರಿಕಾದಲ್ಲಿ 5.16% ಆನ್ಡ್ರೋಯಿಡ್ ಫೊನ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ.ಟ್ವಿಟ್ಟರ್ ಬಳಕೆದಾರರು ಅಮೇರಿಕಾದಲ್ಲಿ 3.5%ಇದ್ದಾರೆ,ಅದೇ ರೀತಿಯಲ್ಲಿ ಪೊಕಿಮಾನ್ ಗೋ ನ ಬಳಕೆದಾರರು ಅಮೇರಿಕಾದಲ್ಲಿ 3.2% ತಲಪುತ್ತಿದ್ದಾರೆ.
ನಿಂಟೆಂಡೊ ಲಿಮಿಟೆಡ್ ನ ಮಾರ್ಕೇಟ್ ಕ್ಯಾಪ್ 50,000 ಕೋಟಿ ತಲುಪಿರುವುದು ನಿಜಕ್ಕೂ ಒಂದು ಅದ್ಭುತ ದಾಖಲೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು 28 ಜನವರಿ 2016 ರಲ್ಲಿ ಫೇಸ್ ಬುಕ್ ನ ಮಾರ್ಕೇಟ್ ಕ್ಯಾಪ್ ಒಂದೇ ದಿನದಲ್ಲಿ 2.78 ಲಕ್ಷ ಹೆಚ್ಚಿತ್ತು.
ಅದೇ 25 ಏಪ್ರಿಲ್ 2012 ರಲ್ಲಿ ಆಪ್ಪಲ್ ನ ಮಾರ್ಕೇಟ್ ಕ್ಯಾಪ್ ಒಂದೇ ದಿನದಲ್ಲಿ 3.11 ಲಕ್ಷ ಕೋಟಿ ಹೆಚ್ಚಿತ್ತು.
ಜುಲೈ 17,2015 ರಲ್ಲಿ ಗೂಗಲ್ ಕೂಡ ದಾಖಲೆ ಸ್ಥಾಪಿಸಿತ್ತು.ಇದ್ರ ಮಾರ್ಕೇಟ್ ಕ್ಯಾಪ್ ಒಂದೇ ದಿನದಲ್ಲಿ 4.37 ಲಕ್ಷ ಕೋಟಿ ಹೆಚ್ಚಿತ್ತು.
ಈ ಗೇಮ್ ನಿಂದ ಸಿಕ್ಕ ರೆಸ್ಪಾನ್ಸ್ ಮೇಲೆ ನಿಂಟೆಂಡೋ ಕಂಪನಿಯ ಎಲ್ಲಾ ಶೇರುಗಳಲ್ಲಿ ಗಣನೀಯವಾಗಿ ಶುಕ್ರವಾರ ಹಾಗೂ ಸೋಮವಾರದಂದು 36% ಏರಿಕೆ ದಾಖಲಾಗಿತ್ತು.ಆದ್ರೆ ನಿಜವಾಗಿ ಹೇಳಬೇಕಂದ್ರೆ,ಇದುವರೆಗೆ ಕಂಪನಿಯ ಲಾಭದಲ್ಲಿ ಯಾವುದೆ ಬದಲಾವಣೆಯಾಗಿಲ್ಲ ಯಾಕಂದ್ರೆ ಈ ಗೇಮ್ ಫ್ರೀ ಆಗಿ ದೊರೆಯುತ್ತದೆ.ಬ್ಯುಸಿನೆಸ್ ಎಕ್ಸ್ಪರ್ಟ್ ಪ್ರಕಾರ ಮೊಬೈಲ್ ಗೇಮ್ ತಯಾರಿಸೋ ಕಂಪನಿಗಳಿಗೊಂದು ಇದೊಂದು ಉತ್ತಮ ಸಂಕೇತವಾಗಿದೆ ಎಂದು ಹೇಳಲಾಗಿದೆ.
ಡಾಯಿಚ್ ಬ್ಯಾಂಕ್ ತನ್ನ ಅನಾಲಿಸಿಸ್ ರಿಪೋರ್ಟ್ ನಲ್ಲಿ ವ್ಯಕ್ತ ಪಡಿಸಲಾದ ಮಾಹಿತಿ ಈ ರೀತಿಯಾಗಿದೆ.
“ಪೋಕಿಮಾನ್ ನ ಮುಖವು ಸ್ಮಾರ್ಟ್ ಫೊನ್ ಗಳಲ್ಲಿ ಗೇಮ್ ಗಳಿಗೊಂದು ಉಜ್ವಲ ಭವಿಶ್ಯವಿದೆ,ಎಂದು ತೋರಿಸಿ ಕೊಟ್ಟಿದೆ.”
72 ಘಂಟೆಗಳಲ್ಲಿ ಇದರ ಫೇಕ್ ವರ್ಷನ್ ಕೂಡಾ ಹೊರಬಂದಿದೆ.
ಲಂಡನ್ ನಲ್ಲಿ 72 ಘಂಟೆಗಳ ಒಳಗೆ ಪೋಕಿಮಾನ್ ಗೋ ನ ಒಂದು ಫೇಕ್ ವರ್ಶನ್ ಕೂಡಾ ಲಭ್ಯವಾಗಿದೆ.
ಎಕ್ಸ್ಪರ್ಟ್ ಹೇಳೋ ಪ್ರಕಾರ,ಇದನ್ನು ಡೌನ್ ಲೋಡ್ ಮಾಡುತ್ತಲೇ ನಮ್ಮ ಇಡೀ ಮೊಬೈಲ್ ನಲ್ಲಿ ಆ ಗೇಮ್ ತನ್ನ ಪ್ರಭಾವವನ್ನು ತೋರಿಸುತ್ತದೆ,ಇದರಿಂದ ಮೊಬೈಲ್ ಹ್ಯಾಕ್ ಅಗೋ ಸಾಧ್ಯತೆಗಳು ಹೆಚ್ಚು ಅದಲ್ಲದೇ ಮೊಬೈಲ್ ಹ್ಯಾಂಗ್ ಆಗೋದು ಸಾಮಾನ್ಯವಾಗಿದೆ ಅನ್ನುತ್ತಾರೆ.ನಮ್ಮ ಸಂಪೂರ್ಣ ಮೊಬೈಲ್ ಡಾಟಾ ಫೇಕ್ ಗೇಮ್ ಮಾಡೋ ಕಂಪನಿಯವರ ಬಳಿ ಹೋಗುತ್ತದೆ,ಆದಕಾರಣ ಈ ಗೇಮ್ ನ್ನು ಕಂಪನಿಯ ಲೀಗಲ್ ಪ್ಲಾಟ್ ಫಾರಂ ನಿಂದಲೇ ಡೌನ್ ಲೋಡ್ ಮಾಡಬೇಕೆಂಬುದಾಗಿ ಸೂಚಿಸಿದ್ದಾರೆ.
ಅಷ್ಟಕ್ಕೂ ಈ ಗೇಮ್ ಏನೆಂದು ನೋಡೋಣವೇ??
ಇದೊಂದು ವಾಸ್ತವ ಜಗತ್ತಿನ(Augmented reality) ಆಧಾರದ ಮೇಲೆ ತಯಾರಿಸಲಾದ ಒಂದು ಗೇಮ್.ಪೋಕಿಮಾನ್ ಗೋ ನಿಮ್ಮ ಫೋನ್ ನ G.P.S ಹಾಗೂ clock ನ್ನು ಉಪಯೋಗಿಸುತ್ತದೆ.ಗೇಮ್ ನ ಒಳಗೆ ಹೋಗುತ್ತಿದ್ದಂತೆ ನಿಮ್ಮ ಫೋನ್ ನ ಸ್ಕ್ರೀನ್ ನಲ್ಲಿ ಪೊಕಿಮಾನ್ ಕಾಣ ಸಿಗುತ್ತಾರೆ,ನೀವು ಇನ್ನೂ ಮುಂದಕ್ಕೆ ಹೋದಂತೆ ಇನ್ನೂ ಹೆಚ್ಚಿನ ಪೊಕಿಮಾನ್ ಗಳು ನಿಮಗೆ ಕಾಣಸಿಗುತ್ತಾರೆ.
ಸಾಕಷ್ಟು ಕುತೂಹಲ ಕೆರಳಿಸುತ್ತಿರುವ ಈ ಗೇಮ್ ನಮ್ಮ ಭಾರತದಲ್ಲಿ ಯಾವಾಗ ಲಭ್ಯವಾಗುತ್ತದೋ ಕಾದು ನೋಡೋಣ!
- ಸ್ವರ್ಣಲತ ಭಟ್
POPULAR STORIES :
ಕೋಟಿ ಕೋಟಿ ಕಮಾಯಿಯ ಸುಲ್ತಾನ್‍ನ ಕೆಲವೊಂದು ಸಿಲ್ಲಿ ಮಿಸ್ಟೇಕ್ಸ್..! ನಿರ್ದೇಶಕರೇ ಎಡವಿದ್ದೀರಿ!!!!!!
ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!