ಪ್ರೇಯಸಿ ನೋಡಲಾಗಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕ!

Date:

ಪ್ರಿಯಕರನೊಬ್ಬ 3 ವರ್ಷಗಳಿಂದ ಗೆಳತಿಯನ್ನ ನೋಡಲು ಸಾಧ್ಯವಾಗಿಲ್ಲದ ಕಾರಣಕ್ಕೆ ಮನನೊಂದು , ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.. ಕೊರೊನಾ ಕಾರಣದಿಂದ ಗೆಳತಿಯನ್ನು ಭೇಟಿಯಾಗಲು 3 ವರ್ಷಗಳಿಂದ ಸಾಧ್ಯವಾಗಿರಲಿಲ್ಲ.

ಇತ್ತ ನ್ಯೂ ಇಯರ್‌ ಗೆ ಆದ್ರೂ ಗೆಳತಿ ನೋಡಲು ಹೋಗಬೇಕು ಎಂದುಕೊಂಡಿದ್ದವನಿಗೆ ಆಗಲೂ ಸಾಧ್ಯವಾಗದ ಕಾರಣ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

ಮೃತನನ್ನ 22 ವರ್ಷದ ವಿನೀತ್ ಎಂದು ಗುರುತಿಸಲಾಗಿದೆ.. ಈತ ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಸೋಂಕು ಹೆಚ್ಚಾಗಿರುವ ಕಾರಣ ಪ್ರಿಯತಮೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಹೀಗೆ ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾನೆ.. ಪಹದಿ ಶರೀಫ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀನಗರ ಕಾಲೋನಿಯ ಹೋಟೆಲ್‍ವೊಂದರಲ್ಲಿ ಕೆಲಸಕ್ಕೆ ಸೇರಿದ್ದ ವಿನೀತ್ ಅದೇ ಪ್ರದೇಶದಲ್ಲೇ ವಾಸವಾಗಿದ್ದ. ಹುಟ್ಟೂರಾದ ಉತ್ತರ ಪ್ರದೇಶದಲ್ಲಿ ವಿನೀತ್ ಯುವತಿಯೊಬ್ಬಳನ್ನ ಪ್ರೀತಿಸಿ ಮದುವೆ ಆಗುವುದಾಗಿ ಹೇಳಿದ್ದ. ಆದ್ರೆ ಮುಂದಿನ ಜೀವನಕ್ಕೆ ಹಣ ಸಂಪಾದನೆ ಮಾಡುವ ಸಲುವಾಗಿ ಬೆಂಗಳೂರಿಗೆ ದುಡಿಯಲು ಬಂದಿದ್ದ..

ವಿನೀತ್ ನಗರಕ್ಕೆ ಬಂದ ಮೊದಲ ವರ್ಷವೇ ಕೋವಿಡ್ ಲಾಕ್‍ಡೌನ್‍ನಿಂದ ಮತ್ತೆ ಯುಪಿಗೆ ಹೋಗಲು ಸಾಧ್ಯವಾಗಲಿಲ್ಲ. ಕೊರೊನಾ ಸಂಕಷ್ಟದಿಂದ ಸಾಕಷ್ಟು ಹಣದ ಸಮಸ್ಯೆಯನ್ನೂ ಎದುರಿಸಿದ್ದಾನೆ. ಇದರಿಂದಾಗಿ ಊರಿಗೆ ಹೋಗಲು ಹಣಕಾಸಿನ ಸಮಸ್ಯೆಯಾಗಿದೆ. ಪ್ರತಿದಿನ ಕೆಲಸದ ನಂತರ ಗಂಟೆಗಟ್ಟಲೇ ತನ್ನ ಪ್ರೇಯಸಿ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ.

ಒಂದು ದಿನ ಎಂದಿನಂತೆ ಕೆಲಸ ಮುಗಿಸಿ ಪ್ರೇಯಸಿಗೆ ಫೋನ್ ಮಾಡಿದಾಗ ಆಕೆ ಸಿಟ್ಟಾಗಿದ್ದಾಳೆ. 3 ವರ್ಷದಿಂದ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೆ ನ್ಯೂ ಇಯರ್‌ ಗೆ ಬರುವುದಾಗಿ ಹೇಳಿದ್ದ ವಿನೀತ್ ಗೆ ಊರಿಗೆ ಹೋಗಲು ಸಾಧ್ಯವಾಗದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...