ಮಹಿಳೆ ಬಾಗಿಲು ತೆಗೆಯುತ್ತಿದ್ದಂತೆ ಟಾಯ್ಲೆಟ್ ನಲ್ಲಿ ನಾಗರಹಾವು ಪ್ರತ್ಯಕ್ಷ

Date:

ಹಾವು ಅಂದ್ರೆ ಸಾಕು ಎದ್ನೋ-ಬಿದ್ನೋ ಎಂದು ಓಡುವ ಜನರೇ ಹೆಚ್ಚು. ಇನ್ನು ಮನೆಯೊಳಗೇ ಬುಸ್​ ಬುಸ್​ ಅಂದ್ರೆ ಹೇಗಾಗಬೇಡ?

ಇಲ್ಲೊಂದು ನಾಗರ ಹಾವು ಮನೆಯೊಂದರ ಟಾಯ್ಲೆಟ್​ ರೂಮಿನಲ್ಲಿ ಸೇರಿಕೊಂಡು ಆ ಮನೆಯವರನ್ನೆಲ್ಲ ಬೆಚ್ಚಿಬೀಳಿಸಿದೆ.

ಕೊನೆಗೆ ಆ ಮನೆಯ ಮಹಿಳೆ ಆರತಿ ಬೆಳಗಿ ಪೂಜೆಯನ್ನೂ ಮಾಡಿದ್ದಾರೆ. ಇಂತಹ ಘಟನೆ ಶಿವಮೊಗ್ಗ ನಗರದ ಶಿವಪ್ಪನಾಯಕ ಬಡಾವಣೆಯ ಸಂಭವಿಸಿದೆ. ಮಂಗಳವಾರ ಬೆಳಗ್ಗೆ ಮನೆಯ ಒಡತಿ ಶಬರಿ ಎಂಬಾಕೆ ಟಾಯ್ಲೆಟ್​ಗೆ ಹೋಗಲೆಂದು ಬಾಗಿಲು ತೆಗೆಯುತ್ತಿದ್ದಂತೆ ಟಾಯ್ಲೆಟ್​ನ ಪಿಟ್​ನಲ್ಲಿ ನಾಗರಹಾವು ಬುಸ್​ ಅಂತ ಎಡೆ ಎತ್ತಿದೆ. ಹಾವನ್ನು ನೋಡುತ್ತಿದ್ದಂತೆ ಭಯದಿಂದ ಶಬರಿ ಹೊರ ಓಡಿದ್ದಾರೆ. ಸುಮಾರು 4 ಅಡಿ ಉದ್ದದ ನಾಗರಹಾವು ಟಾಯ್ಲೆಟ್ ಫಿಟ್​ನ ನೀರಿನ ಪೈಪ್​ನಲ್ಲಿ ಸಿಕ್ಕಿಹಾಕಿಕೊಂಡಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸ್ನೇಕ್​ ಕಿರಣ್​, ನಾಗರಹಾವನ್ನು ಸುರಕ್ಷಿತವಾಗಿ ಪಿಟ್​ನಿಂದ ತೆಗೆದು ಹೊರಗೆ ತಂದರು. ಬಳಿಕ ಆ ಮನೆಯ ಒಡತಿ ನಾಗರಹಾವಿಗೆ ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಿದರು. ನಂತರ ಸ್ನೇಕ್​ ಕಿರಣ್​ ಅವರು ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...