ಮಾರುಕಟ್ಟೆಯಲ್ಲಿ ಕೊವಿಡ್ ಮಾತ್ರೆ ಲಭ್ಯ: ದರ ಇಷ್ಟು

0
42

ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ. ಗೆ ಮಾಲ್ ಫ್ಲೂ (ಮೊಲ್ನುಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ.

ಮಾಲ್ ಪ್ಲೂ ಮಾತ್ರೆಗಳ ಬೆಲೆ ಕೇವಲ 35 ರೂ. ಆಗಿದೆ ಎಂದು ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ವಕ್ತಾರರೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಸ್ಟ್ರೀಪ್ ನಲ್ಲಿ 10 ಮಾತ್ರೆಗಳು ಇರಲಿದ್ದು, ಐದು ದಿನಗಳವರೆಗೂ 40 ಮಾತ್ರೆಗಳಿಗೆ ರೂ. 1,400 ವೆಚ್ಚ ತಗುಲಲಿದೆ. ಕೋವಿಡ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಈ ಮಾತ್ರೆಗಳಲ್ಲಿ ತಯಾರಿಸಲಾಗಿದೆ. ಮುಂದಿನ ವಾರ ದೇಶಾದ್ಯಂತ ಔಷಧ ಮಾರುಕಟ್ಟೆಗಳಲ್ಲಿ ಈ ಮಾತ್ರೆಗಳು ದೊರೆಯಲಿವೆ ಎಂದು ಅವರು ಹೇಳಿದ್ದಾರೆ.

ಭಾರತ ಹಾಗೂ 100 ಕಡಿಮೆ, ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಿಗೆ ಮೊಲ್ನಪಿರವಿರ್ ಮಾತ್ರೆ ಪೂರೈಸಲು ಎಂಎಸ್ ಡಿ ಕಂಪನಿಯೊಂದಿಗೆ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿತ್ತು. ಈ ಮಾತ್ರೆಗಳ ಮೂರನೇ ಹಂತದ ಪ್ರಯೋಗವನ್ನು ತಜ್ಞರ ಸಮಿತಿ ಮುಂದೆ ಇಡಲಾಗಿತ್ತು.

ಆಸ್ಪತ್ರೆಯಲ್ಲಿರುವ ಅಥವಾ ಹೆಚ್ಚಿನ ಅಪಾಯವಿರುವ ವಯಸ್ಕ ರೋಗಿಗಳಿಗೆ 200 ಎಂಜಿ ಮೊಲ್ನಪಿರವಿರ್ ಮಾತ್ರೆಗಳ ತಯಾರಿಕೆ ಹಾಗೂ ಮಾರುಕಟ್ಟೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕಳೆದ ವಾರ ಅನುಮೋದನೆ ನೀಡಿತ್ತು.

LEAVE A REPLY

Please enter your comment!
Please enter your name here