ಸಿನಿಮಾ ರಂಗದಲ್ಲಿ ಮಹಾಮಾರಿ ಕೊರೋನಾ ಭಾರೀ ಸದ್ದು ಮಾಡುತ್ತಿದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ನ ಟಾಪ್ ಹೀರೋಯಿನ್‌ಗಳು ಒಬ್ಬರ ನಂತರ ಮತ್ತೊಬ್ಬರು ಎಂಬಂತೆ ಸೋಂಕಿಗೆ ಒಳಗಾಗುತ್ತಿದ್ದಾರೆ.
ಈಗಾಗಲೇ ಟಾಲಿವುಡ್ ಸೂಪರ್‌ಸ್ಟಾರ್‌ಗಳಾದ ಮಹೇಶ್ ಬಾಬು, ಮಂಚು ಮನೋಜ್, ಲಕ್ಷ್ಮಿ ಸಂಗೀತ ನಿರ್ದೇಶಕ ತಮನ್ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಈಗ ಹೊಸದಾಗಿ ನಟ ಬಾಹುಬಲಿ ಕಟ್ಟಪ್ಪ ಸತ್ಯರಾಜ್ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರಿಗೆ ಕೋವಿಡ್ ಪಾಸಿಟಿವ್ ಕಂಡುಬಂದ ನಂತರ ಚಿಕಿತ್ಸೆಗಾಗಿ ಕುಟುಂಬ ಸದಸ್ಯರು ಅವರನ್ನು ನಿನ್ನೆ ಸಂಜೆ ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮುನ್ನ ತಮಿಳು ಚಿತ್ರರಂಗದ ಹಾಸ್ಯನಟರಾದ ವಡಿವೇಲು, ಚಿಯಾನ್ ವಿಕ್ರಮ್, ಅರ್ಜುನ್, ಕಮಲ್ ಹಾಸನ್ ಮತ್ತಿತರರು ಕೊರೊನಾ ಸೋಂಕಿಗೆ ಒಳಗಾಗಿದ್ದರು.