ವಿಮಾನಯಾನದಲ್ಲಿ ಪೈಲಟ್ ನಮಗೆ ತಿಳಿಸದಿರೋ ಕೆಲವು ವಿಷಯಗಳು

Date:

ಪ್ಲೇನ್ ನಲ್ಲಿ ಪ್ರಯಾಣ ಮಾಡೋವಾಗ ಬಂದೊದಗೋ ಕೆಲವೊಂದು ಸೂಕ್ಷ್ಮ ಸಂಗತಿಗಳ ಬಗ್ಗೆ ನಮಗೆ ಪೈಲಟ್ ಯಾಕೆ ತಿಳಿಸುತ್ತಿಲ್ಲ? ನಾವು ವಿಮಾನದೊಳಗೆ ಅಡಿಯಿಟ್ಟಂತೆ ಪೈಲಟ್ ಹಾಗೂ ಫ್ಲೈಟ್ ಅಟೆಂಡೆಂಟ್ ನಮಗೆ ಕೆಲವೊಂದು ಇನ್ ಸ್ಟ್ರಕ್ಷನ್ ಕೊಡುತ್ತಾರೆ, ಆದ್ರೆ ಪೂರ್ಣ ಮಾಹಿತಿಯನ್ನು ನೀಡಲ್ಲ, ಯಾಕಂದ್ರೆ, ಪ್ರಯಾಣಿಕರ ನಡುವೆ ಭಯ, ಗೊಂದಲಗಳುಂಟಾಗಿ, ಆ ಭಯಕ್ಕೆ ಬೇರೇನೂ ತಪ್ಪು ಹೆಜ್ಜೆ ಇಡಬಾರದಲ್ಲವೇ? ಆ ವಿಷ್ಯಗಳು ಯಾವುವು ಎಂಬುದು ನಿಮಗೆ ಗೊತ್ತೆ???
ಕಮರ್ಶಿಯಲ್ ಪ್ಲೇನ್ ನ ಒಂದು ಇಂಜಿನ್ ಹಾಳಾದರೂ ಸಹ ಪ್ಲೇನ್ ಗೆ ಸುರಕ್ಷಿತವಾಗಿ ಹಾರಲು ಸಾಧ್ಯ, ಇದಕ್ಕಾಗಿ ಪೈಲಟ್ ಯಾವತ್ತೂ ವಿಮಾನದ ಇಂಜಿನ್ ಹಾಳಾಗಿದೆ ಅನ್ನೋಲ್ಲ, ಆದ್ರೆ ವಿಮಾನದ ಕ್ರೂ ಮೆಂಬರ್ ಗೆ ಈ ವಿಷ್ಯ ತಿಳಿದಿರುತ್ತದೆ.
ತನಗೆ ಏನೂ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂಬುದನ್ನು ಪೈಲಟ್ ಯಾವತ್ತೂ ಹೇಳಲ್ಲ, ಆದ್ರೆ ಇದ್ರ ಬದಲಾಗಿ ಲ್ಯಾಂಡಿಂಗ್ ಜಾಗದಲ್ಲಿ ಸ್ವಲ್ಪ ಮಂಜು ಮುಸುಕಿದೆ ಅನ್ನುತ್ತಾರೆ.
ಪೈಲಟ್ ಒಂದು ವೇಳೆ ಫ್ಲೈಟ್ ಅಟೆಂಡೆಂಟ್ ಗೆ ಕುಳಿತುಕೊಳ್ಳಲು ಹೇಳಿದಲ್ಲಿ ಏನೋ ಗಂಭೀರ ಸಮಸ್ಯೆ ಇದೆ ಅಂದುಕೊಳ್ಳಿ.
ನಿಮಗೆ ನಿಮ್ಮ ಪ್ರಯಾಣದಲ್ಲಿ ಹೆಡ್ ಫೋನ್ ತೆಗೆಯಲು ಹೇಳಿದಲ್ಲಿ , ಪೈಲಟ್ ನೀಡುವ ಸೂಚನೆಯನ್ನು ಗಮನವಿಟ್ಟು ಕೇಳಬೇಕೆಂದು ನಾವು ಅರ್ಥ ಮಾಡಿಕೊಳ್ಳಬೇಕು.
ಭಯಂಕರ ತೂಫಾನಿ ಗಾಳಿ ಎದುರಾದರೆ ಅಥವಾ ಗಾಳಿಯ ಶಬ್ದ ಕೇಳಿಸಿದಲ್ಲಿ ಪೈಲಟ್ ನಿಮಗೆ ಕೇವಲ ಹವಾಮಾನ ಸರಿಯಿಲ್ಲ ಎಂಬುದಷ್ಟೇ ಹೇಳುತ್ತಾನೆ.
ವಿಮಾನವನ್ನು ಟೆರರಿಸ್ಟ್ ಹೈಜಾಕ್ ಮಾಡಿದಲ್ಲಿ ಎಲ್ಲಿಯವರೆಗೆ ಸಾಧ್ಯನೋ ಅಲ್ಲಿಯ ವರೆಗೂ ಹೈಜಾಕ್ ವಿಷ್ಯದ ಬಗ್ಗೆ ಪ್ರಯಾಣಿಕರಿಗೆ ತಿಳಿಸಲಾರ.ಇಂತಹ ಪರಿಸ್ಥಿತಿಯಲ್ಲಿ ಪೈಲಟ್, ಫ್ಲೈಟ್ ಲ್ಯಾಂಡ್ ಅಗೋದ್ರೊಳಗೆ ಎಲ್ಲ ವಿಂಗ್ ಗಳ ಫ್ಲೇಪ್ ಗಳನ್ನು ಮೇಲಕ್ಕೆ ಮಾಡುತ್ತಾನೆ.
ಪ್ಲೇನ್ ನಲ್ಲಿ ಗಾಳಿಯ ಒತ್ತಡ(Air pressure)ಮುಂದಿನಿಂದ ಹಿಂದಿನ ಕಡೆಗಿರುತ್ತದೆ,ಇದಲ್ಲದೆ ಮುಂದಿನ ಸೀಟುಗಳಲ್ಲಿ ಯಾವಾಗಲೂ ಫ಼್ರೆಶ್ ಗಾಳಿ ಸಿಗುತ್ತದೆ.
ಪ್ಲೇನ್ ನಲ್ಲಿ ಹಿಂದಿನ ಸೀಟುಗಳು ಸೀ-ಸಾ ದ ಅನುಭವ ನೀಡಿದ್ರೂ ಸಹ ವಿಂಗ್ ಸೀಟ್ ನ ಬಳಿ ಕುಳಿತುಕೊಳ್ಳುವುದೇ ಆರಾಮದಾಯಕ ವಾಗಿರುತ್ತದೆ.
ಮೊಬೈಲ್ ಹಾಗೂ ಇನ್ನಿತರ ಇಲೆಕ್ಟ್ರೋನಿಕ್ ವಸ್ತುಗಳನ್ನು ಪ್ಲೇನ್ ನಲ್ಲುಪಯೋಗಿಸಬಾರದೆಂದು ಪದೇ ಪದೇ ಹೇಳುತ್ತಿರುತ್ತಾರೆ.ಯಾಕಂದ್ರೆ,ವಿಮಾನದಲ್ಲಿ ಎಷ್ಟೋ ಕೆಲಸಗಳಿಗೆ ರೇಡಿಯೋ ಸಿಗ್ನಲ್ಸ್ ಅಗತ್ಯವಿರುತ್ತದೆ,ಇಂತಹ ಸಮಯದಲ್ಲಿ ಮೊಬೈಲ್ ಫ್ರೀಕ್ವೆನ್ಸಿ ಹಾಗೂ ರೇಡಿಯೋ ಫ್ರೀಕ್ವೆನ್ಸಿ ಗಳ ಘರ್ಷಣೆ ಉಂಟಾಗುವ ಸಾಧ್ಯತೆಗಳಿರುತ್ತದೆ. ನಿಮಗಿದಿಷ್ಟು ತಿಳಿದಿರಲಿ!

  • ಸ್ವರ್ಣಲತ ಭಟ್

POPULAR  STORIES :

ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?

ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?

ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!

ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...