ಸೇತುವೆ ನಿರ್ಮಿಸಿ, ಮಕ್ಕಳಿಗೆ ಶಾಲೆ ದಾರಿ ತೋರಿದ 17ರ ಪೋರ..!

Date:

ಕೆಲವೊಂದ್ ಕೆಲಸಗಳು ಆಗ್ಬೇಕಾಗಿರುತ್ತೆ..! ಆ ಕೆಲಸ ಆದ್ರೆ ಎಷ್ಟೋ ಜನರಿಗೆ ಅನುಕೂಲ ಆಗುತ್ತೆ..! ಆದ್ರೆ ನಮ್ ಜಪ್ರತಿನಿಧಿಗಳಿಗೆ ಅಂತ ಕೆಲಸಗಳು ಕಣ್ಣಿಗೆ ಕಾಣುವುದೇ ಇಲ್ಲ..! ಕಂಡ್ರೂ ಉದಾಸೀನ ಮಾಡ್ತಾರೆ..! ಅವರಿಗೆ ಓಟ್ ಹಾಕಿ ಗೆಲ್ಲಿಸಿಕೊಟ್ಟ ತಪ್ಪಿಗೆ ತೆಪ್ಪಗೆ ಕೂತ್ಕೊಳ್ಳೋದು ಒಂದೇ ನಮ್ ಕರ್ಮ..! ಆದ್ರೆ ಮುಂಬೈನ ಯುವಕನೊಬ್ಬನಿಗೆ ಇನ್ನೂ ಓಟ್ ಹಾಕೋ ಏಜ್ ಆಗಿಲ್ಲ,..! ಈ ವಯಸ್ಸಲ್ಲೇ ಜನಪ್ರತಿನಿಧಿಗಳಿಂದಾಗದ ಊರುಪಕಾರಿ ಕೆಲಸವನ್ನು ಮಾಡಿದ್ದಾನೆ..!
ಆ್ಞಂ.., “ಕನಸಿನ ನಗರಿ” ಅಂತ ಕರೆಯುವ ಮುಂಬೈ ಕಸದ ನಗರಿಯೂ ಹೌದು..! ಕೆಲವೊಂದು ಕಡೆಯಂತೂ ಗಬ್ಬೆದ್ದು ಹೋಗಿದೆ..! ಮೂಗು ಮುಚ್ಚಿಕೊಂಡೇ ಹೋಗ್ಬೇಕು.., ನಡೆದುಕೊಂಡು ಹೋಗೋಕಂತೂ ಸಿಕ್ಕಾಪಟ್ಟೆ ಹಿಂಸೆ ಆಗುತ್ತೆ..! ಅಷ್ಟೊಂದು ಗಲೀಜು ಅಲ್ಲಿದೆ..!
ಮುಂಬೈನ ಇಂಥಹ ಕಸದ ತಾಣಗಳಲ್ಲಿ “ಸತೇ ನಗರ್” ಕೂಡ ಒಂದಾಗಿದೆ..! ಈ ಸತೇನಗರ್ ನಲ್ಲಿ ಶಾಲಾ ಮಕ್ಕಳಂತೂ ದಿನಾಲೂ ಕೊಳಚೆ ಚರಂಡಿಯನ್ನೇ ದಾಟಿ ಶಾಲೆಗೆ ಹೋಗುವುದು- ಬರುವುದು ಮಾಡ್ತಾ ಇರ್ತಾರೆ…! ಮೂಗು ಮುಚ್ಚಿಕೊಂಡು ಹೋದ್ರೂ ಆ ಕೆಟ್ಟವಾಸನೆ ಮೂಗಿಗೆ ಬಡಿಯುತ್ತಲೇ ಇರುತ್ತೆ…! ಆ ಕೊಳಚೆಯಲ್ಲಿ ನಡೆದು ಹೋಗೋದ್ರಿಂದ ಚರ್ಮದ ಕಾಯಿಲೆಗಳಿಗೂ ಮಕ್ಕಳು ತುತ್ತಾಗ್ತಾ ಇರ್ತಾರೆ..! ಜನಪ್ರತಿನಿಧಿಗಳಂತೂ ಈ ಬಗ್ಗೆ ಗಮನವೇ ಕೊಟ್ಟಿರಲ್ಲ..!
ಇಷ್ಟಾದ್ರೂ.. ಇವತ್ತಿನ ಪರಿಸ್ಥಿತಿಯೇ ಬೇರೆ. ಇಂದು ಅಲ್ಲಿನ ಮಕ್ಕಳು ಇತರ ಶಾಲಾ ಮಕ್ಕಳಂತೆ ಆರಾಮವಾಗಿ, ಖುಷಿಖುಷಿಯಿಂದ ಆಟ ಆಡ್ಕೊಂಡು ಶಾಲೆಗೆ ಹೋಗಿ ಬರುತ್ತಿದ್ದಾರೆ..! ಇದಕ್ಕೆ ಕಾರಣವೇ, 17ವರ್ಷ ವಯಸ್ಸಿನ “ಇಶಾನ್ ಬಲ್ಬಲೆ”..!
“ಇಶಾನ್ ಬಲ್ಬಲೆ” ಥಾಣೆಯ ಬೇಡೇಕರ್ ಕಾಲೇಜಿನ ದ್ವಿತೀಯ ಪಿಯುಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿ. ಈತ ದಿನಾಲೂ ಸತೇ ನಗರ ದಲ್ಲಿ ಶಾಲಾ ಮಕ್ಕಳು ಕೊಳಚೆಯನ್ನು ದಾಟಿ ಶಾಲೆಗೆ ಹೋಗ್ತಾ..ಬರ್ತಾ ಇರುವುದನ್ನು ಗಮನಿಸುತ್ತಿದ್ದ..! “ಆ ಕೊಳಚೆಯಲ್ಲಿ ಶಾಲೆಗೆ ಹೋಗಿ ಪಾಠ ಕೇಳುವುದಾದರೂ ಹೇಗೆ..? ಈ ಬಗ್ಗೆ ಯಾರೂ ಗಮನ ಕೊಡ್ತಾ ಇಲ್ವಲ್ಲಾ..? ಇದಕ್ಕೆ ನಾನೇ ಏನಾದ್ರೂ ಪರಿಹಾರ ಕಂಡು ಹಿಡಿಯಬೇಕೆಂದು ಯೋಚನೆ ಮಾಡ್ತಾನೆ”..! ಹೀಗೆ ಯೋಚಿಸುತ್ತಿರುವಾಗಲೇ ಆತನಿಗೆ ಹೊಳೆದಿದ್ದು “ಬ್ಯಾಂಬೋ ಬಿಡ್ಜ್” ಅಥವಾ “ಬಿದಿರಿನ ಸೇತುವೆ”..! ಆ ಯೋಚನೆ ಹೊಳೆದಿದ್ದೇ ತಡ ಸೇತ್ ನಗರದ ಆ ಕೆಟ್ಟ ಚರಂಡಿಗೆ ಸೇತುವೆ ನಿಮರ್ಿಸ್ತಾನೆ..! ಈ ಸೇತುವೆ ನಾಲ್ಕು ಅಡಿ ಅಗಲ, ನೂರು ಅಡಿ ಉದ್ದವಿದ್ದು… ಏಕಕಾಲಕ್ಕೆ 50 ಜನರ ತೂಕವನ್ನೂ ತಡೆದುಕೊಳ್ಳಬಲ್ಲ ಸಾಮಾಥ್ರ್ಯ ಹೊಂದಿದೆ..! ಜನಪ್ರತಿನಿಧಿಗಳೂ, ಸರ್ಕಾರ, ಆ ಭಾಗದ ದೊಡ್ಡ ದೊಡ್ಡ ವ್ಯಕ್ತಿಗಳಿಂದಾಗದ ಈ ಕೆಲಸಕ್ಕೆ “ಇಶಾನ್ ಬಲ್ಬಲೆ” ತೆಗೆದುಕೊಂಡಿದ್ದು ಕೇವಲ ಏಳೇ ಏಳು ದಿನಗಳ ಕಾಲಾವಕಾಶ..!
ಕೆಲವೊಂದ್ಸಲ ನಾವು ನಮ್ ಒಬ್ಬರಿಂದ ಏನೂ ಮಾಡಕ್ಕೆ ಆಗಲ್ಲ ಅಂತ ಸುಮ್ನೆ ಕೂತ್ಕೊಳ್ತೀವಿ.., ಆದ್ರೆ ಒಬ್ಬರೇ ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಹುದು..! ಬದಲಾವಣೆ ಆರಂಭವಾಗುವುದಾದರೆ ಆ “ಬದಲಾವಣೆಗೆ ನೀ ಹರಿಕಾರನಾಗೆಂಬ” ಮಾತಿನಂತೆ `ಇಶಾನ್ ಬಲ್ಬಲೆ’ ತಾತ್ಕಾಲಿಕ ಸೇತುವೆ ನಿರ್ಮಿಸುವ ಮೂಲಕ ಕಿರಿಯ ವಯಸ್ಸಲ್ಲೇ ಹಿರಿಯ ಕೆಲಸ ಮಾಡಿ ತೋರಿಸಿದ್ದಾರೆ..! ಇವರು ಪ್ರತಿಯೊಬ್ಬರಿಗೂ ಮಾದರಿ, ರಾಜಕಾರಣಿಗಳಿಗೆ ಇವರು ಮಾಡಿದ ಕೆಲಸ “ಪಾಠ”..! ನಾವೆಲ್ಲರೂ ಒಟ್ಟಾಗಿ “ಇಶಾನ್ ಬಲ್ಬಲೆ”ರಂತೆ ಕೆಲಸ ಮಾಡಿದರೆ “ಸ್ವಚ್ಚ ಭಾರತ”, “ಆರೋಗ್ಯಯುತ” ಭಾರತ ನಿರ್ಮಾಣದ ಕನಸು ನನಸಾಗಲು ತುಂಬಾ ಕಾಲಬೇಕಿಲ್ಲ..!

  • ಶಶಿಧರ ಡಿ ಎಸ್ ದೋಣಿಹಕ್ಲು

POPULAR  STORIES :

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...