No menu items!
12.4 C
Munich
Wednesday, April 29, 2026

ಫೇಸ್ ಬುಕ್ ಎಷ್ಟೊಂದು ಪವರ್ಫುಲ್ ಗೊತ್ತಾ..? ಬಡವನ ಬಾಳಿಗೆ ಬೆಳಕಾದ ಸಾಮಾಜಿಕ ಜಾಲತಾಣ

Must read

ಈ ಸಾಮಾಜಿಕ ಜಾಲತಾಣಗಳೇ ಹಾಗೆ.. ಜಗತ್ತಿಗೆ ತಿಳಿದಿರದ ವ್ಯಕ್ತಿಯನ್ನು ಅಟ್ಟಕ್ಕೇರಿಸುತ್ತವೆ. ಮೇಲಕ್ಕೇರಿದವನನ್ನು ಪಾತಾಳಕ್ಕೆಳೆಯುತ್ತವೆ. ಆದರೆ ಇದೇ ಸಾಮಾಜಿಕ ಜಾಲತಾಣಗಳು ಇಲ್ಲೊಬ್ಬ ಬಡ ಬಾಲಕನ ಜೀವನಕ್ಕೆ ದಾರಿ ದೀಪವಾಗಿದೆ. ಆತನ ಭವಿಷ್ಯಕ್ಕೆ ಬೆಳಕಾಗಿದೆ. ಅದೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಫೇಸ್ ಬುಕ್..!
ಇತ್ತೀಚೆಗೆ ಒಂದು ಬಾಲಕ ವಿದ್ಯುತ್ ಕಂಬದ ಕೆಳಗೆ ಕುಳಿತು ಓದುತ್ತಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದು ಫೇಸ್ಬುಕ್ನಲ್ಲಿ ಅಸಂಖ್ಯಾತ ಜನರಿಂದಲೂ ಲೈಕ್ಸ್, ಕಮೆಂಟ್ಸ್ ಗಳನ್ನು ಪಡೆದಿತ್ತು. ಆದರೆ ಅದೇ ಲೈಕ್ಸ್, ಕಮೆಂಟ್ಸ್ ಗಳೇ ಆ ಬಾಲಕನ ಬಾಳಿಗೆ ವರದಾನವಾಗಿದೆ.

ಇಷ್ಟಕ್ಕೂ ಆ ಕಥೆಯೇನು..?

ಉತ್ತರ ಪ್ರದೇಶದ 13 ವರ್ಷದ ಹರೇಂದ್ರ ಸಿಂಗ್ ಚೌಹಾಣ್ ಎಂಬ ಬಾಲಕ ಬಡ ಕುಟುಂಬದ ಓರ್ವ ಸದಸ್ಯ. ಅದ್ಹೇಗೋ ಕೂಡಿಟ್ಟ ಹಣದಲ್ಲಿ ಒಂದು ತೂಕದ ಯಂತ್ರವನ್ನು ಖರೀದಿಸಿದ. ಶಾಲೆಯಿಂದ ಬಂದ ಕೂಡಲೇ ರಸ್ತೆ ಪಕ್ಕದಲ್ಲಿ ಕುಳಿತು ಓದುತ್ತಿದ್ದ. ಅದರ ಜೊತೆಗೆ ತೂಕದ ಯಂತ್ರವನ್ನೂ ಕೊಂಡೊಯ್ಯುತ್ತಿದ್ದ. ಆಗ ಕೆಲ ತೂಕದ ಮನುಷ್ಯರು ತಮ್ಮ ಭಾರವನ್ನು ಕಂಡುಹಿಡಿಯಲು ಹಣ ಕೊಟ್ಟು ತೂಕ ಪರೀಕ್ಷಿಸುತ್ತಿದ್ದರು. ಇದರಿಂದ ಆ ಬಾಲಕನಿಗೆ ಉದ್ಯೋಗ ಹಾಗೂ ಓದು ಎರಡೂ ದೊರೆತಂತಾಗುತ್ತಿತ್ತು.
ಅದನ್ನು ಭಾರತಕ್ಕಂಟಿದ ಕರ್ಮ ಎನ್ನಬೇಕೋ ಎನೋ ಗೊತ್ತಿಲ್ಲ. ಹರೇಂದ್ರ ಚೌಹಾಣ್ನ ಮನೆಯಲ್ಲಿ ವಿದ್ಯುತ್ ಸಂಪರ್ಕ ಇರುತ್ತಿರಲಿಲ್ಲ. ಆದರೆ ಓದುವ ಆಸೆಯನ್ನೂ ಕೈಬಿಡಲು ಸಾಧ್ಯವೂ ಇರಲಿಲ್ಲ. ಆದ್ದರಿಂದ ಹರೇಂದ್ರ ಚೌಹಾನ್ ರಾತ್ರಿ ವೇಳೆಯಲ್ಲಿ ರಸ್ತೆ ಪಕ್ಕದ ಕಂಬದ ಬಳಿ ಕೂತು ಓದುತ್ತಿದ್ದ. ಇದನ್ನು ಗಮನಿಸಿದ ಯಾರೋ ಒಬ್ಬ ವ್ಯಕ್ತಿ ಆ ಫೋಟೋ ತೆಗೆದು ಫೇಸ್ ಬುಕ್ ಗೆ ಅಪ್ಲೋಡ್ ಮಾಡಿದರು ನೋಡಿ. ಮುಂದೆ ನಡೆದದ್ದು ಮಹಾನ್ ಮ್ಯಾಜಿಕ್.
ಯೆಸ್.. ಆ ಒಂದು ಫೋಟೋ ಭಾರೀ ಪ್ರಚಾರ ಗಿಟ್ಟಿಸಿಕೊಂಡಿತು. ಬಡ ಬಾಲಕ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಮಂತನಾದ. ಅದೃಷ್ಠಕ್ಕೆ ಆ ಫೋಟೋ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಕಣ್ಣಿಗೂ ಬಿತ್ತು. ಮರುದಿನವೇ ಆ ಬಾಲಕನನ್ನು ಕರೆಸಿದ ಅಖಿಲೇಶ್ ಆ ಬಾಲಕನಿಗೆ ಸುಮಾರು 5 ಲಕ್ಷ ರೂಪಾಯಿಯನ್ನು ನೀಡುವ ಮೂಲಕ ಆತನ ಓದಿಗೆ ಆಸರೆಯಾಗಲು ಮುಂದೆ ಬಂದಿದ್ದಾರೆ.
ಈ ಘಟನೆಯನ್ನು ಗಮನಿಸಿದರೆ, ಸಾಮಾಜಿಕ ಜಾಲತಾಣಗಳ ಶಕ್ತಿ ಎಂಥದ್ದು ಎಂಬುದರ ಅರಿವಾಗುತ್ತದೆ. ಅದರಲ್ಲೂ ಫೇಸ್ಬುಕ್ ಮಾಡಿದ ಈ ಮಹಾನ್ ಕಾರ್ಯಕ್ಕೆ ಒಮ್ಮೆ ಥ್ಯಾಂಕ್ಸ್ ಹೇಳಬೇಕನಿಸುತ್ತೆ. ಅಲ್ಲವೇ..?

  • ರಾಜಶೇಖರ ಜೆ

POPULAR  STORIES :

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article