ಮೋದಿಜೀಯವರ ನ್ಯೂ ಏರ್ ಇಂಡಿಯಾದ ಬಗ್ಗೆ ನಿಮಗೆಷ್ಟು ಗೊತ್ತು..?

Date:

ನಮ್ಮ ಪ್ರಧಾನ ಮಂತ್ರಿಗಳ ಹಾಗೂ ರಾಷ್ಟ್ರಪತಿಯವರ ಒಂದು ವ್ಯಾವಹಾರಿಕ ಏರ್ ಕ್ರಾಫ್ಟ್ ಏರ್ ಇಂಡಿಯಾ.ಪ್ರಸ್ತುತ ಈಗ ಈ ತರಹದ 3 ಏರ್ ಕ್ರಾಫ್ಟ್ ಹಾರುತ್ತಿದ್ದು,ಇವುಗಳನ್ನು V.I.P ಫ್ಲೈಟ್ ಎಂದು ಪ್ರತ್ಯೇಕಿಸಲಾಗಿದೆ.ಇವುಗಳ ಕಾರ್ಯಾಚರಣೆ ನಮ್ಮ ಭಾರತೀಯ ವಾಯುಸೇನೆಯದ್ದಾಗಿದ್ದು,ಇದರ ನಿರ್ವಹಣೆ ಹಾಗೂ ಓಡಾಟವನ್ನು ಇಂಡಿಯನ್ ನ್ಯಾಶನಲ್ ಏರ್ ಲೈನ್ಸ್ ಆಗಿರೋ ಏರ್ ಇಂಡಿಯಾ ನಡೆಸುತ್ತಿದೆ.
ಈಗಿರೋ ಏರ್ ಇಂಡಿಯಾವು,Boeing 747 ಒಂದು ಹಳೆಯ ಮಾಡೆಲ್ ಆಗಿದ್ದು,ಇದ್ರಲ್ಲಿ ಕಡಿಮೆ ಸುರಕ್ಷಣಾ ವ್ಯವಸ್ತೆಯಿದೆ.ನಮ್ಮ ಪ್ರಧಾನ ಮಂತ್ರಿಗಳೋ ನಿರಂತರ ಸಂಚಾರ ಮಾಡೋ ವ್ಯಕ್ತಿಯಾಗಿದ್ದು,ಅನೇಕ ಕಡೆ ಮೀಟಿಂಗ್ ನಡೆಸುತ್ತಿರುತ್ತಾರೆ.ಅವರು ವಿಮಾನ ಹಾರಾಟದಲ್ಲೇ ಅದೆಷ್ಟೋ ಸಾರಿ ಮೀಟಿಂಗ್ ನಡೆಸುತ್ತಾರೆ.ಇಂತಹ ವಿಷ್ಯಗಳಿಗೆ ಸಂಬಂಧಿಸಿದಂತೆ ಅವರಿಗೆ ಕೆಲವೊಂದು ವಿಶೇಷ ಸೌಲಭ್ಯಗಳಿರಬೇಕು.ಅದಕ್ಕಾಗಿ ನಮ್ಮ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ 2 ಹೊಸ Boeing 777-300s ಏರ್ ಕ್ರಾಫ಼್ಟ್ ನ್ನು ತಯಾರಿ ಮಾಡುತ್ತಿದ್ದಾರೆ.ನವೀನ ವಿನ್ಯಾಸದ ಏರ್ ಕ್ರಾಫ್ಟ್ ಇದಾಗಿದ್ದು,ಇದರಲ್ಲಿ ವಿಶೇಷವಾದ ತಂತ್ರಜ್ಝಾನವನ್ನು ಅಳವಡಿಸಲಾಗಿದೆ.
ಹೊಸ Boeing 777-300 ಏರ್ ಕ್ರಾಫ್ಟ್ ನ್ನು ಏರ್ ಇಂಡಿಯಾ-1 ಎಂದು ಹೆಸರಿಸಲಾಗಿದ್ದು,ಇದು U.S ಪ್ರೆಸಿಡೆಂಟ್ ಬರಾಕ್ ಒಬಾಮನ ಏರ್ ಕ್ರಾಫ್ಟ್ ತರಹದ್ದೇ ಮಾದರಿಯಲ್ಲಿದೆ.ಈ ಏರ್ ಕ್ರಾಫ಼್ಟ್ ವಿಶೇಷವಾದ ರಾಡಾರ್ -ಹೀರಿಕೊಳ್ಳುವ ಲೋಹದಿಂದ (Radar-Absorbing Metal) ತಯಾರಿಸಲ್ಪಟ್ಟಿದ್ದು,ಯಾವುದೇ ವೈರಿಯ ರಾಡಾರ್ ನ ಇದು ತಡೆಯುವುದಲ್ಲದೆ,ಯಾವುದೇ ವಾಯು ಆಕ್ರಮಣ ನಡೆದಲ್ಲಿ ಎದುರಿಸುವಷ್ಟು ಸಮರ್ಥವಾಗಿದೆ ಎಂದು ಡಿಫ಼ೆನ್ಸ್ ಅನಾಲಿಸ್ಟ್ ಪ್ರಶಾಂತ್ ಹೇಳುತ್ತಾರೆ.
ಇದರ ಬಗೆಗಿನ ಇನ್ನೂ ಕೆಲವೊಂದು ವಿಶೇಷತೆಗಳನ್ನು ನೀವೆ ನೋಡಿ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದು ಇಂಧನದ ಮರುಭರ್ತಿ ವ್ಯವಸ್ಥೆಯನ್ನು ಹೊಂದಿದೆ.
*ಇದು ಯಾವುದೇ ವೈರಿಯ ರಾಡಾರ್ ನ ತಡೆಗಟ್ಟುತ್ತದೆ.
*ಸುಮಾರು 2000 ಜನರಿಗೆ ಆಹಾರ ಒದಗಿಸೋ ವ್ಯವಸ್ಥೆಯನ್ನು ಹೊಂದಿದೆ.
*ನವೀನ ಶೈಲಿಯ ಉಪಕರಣದಿಂದ ಸಿದ್ದಪಡಿಸಲಾದ ವಿಶೇಷ ಸಂಪರ್ಕ ಮಾಧ್ಯಮವನ್ನು ಹೊಂದಿದೆ.
*ಇದರಲ್ಲಿ 19 T.V ಸೆಟ್ಸ್ ಗಳಿವೆ.
*ಇದು ರಾಕೆಟ್ ಹಾಗೂ ಗ್ರೇನೇಡ್ ಆಕ್ರಮಣವನ್ನು ತಡೆಯುವುದು
*ಇದರಲ್ಲಿ ಬೆಡ್ ರೂಂ ಹಾಗೂ ವ್ಯಾವಹಾರಿಕ ಕೆಲಸಗಳಿಗಾಗಿ ವಿಶೇಷ ಸ್ಥಳ ಲಭ್ಯವಿದೆ.
*ಇದರಲ್ಲಿ ಏಂಟಿ ಮಿಸೈಲ್ ರಕ್ಷಣಾ ವ್ಯವಸ್ಥೆ ಇದೆ
*ತುರ್ತು ಸಂದರ್ಭಗಳಲ್ಲಿ ವೈದ್ಯ ಕೀಯ ಚಿಕಿತ್ಸಾ ಸೌಲಭ್ಯವಿದ್ದು,ಯಾವ ಸಂದರ್ಭದಲ್ಲೂ ವೈದ್ಯರು ತಯಾರಿರುತ್ತಾರೆ.
*ಇದ್ರಲ್ಲಿ ರಾಡಾರ್ ಹಾಗೂ ಮಿಸೈಲ್ ವಾರ್ನಿಂಗ್ ರಿಸೀವರ್ ಅಳವಡಿಸಲಾಗಿದೆ.
*ಇದರಲ್ಲಿ 24×7 ಬ್ರಾಡ್ ಬ್ಯಾಂಡ್,ಟೆಲಿಕಾಂ ಹಾಗೂ ರೇಡಿಯೋ ಸಂಪರ್ಕ ಮಾಧ್ಯಮಗಳಿವೆ.
*ಅದಲ್ಲದೆಯೂ ಒಂದು ಆಪರೇಷನ್ ಥಿಯೇಟರ್ ತುರ್ತು ಪರಿಸ್ಥಿಯಲ್ಲಿ ಲಭ್ಯವಿದೆ.
ಅಬ್ಬಬ್ಬಾ!ಇಷ್ಟೆಲ್ಲಾ ಸೌಲಭ್ಯ ಹೊಂದಿರೋದು ಎಷ್ಟೆಂದರೂ ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರಧಾನಿ ಮೋದಿಯವರ ವಿಮಾನಲ್ಲವೇ???

  • ಸ್ವರ್ಣಲತ ಭಟ್

POPULAR  STORIES :

ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ

ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?

ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…

ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್

ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...