ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!

Date:

ಅವಳು ಅವತ್ತು ಸುಮ್ಮನಿದ್ದಿದ್ರೆ ಇವತ್ತು ಅವನು ಹೀಗೆ ಮಾಡ್ತಾ ಇರ್ಲಿಲ್ವೇನೋ? ಅವನನ್ನು ಎಷ್ಟೆಲ್ಲಾ ಅವಮಾನಿಸಲು ಆಗುತ್ತೋ ಅಷ್ಟೆಲ್ಲ ಅವಮಾನಿಸಿ ಬಿಟ್ಟಳು..! ಇವತ್ತು ಅವನು ಬೇಕಂತಲೇ ಹಠದಿಂದಲೇ ಅವಳನ್ನು ಅವಮಾನಿಸಿದ್ದಾನೆ..!
ತಾನು ತಪ್ಪು ಮಾಡಿದೆ, ಅವನನ್ನು ಅವಮಾನಿಸಬಾರದು ಅಂತ ಅವಳಿಗೆ ಅರ್ಥವಾಗುವಷ್ಟರಲ್ಲಿ ಎಲ್ಲವು ಬದಲಾಗಿತ್ತು..!
ಮಗುವಿನಂಥಾ ಮನಸ್ಸಿನ ಹುಡುಗ ಅಧಿಕಾರ,ಹಣ, ಸೇಡು ಅಂತ ವರ್ತಿಸ್ತಾ ಇದ್ದಾನೆ..! ಅವತ್ತು ಹಣ ಬಲದಿಂದ ಅವಮಾನಿಸಿದವಳು ಇವತ್ತು…?
ಇದು ಅನುಸೂಯ, ಸುಮನ್ ಕತೆ..! ಆಗಿನ್ನೂ ಡಿಗ್ರಿ ಓದ್ತಾ ಇದ್ರು..ಅನುಸೂಯಳ ಅಪ್ಪ ಒಂದಿಷ್ಟು ಹಣ ಮಾಡಿಟ್ಟಿದ್ರು, ಆ ಹಣದಲ್ಲಿ ಇವಳು ಶ್ರೀಮಂತಿಕೆ ದರ್ಶನ..! ಸುಮನ್ ಕಡು ಬಡ ಕುಟುಂಬದ ಹಿನ್ನೆಲೆಯಿಂದ ಬಂದವನು, ಅವನು ಓದಿನಲ್ಲಿ ತುಂಬಾ ಜಾಣ..! ಅನುಸೂಯಳಷ್ಟು ಒಳ್ಳೊಳ್ಳೆಯ ಆಡಂಬರದ ಬಟ್ಟೆಯನ್ನು ಯಾರೂ ಹಾಕ್ಕೊಂಡು ಬರ್ತಾ ಇರ್ಲಿಲ್ಲ ಬಿಡಿ.! ಆದ್ರೂ ಇವಳು ಸೇರ್ತಾ ಇದ್ದುದು ಒಂದ್ ಲೆವೆಲ್ ಗೆ ಒಳ್ಳೊಳ್ಳೆ ಚಂದದ ಬಟ್ಟೆಯನ್ನು ಧರಿಸಿ ಬರ್ತಾ ಇದ್ದವರ ಜತೆ..! ಉಳಿದವರನ್ನು ನಾಯಿಕಂಡಂಗೆ ಮಾಡ್ತಾ ಇದ್ಲು, ಅದರಲ್ಲೂ ಮುಖ್ಯವಾಗಿ ಸುಮನ್ ಗೆ ತುಂಬಾನೇ ಚುಚ್ಚಿ ಮಾತಾಡೋಳು..! ಅವನು ಹಾಕ್ತಾ ಇದ್ದ ಬಟ್ಟೆ, ಆ ಬಡತನದಿಂದ ಅವನಲ್ಲಿ ಮೂಡಿದ್ದ ಬೇಡದ ವಿಧೇಯತೆ, ಸಂಕೋಚದಿಂದ ಅದೆಷ್ಟೋ ಕೆಲಸವನ್ನು ಅವನತ್ರ ಮಾಡಿಸಿಕೊಳ್ತಾ ಇದ್ಲು..! ನಂಬುತ್ತಿರೋ ಬಿಡ್ತೀರೋ ಅವಳು ಚಪ್ಪಲಿಯನ್ನು ಸಹ ಒಮ್ಮೆ ಉಲಿಸಿದ್ಲಂತೆ..!
ಇಷ್ಟೆಲ್ಲಾ ಆಗ್ತಾ ಇದ್ರೂ ಕೆಲವು ಲೆಕ್ಚರರ್ ಮತ್ತು ಭೂಪತಿ ಪ್ರಿನ್ಸಿಪಾಲ್ ಅನುಸೂಯಗೆ ಬುದ್ದಿ ಹೇಳ್ತಿರ್ಲಿಲ್ಲ..! ಕಾರಣ ಅವಳಪ್ಪನ ಶ್ರೀಮಂತಿಕೆ…! ಇದು ಮಾಸ್ಟರ್ ಡಿಗ್ರಿಯಲ್ಲೂ ಮುಂದುವರೆಯಿತು..! ಹೆಚ್ಚು ಅಂಕ ಪಡೆದು ಫ್ರೀ ಸೀಟ್ ಪಡೆದು, ಪಾರ್ಟ್ ಟೈಮ್ ಕೆಲಸ ಮಾಡ್ತಾ ಓದ್ತಿದ್ದ ಸುಮನ್ ಗೆ ಗೆಳೆಯರನ್ನೆಲ್ಲಾ ಸೇರಿಸಿಕೊಂಡು ‘ಬಿಟ್ಟಿ ‘ ‘ಬಿಟ್ಟಿ’ ಅಂತ ಅವಮಾನಿಸೋಳು..!
ಇವೆಲ್ಲಾ ಕೇವಲ ಉದಾಹರಣೆ, ಇನ್ನು ಕಂಡಾಪಟ್ಟೆ ಅವಮಾನ ಮಾಡ್ತಿದ್ಲು..!
ಆಗ ಅಲ್ಲೊಬ್ಬ ಉಪನ್ಯಾಸಕರು ಸುಮನ್ ಗೆ ಧೈರ್ಯ ತುಂಬಿದ್ರು. ಜಾಣ ಹುಡುಗ ನೀನು, ವಿದ್ಯಾವಂತ, ಬುದ್ಧಿವಂತ ನೀನು ಅವರೆದುರೆಲ್ಲಾ ಅವಮಾನಕ್ಕೀಡಾಗುವುದು ಸರಿಯಲ್ಲ..! ನೀನು ತಿರುಗಿ ಹೇಳು ಎಂದರು. ಬೆಲೆ ಕೊಡಬೇಕಾಗುವುದು ಶ್ರೀಮಂತಿಕೆ, ಹಣ, ಅಂದ ಚಂದಕ್ಕಲ್ಲ ಜ್ಞಾನಕ್ಕೆ..! ನಿನ್ನ ಜ್ಞಾನಕ್ಕೆ ಬೆಲೆ ಬರುತ್ತೆ ಎಂದು ಸ್ಫೂರ್ತಿ ತುಂಬಿದ್ರು..!
ಮಾಸ್ಟರ್ ಡಿಗ್ರಿ ಮುಗೀತು ಕೆಲಸಕ್ಕೂ ಹೋದ ಸುಮನ್, ಅಷ್ಟೊತ್ತಿಗೆ ಅನುಸೂಯಳ ಅಪ್ಪನ ಶ್ರೀಮಂತಿಕೆಯನ್ನು ದೇವರು ಕರಗಿಸಿದ್ದ..! ವ್ಯವಹಾರದಲ್ಲಿ ಲಾಸ್, ದುಂದುವೆಚ್ಚದಿಂದ ಮನೆಯನ್ನು ಮಾರಬೇಕಾದ ಪರಿಸ್ಥಿತಿ ಬಂದಿತ್ತು..!
ಅನುಸೂಯ ಕೆಲಸಕ್ಕೆ ಹೋಗೋದು ಅನಿವಾರ್ಯವಾಗಿತ್ತು..ಆದರೆ ಅವಳೊಳಗಿನ ಆ ಶ್ರೀಮಂತಿಕೆಯ ಗುಂಗು ಕೆಲಸ ಅನಿವಾರ್ಯವಲ್ಲ, ಓದಿದ್ದಕ್ಕೊಂದು ಕೆಲಸ ಬೇಕು ಅದ್ಕೆ ಹುಡುಕ್ತಾ ಇದ್ದೀನಿ ಅಂತ ಗೆಳೆಯರಲ್ಲಿ ಹೇಳಿಕೊಳ್ತಾ ಇತ್ತು..! ಎಷ್ಟೇ ಕೆಲಸ ಹುಡುಕಿದರು ಸುಮನ್ ಗೆ ಸಿಕ್ಕಂಥಾ ಒಳ್ಳೆಯ ಕೆಲಸ ಸಿಗಲಿಲ್ಲ..! ಸಿಕ್ಕಿದ್ದೂ ತಡವಾಗಿ.
ಎರಡು ವರ್ಷ ಕಳೆದರು ಅನುಸೂಯ ಅಲ್ಲೇ ಇದ್ದಳು, ಬೇರೆಡೆ ಕೆಲಸ ಸಿಗಲಿಲ್ಲ..! ಸುಮನ್ ತನ್ನ ಕ್ರಿಯೇಟಿವಿಟಿ, ಹಾರ್ಡ್ ವರ್ಕ್ ನಿಂದ ಮೇಲೆ ಬಂದ.! ಅದ್ಯರೋ ಪುಣ್ಯಾತ್ಮರು ಇವನನ್ನು ನಂಬಿ ದೊಡ್ಡ ಕಂಪನಿ ತೆರೆದರು..! ಆ ಕಂಪನಿಗೆ ಕೆಲಸ ಹುಡುಕಿಕೊಂಡು ಬಂದಳು ಎಂಬಿಎ ಪದವೀಧರೆ ಅನಸೂಯ..!
ಎದುರು ಇಂಟರ್ವೀವ್ ಮಾಡೋಕೆ ಇದ್ದವನು ಸುಮನ್..! ಅವಳ ಕಣ್ಣುಗಳಿಗೆ ನಂಬಲಾಗಲೇ ಇಲ್ಲ..!ಸುಮನ್ ಗೆ ಇವಳನ್ನು ನೋಡಿದಾಗ ಹಳೆಯ ನೆನಪುಗಳು ಕಾಡಿದ್ವು..! ಅವಳ ಇಂಟರ್ವೀವ್ ಮಾಡದೆ, ಕೆಲಸಕ್ಕೆ ಬೇಕಾಗಿದ್ದು ಮನುಷ್ಯರು, ಮೃಗಗಳಲ್ಲ..! ಅಂದ ಚಂದ ನೋಡಿ ಕೆಲಸ ಕೊಡೋಕೆ ಇಲ್ಲಿ ಅವಕಾಶವಿಲ್ಲ..! ಏನಿದ್ರು, ಜ್ಞಾನಕ್ಕೆ ಬೆಲೆ..! ನಿಮ್ಮಂಥ ಅವಿವೇಕಿಗಳ ಅವಶ್ಯಕತೆ ಇಲ್ಲ..!ಎಂದು ಖಾರವಾಗಿ ಹೇಳಿಕಳುಹಿಸಿದೆ ..!
ನಂತರ ಬೇಕಂತಲೇ ಅವಳ ಹಿಂದೆ ಹೋಗಿ, ಅವಳನ್ನು ಪ್ರೀತಿಸುವ ನಾಟಕವಾಡಿ ಮದುವೆಯೂ ಆದ..! ಅನುಸೂಯಗೆ ತಪ್ಪು ಅರಿವಾಗಿದ್ರೂ ಕಾಲಮಿಂಚಿ ಹೋಗಿತ್ತು.! ಹಿಂದೆ ಅವಳು ಮಾಡಿದ ಅವಮಾನಕ್ಕೆ ಸೇಡು ಎಂಬಂತೆ ಅವಳಿಗೆ ಚುಚ್ಚಿ ಮಾತಾಡ್ತಾನೆ..! ಅವಳನ್ನು ಹೆಂಡತಿಯಂತೆ ಟ್ರೀಟ್‌ ಮಾಡ್ತಿಲ್ಲ..! ಮನೆಕೆಲಸಕ್ಕೆ ಒಂದು ಆಳು ಎಂಬಂತೆ, ಜೀತದಂತೆ ನೋಡ್ತಾ ಇದ್ದಾನಂತೆ…!
ಮೊನ್ನೆ ಇತ್ತೀಚೆಗಷ್ಟೇ ಮಾಸ್ಟರ್ ಡಿಗ್ರಿಯಲ್ಲಿರುವಾಗ ಧೈರ್ಯ ತುಂಬಿ,.ಸ್ಫೂರ್ತಿ ತುಂಬಿದ್ದ ಆ ಉಪನ್ಯಾಸಕರ ಸಿಕ್ಕು ಮತ್ತೆ ಬುದ್ಧಿ ಹೇಳಿದ್ದಾರಂತೆ..! ಈಗ ಅನಸೂಯ ಸುಮನ್ ದಾಂಪತ್ಯ ಜೀವನ ಹೇಗಿದೆಯೋ ಗೊತ್ತಿಲ್ಲ…! ಇಬ್ಬರೂ ತಪ್ಪು ತಿದ್ದಿಕೊಂಡು ಸರಿಯಾಗಿದ್ದಾರೆಂಬ ಭರವಸೆ ಆ ಉಪನ್ಯಾಸಕರಿಗೆ..!
ಅವರೇ ಈ ಕತೆಯನ್ನು ಹೇಳಿದ್ದು.

  • ರಘು ಭಟ್

POPULAR  STORIES :

ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ

ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?

ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…

ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್

ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

Share post:

Subscribe

spot_imgspot_img

Popular

More like this
Related

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...