ನೋಡೋದಕ್ಕೆ ಇನ್ನು ಹದಿಹರೆಯದ ವಯಸ್ಸಿನ ಮಕ್ಕಳು, ಇವರ ವಯಸ್ಸು ಅಬ್ಬಬ್ಬಾ ಅಂದ್ರೆ 8 ರಿಂದ 16 ವರ್ಷವಿರಬಹುದೇನೋ.. ಕೊಳಕುಬಟ್ಟೆ ಹಾಕಿಕೊಂಡು ಬೀದಿ ಬೀದಿ ಸುತ್ತುವ ಈ ಹುಡುಗರಿಗೆ ಪೆಟ್ರೋಲ್, ಫೆವಿಕೋಲ್, ಪೆನ್ನಿನ ಇಂಕ್, ಗಮ್ಮುಗಳೆ ಇವರ ಆಹಾರ…
ಅರೇ ಇದನ್ನು ತಿನ್ನಲು ಸಾಧ್ಯಾನಾ ಎಂದು ನಿಮಗೆ ಆಶ್ಚರ್ಯವಾಗಬಹುದು.. ಆದರೆ ಅದನ್ನು ತಿನ್ನುವುದಿಲ್ಲ, ಬದಲಿಗೆ ಅದನ್ನು ಒಂದು ಮಾದಕ ವಸ್ತುಗಳಾಗಿ ಬಳಸಿಕೊಳುತ್ತಾರೆ.
ಬಹು ಬೆಲೆಬಾಳುವ ಮಾದಕ ವಸ್ತುಗಳಾದ ಕೊಕೇನ್, ಅಫೀಮು ಮುಂತಾದ ವಸ್ತುಗಳನ್ನು ಅವರಿಗೆ ಕೊಳ್ಳಲು ಸಾಧ್ಯವಾಗದಿದ್ದರೇನು? ಕೈಗೆಟಕುವ ಇಂತಹ ವಸ್ತುಗಳಲ್ಲೇ ಅವರು ಡ್ರಗ್ಸ್ ಗಳಾಗಿ ಮಾಡಿಕೊಂಡಿದ್ದಾರೆ.
ತಾವು ಹಾಕಿಕೊಂಡಿರುವ ಬಟ್ಟೆ ಅಥವಾ ಬೇರ್ಯಾವುದೋ ಒಂದು ಬಟ್ಟೆಯಲ್ಲಿ ಇವುಗಳನ್ನು ಸುರಿದುಕೊಂಡು ಅದನ್ನು ಬಿಗಿಯಾಗಿ ಸುತ್ತಿಕೊಂಡು ಅದರ ವಾಸನೆ ಸೇವಿಸುವ ಮೂಲಕ ಅಮಲುಬರಿಸಿಕೊಳ್ಳುತ್ತಾರೆ. ಜೇಬಿನಲ್ಲಿ ದೊಡ್ಡ ದೊಡ್ಡ ಗಮ್ ಬಾಟಲಿ ಹಿಡಿದುಕೊಂಡು ಸುತ್ತಾಡುವ ಈ ಪುಡಾರಿ ಗುಂಪುಗಳಿಗೆ ಹೇಳುವರು ಕೇಳುವರು ಯಾರೂ ಇಲ್ಲದೇ ತಮ್ಮದೇ ಲೋಕದಲ್ಲಿ ತಲ್ಲೀನರಾಗಿರುತ್ತಿದ್ದಾರೆ. ನೋಡೋದಕ್ಕೆ ಸ್ಲಂ ಹುಡುಗರಂತಿರುವ ಇವರು ಇಷ್ಟು ಸಣ್ಣ ವಯಸ್ಸಿನಲ್ಲೇ ಇಂತ ದುಷ್ಚಟಕ್ಕೆ ಬಲಿಯಾಗಿರುವುದು ಶೋಚನೀಯ.
ತಮಗೆ ಹಣ ಬಂದರೆ ಸಾಕು ಮಕ್ಕಳು ಯಾವುದು ತೆಗೆದುಕೊಂಡು ಹೋದರೆ ನಮಗೇನು ಎಂದು ನಿಶ್ಚಿಂತೆಯಿಂದಿರುವ ಅಂಗಡಿ ಮಾಲಿಕರು ಮಕ್ಕಳು ಅದನ್ನು ಪದೇ ಪದೇ ತೆಗೆದುಕೊಂಡೋಗಲು ಕಾರಣ ಗೊತ್ತಿಲ್ಲದೇ ಇರುವುದು ದುರಾದೃಷ್ಟಕರ ವಿಷಯ.
ತಮಗೆ ಬೇಕಾದ ಜಾಗದಲ್ಲೆಲ್ಲಾ ಸುತ್ತಾಡುತ್ತಾ ಮಾದಕ ವ್ಯಸನಿಗಳಾಗಿರುವ ಈ ಅಪ್ರಾಪ್ತ ಬಾಲಕರ ದುಷ್ಚಟಕ್ಕೆ ಬ್ರೇಕ್ ಹಾಕೋರು ಯಾರು.? ಇದು ಪ್ರತಿನಿತ್ಯ ನೋಡುತ್ತಿರುವ ಜನರ ಆಶಯವಾಗಿದೆ.
- ಪ್ರಮೋದ್ ಲಕ್ಕವಳ್ಳಿ
POPULAR STORIES :
ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?
ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!
ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್
ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!
ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ
ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…