ಅವರಿಬ್ಬರ ನಡುವಿನ ಪ್ರೀತಿ ಹಾಗೂ ಕಾಳಜಿನ ನೋಡಿ ನಾನು ಸಂಪೂರ್ಣವಾಗಿ ನನ್ನನ್ನೇ ಮರೆತೆ…

Date:

ನಾನು ಆಫೀಸಿನಿಂದ ಹಿಂತಿರುಗಿ ಬರುತ್ತಿದ್ದ ಒಂದು ದಿನ,ಮೆಟ್ರೋ ಸ್ಟೇಷನ್ ಎಂದಿನಂತೆ ಜನರಿಂದ ಗಿಜಿಗುಟ್ಟುತ್ತಿತ್ತು. ಪೀಕ್ ಟೈಮ್ ನಲ್ಲಿ ಟ್ರೈನ್ ಹತ್ತಿ, ಒಳಗಡಿಯಿಟ್ಟು ಯಾವುದೇ ತೊಂದರೆಯಿಲ್ಲದೆ ನಿಂತುಕೊಳ್ಳಲು ಸ್ಥಳ ಸಿಗುವುದೇ ಒಂದು ಸಾಹಸದ ಕೆಲಸ. ಚಕಳ ಸ್ಟೇಷನ್ ನಿಂದ ಮೆಟ್ರೋ ಹತ್ತಿದ ನಾನು ಸುರಕ್ಷಿತವಾಗಿ ನಿಂತುಕೊಳ್ಳಲು ಒಂದು ಸರಿಯಾದ ಜಾಗವನ್ನ ಹುಡುಕತೊಡಗಿದೆ. ಅದಕ್ಕಾಗಿ ನಾನು ಮುಂದಕ್ಕೆ ಹೋಗಿ ಒಂದು ಬದಿಯಲ್ಲಿ ನಿಂತು, ಮೊಬೈಲ್ ತೆಗೆದು ಎಂದಿನಂತೆ ಒಂದಿಷ್ಟು ಆರ್ಟಿಕಲ್ ಓದತೊಡಗಿದೆ. ಅಷ್ಟರಲ್ಲಿ ಹಠಾತ್ತಾಗಿ ನನ್ನ ದೃಷ್ಟಿ ಸುಮಾರು 60 ರ ಅಂಚಿನಲ್ಲಿರೋ ದಂಪತಿಗಳ ಮೇಲೆ ಬಿತ್ತು. ನನ್ನ ತೀರಾ ಪಕ್ಕದಲ್ಲೇ ನಿಂತಿದ್ದ ಅವರು ಪರಸ್ಪರ ಕೈ ಹಿಡಿದು ಒಬ್ಬರನ್ನೊಬ್ಬರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತಿದ್ದರು.ನಾನು ಅವರಿಬ್ಬರ ಪರಸ್ಪರ ಕಾಳಜಿ, ಪ್ರೀತಿ ಹಾಗೂ ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಿದ್ದ ರೀತಿ ನೋಡಿ ನಿಬ್ಬೆರಗಾದೆ.
ಅದೃಷ್ಟವಶಾತ್ ಸ್ವಲ್ಪ ಹೊತ್ತಿನ ಬಳಿಕ ಅಂಧೇರಿ ಸ್ಟೇಷನ್ ಬಂದು ಹೆಚ್ಚಿನವ್ರು ಕೆಳಗಿಳಿದು ಹೋದರು. ಆ ದಂಪತಿಗಳು ಆರಾಮಾಗಿ ಒಂದು ಸೀಟು ಹಿಡಿದು ಕುಳಿತುಬಿಟ್ಟರು. ಆಗಲೇ ನಾನು ಕೆಲವೊಂದು ವಿಚಿತ್ರಗಳನ್ನು ಗಮನಿಸಿದೆ. ಆ ದಂಪತಿಗಳಿಬ್ಬರೂ ಒಬ್ಬರಿಗೊಬ್ಬರು ಮಾತಾಡುತ್ತಿರಲಿಲ್ಲ ಬದಲಾಗಿ ಒಬ್ಬರಿಗೊಬ್ಬರು ಸನ್ನೆ ಮೂಲಕ ತನ್ನ ಹಾವ ಭಾವ ತೋರಿಸುತ್ತಿದ್ದರು. ಅವರಿಬ್ಬರೂ ಮಾತಾಡಲು ಅಸಮರ್ಥರೆಂದು ತಿಳಿಯಲು ನನಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ನನಗೆ ಆ ಕ್ಷಣ ಸ್ವಲ್ಪ ಬೇಸರವಾಯಿತು, ಆದ್ರೆ ಕೂಡಲೇ ನಾನು ಅರ್ಥ ಮಾಡಿಕೊಂಡೆ-ಅವರಿಬ್ಬರೂ ಹ್ಯಾಪಿ ಕಪಲ್ಸ್ ಎಂದು. ಅವರು ಒಬ್ಬರಿಗೊಬ್ಬರು ತೋರುತ್ತಿದ್ದ ಪ್ರೀತಿ ನೋಡಿದ ನನ್ನ ಮನಸ್ಸು ಅವರನ್ನು ಒಂದು ಆದರ್ಶ ಸುಖೀ ಸುಂದರ ದಂಪತಿಗಳ ಸಾಲಲ್ಲಿ ನಿಲ್ಲಿಸಿತ್ತು. ಅವರು ತಮ್ಮಲ್ಲಿರೋ ಸಮಸ್ಯೆಗೆ ದುಖೀಗಳಾಗದೆ ಸಂತೋಷ,ಉಲ್ಲಾಸ ಹಾಗೂ ಅದ್ಭುತ ಪತಿ ಪತ್ನಿಯರಂತೆ ಕಂಡರು ನನಗಾಕ್ಷಣ.
ಆ ತಾತ ತನ್ನ ಪತ್ನಿಯ ಕೈ ಹಿಡಿದು ತೋರುತ್ತಿದ್ದ ಕಾಳಜಿ,ಆಕೆಯ ಕೂದಲನ್ನು ನೇವರಿಸುತ್ತಿದ್ದ ರೀತಿ,ಮೆಟ್ರೋ ಬಗ್ಗೆ ವಿವರಿಸುತ್ತಿದ್ದ ದೃಷ್ಯ ಕ್ಷಣ ನನ್ನನ್ನು ಭಾವುಕನನ್ನಾಗಿಸಿತು.ಅಜ್ಜಿಯು ತಾನೂ ಏನೂ ಕಡಿಮೆ ಇಲ್ಲ ಎಂಬಂತೆ ತನ್ನಲ್ಲಿದ್ದ I-PHONE ಹೊರತೆಗೆದು,ಬೇರೆ ಬೇರೆ ಭಂಗಿಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು.ನಿಜಕ್ಕೂ ನಾನು ತುಂಬಾ ಭಾವುಕನಾದೆ ಆ ಕ್ಷಣ.
ಹೌದು ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ನಮ್ಮಈಗಿನ ಸಮಾಜದಲ್ಲಿ ಆಕರ್ಷಣೆಗೆ ಬಲಿಯಾಗಿ ಪ್ರೀತಿ ಪ್ರೇಮ ಎಂದೆಲ್ಲಾ ಓಡಾಡಿ ನಾಲಕ್ಕು ನಾಲಕ್ಕು ದಿನಕ್ಕೆ ಎಲ್ಲಾ ಮರೆತು ಹೋಗುವ ಸೋ ಕಾಲ್ಡ್ ಟೀನೇಜರ್ಸ್ ಒಂದು ಕಡೆಯಾದರೆ, ಮದುವೆಯಾಗಿ ನಾಲಕ್ಕೆ ತಿಂಗಳಿಗೆ ಡೈವರ್ಸ್ ಗೆ ಆಪ್ಲೈ ಮಾಡೋ ನ್ಯೂಲಿ ಮ್ಯಾರೀಡ್ ಕಪಲ್ಸ್ ಇನ್ನೊಂದ್ಕಡೆ,ಇವರೆಲ್ಲಾರನ್ನು ಒಟ್ಟಿಗೆ ಸೇರಿಸಿ ಈ ಸುಂದರ ದಂಪತಿಗಳ ಮುಂದೆ ನಿವಾಳಿಸಿ ಬಿಸಾಡಬೇಕು ಅನ್ನಿಸಿತು ನನಗಾ ಕ್ಷಣ.
ಅವರಿಬ್ಬರನ್ನು ನೋಡು ನೋಡುತ್ತಿದ್ದ ನನಗೆ ಪರಿಸ್ಥಿಯ ಅರಿವಾದದ್ದು ಆ ದಂಪತಿಗಳು ಎದ್ದು ನಿಂತಾಗಲೇ. ನಾನು ಇಳಿಯಬೇಕಾಗಿರೋ ಸ್ಟೇಷನ್ ಹಿಂದಕ್ಕೆ ಹೋಗಿತ್ತು. ನನ್ನ ಅವಸ್ಥೆಗೆ ನಾನೇ ನಕ್ಕು ಆ ದಂಪತಿಗಳ ಜೊತೆ ಆಜಾದ ನಗರದಲ್ಲಿ ನಾನು ಇಳಿದೆ,ಅವರಿಗೂ ಇಳಿಯಲು ನೆರವಾದೆ,ಅವರ ಜೊತೆ ಒಂದು ಸೆಲ್ಫಿಗಾಗಿ ಕೇಳಿದೆ,ಅವರೂ ನನ್ನ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡರು.ಅವರಿಬ್ಬರ ಬಗ್ಗೆ ಕೇಳಿದಾಗ ನನಗೆ ತಿಳಿಯಿತು ಅವರದ್ದು 40 ವರುಷದ ದಾಂಪತ್ಯ ಜೀವನ ಎಂಬುದು.
ಅವರಿಬ್ಬರಲ್ಲಿ ಏನೋ ವಿಶೇಷವಿದೆ ಅಂತನ್ನಿಸ್ತು ಕಣ್ರಿ.ವಯಸ್ಸಾಗುತ್ತಾ ಪ್ರೀತಿ ಕಡಿಮೆಯಾಗುತ್ತೆ ಅಂತಾರೆ.ಇಲ್ಲ ಅದು ಶುದ್ದ ಸುಳ್ಳು ಅಂತ ಇವರಿಬ್ಬರನ್ನು ನೋಡಿದ ಮೇಲೆ ನನಗೆ ಅರ್ಥವಾಯ್ತು.ನಾವು ಬದಲಾದ್ರೆ ಪ್ರೀತಿನೂ ಬದಲಾಗುತ್ತೆ ಅಷ್ಟೇ.ಇವರಿಬ್ಬರ ಪ್ರೀತಿ ಯು ಯಾವ ಲವ್ ಬರ್ಡ್ಸ್ ಗೂ ಕಡಿಮೆ ಇರಲಿಲ್ಲ ನೋಡಿ.
ನಿಜ ಪ್ರೀತಿಯಂದ್ರೆ ಹಿಂಗಿರ್ಬೇಕು.ಇವ್ರನ್ನು ಭೇಟಿಯಾದ ಮೇಲೆ ನನಗೂ ಪ್ರೀತಿಯಂದ್ರೆ ಏನು ಅಂತ ಅರ್ಥವಾಯ್ತು.

  • ಸ್ವರ್ಣಲತ ಭಟ್

Submitted by : Ankit Sharma

POPULAR  STORIES :

ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!

ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?

ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!

ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್

ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!

ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ

ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?

ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...