ಇಂದು ದೇಶದೆಲ್ಲೆಡೆ ಗುರು ಪೂರ್ಣಿಮಾ ಸಂಬ್ರಮ. ಆದ್ರೆ ಈ ಹಬ್ಬದ ಮಹತ್ವವನ್ನು ತಿಳಿದವ್ರು ತುಂಬಾ ಕಡಿಮೆ ಅನ್ಸತ್ತೆ. ಆಷಾಡ ಮಾಸದ ಹುಣ್ಣಿಮೆಯನ್ನೇ ಗುರು ಪೂರ್ಣಿಮಾ ಅಂತ ಕರೆಯಲಾಗುತ್ತದೆ. ಇದು ಮಳೆಗಾಲದಿಂದ ಆರಂಭವಾಗುತ್ತದೆ; ಪ್ರಾಚೀನ ಕಾಲದಲ್ಲಿ ಈ ದಿನದಿಂದ ಆರಂಭವಾಗಿ ಮುಂದಿನ 4 ತಿಂಗಳವರೆಗೆ ಋಷಿ ಮುನಿಗಳು ಹಾಗೂ ಪರಿವಾರದ ಸದಸ್ಯರು ಕೇವಲ ವಿದ್ಯಾಧ್ಯಯನವನ್ನು ಮಾತ್ರ ಮಾಡುತ್ತಿದ್ದರು. ಯಾಕಂದ್ರೆ, ಬರೋ ಮುಂದಿನ ನಾಲ್ಕು ತಿಂಗಳು ವಿದ್ಯಾರ್ಜನೆಗೆ ಎಲ್ಲಾ ದಿನಗಳಿಗಿಂತಲೂ ತುಂಬಾ ಉಪಯುಕ್ತವಾದ ಸಮಯ, ಅತೀ ಸೆಕೆನೂ ಇಲ್ಲದ ಅತೀ ಚಳಿನೂ ಇಲ್ಲದ ಸಮಯವಾಗಿದೆ. ಯಾವ ರೀತಿಯಲ್ಲಿ ಸೂರ್ಯನ ತಾಪ ದಿಂದ ಬಳಲಿದ ಭೂಮಿಗೆ ಮಳೆಯ ನೀರಿನ ಹನಿಗಳು ಶೀತಲತೆಯ ಅನುಭವವನ್ನೀಯುತ್ತದೋ, ಅದೇ ರೀತಿ ಗುರುವಿನ ಚರಣಗಳಲ್ಲಿ ವಿದ್ಯಾರ್ಥಿಗಳಿಗೆ ಜ್ಝಾನ, ವಿಜ್ಝಾನ ಹಾಗೂ ಚೈತನ್ಯ ಲಭಿಸುತ್ತದೆ. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಈ ಗುರು ಪೂರ್ಣೀಮಾವನ್ನು ಆಚರಿಸುತ್ತಾರೆ
ಈ ದಿನವನ್ನು ವ್ಯಾಸ ಪೂರ್ಣಿಮಾ ಅಂತಲೂ ಕರೆಯಲಾಗುತ್ತದೆ,ಯಾಕಂದ್ರೆ ಈ ಗುರುಪೂರ್ಣಿಮಾ ದಿನದಂದೇ ಮಹಾಭಾರತ ಹಾಗೂ 4 ವೇದಗಳ ಕತೃವಾದ ವೇದವ್ಯಾಸ ಹುಟ್ಟಿದ ದಿನ ಮಾತ್ರವಲ್ಲ,ಭಕ್ತಿ ಕಾಲದ ಸಂತರಾದ ಗೀಸಾದಾಸ್ ನ ಜನನವೂ ಇದೇ ದಿನದಂದಾಗಿತ್ತು.
- ಸ್ವರ್ಣಲತ ಭಟ್
POPULAR STORIES :
ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!
ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?
ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!
ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್
ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!
ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ
ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…