ವಿಕ್ರಾಂತ್ ರೋಣ ಚಿತ್ರತಂಡ ಕೆಲವು ದಿನಗಳ ಹಿಂದೆ ಜಾಕ್ವೆಲಿನ್ ಫರ್ನಾಂಡಿಸ್ ಅವರ ‘ರಾ ರಾ ರಕ್ಕಮ್ಮ’ ಹಾಡನ್ನು ಬಿಡುಗಡೆ ಮಾಡಿ ಸಖತ್ ಸದ್ದು ಮಾಡಿತ್ತು . ಈ ಹಾಡು ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈಗ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ತಣಿಸಲು ಚಿತ್ರ ತಂಡ ಸಜ್ಜಾಗಿದೆ.
ವಿಕ್ರಾಂತ್ ರೋಣ ಜುಲೈ 28 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಚಿತ್ರ ರಿಲೀಸ್ ಗೂ ಮುನ್ನ ಟ್ರೈಲರ್ ಮತ್ತು ಮತ್ತಷ್ಟು ಹಾಡುಗಳ ಮೂಲಕ ಮೋಡಿ ಮಾಡಲು ನಿರ್ದೇಶಕ ಅನೂಪ್ ಭಂಡಾರಿ ಯೋಜನೆ ರೂಪಿಸಿಕೊಂಡಿದ್ದಾರೆ.