ರಾಜಧಾನಿ ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಧರ್ಮ ದಂಗಲ್ ಬಿಸಿ ತಟ್ಟಿದೆ. ಹಿಂದೂ ವರ್ತಕರಿಂದಲೇ ವಸ್ತು ಖರೀದಿಸುವಂತೆ ವಿಶ್ವ ಹಿಂದೂ ಪರಿಷತ್ ಪೋಸ್ಟರ್ ಅಂಟಿಸುತ್ತಿದ್ದಾರೆ. ವಿಹೆಚ್ಪಿ ಪೋಸ್ಟರ್ಗೆ ವಿಶ್ವ ಸನಾತನ ಪರಿಷತ್ ಬೆಂಬಲ ನೀಡುತ್ತಿದೆ. ಗಣೇಶ ಚತುರ್ಥಿಗೆ ಬಟ್ಟೆ, ಹೂವು, ಹಣ್ಣು, ತರಕಾರಿಯನ್ನು ಹಿಂದೂಗಳ ಅಂಗಡಿಗಳಲ್ಲೇ ಖರೀದಿ ಮಾಡಿ ಎಂದು ಪೋಸ್ಟರ್ ಅಂಟಿಸುತ್ತಿದ್ದಾರೆ.ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಕುರಿತು ಮಾತನಾಡಿದ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ಹಬ್ಬಕ್ಕೆ ಏನೇ ಖರೀದಿಸಬೇಕೆಂದರೂ ಹಿಂದೂ ಅಂಗಡಿಗೆ ಹೋಗಿ ಎಂದು ಮನವಿ ಮಾಡಿದ್ದಾರೆ. ಇನ್ನೂ ಈ ವಿಚಾರವಾಗಿ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲೀದ್ ಕಿಡಿ ಕಾರಿದ್ದು, ಹಿಂದೂ ಸಂಘಟನೆಗಳ ಯಾವ ಅಭಿಯಾನ ಸಕ್ಸಸ್ ಆಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಚಾಲಕರ ನಿಷೇಧ, ಹಲಾಲ್, ಮಾವಿನ ಹಣ್ಣು ಖರೀದಿ, ಕುರಿ ವ್ಯಾಪಾರ ಬಹಿಷ್ಕಾರ ಸೇರಿದಂತೆ ಹಿಂದೂ ಸಂಘಟನೆಗಳು ಹಲವು ಬ್ಯಾನ್ ಅಭಿಯಾನ ಮಾಡಿದ್ದವು. ಯಾವುದಾದರೂ ಒಂದಾದರೂ ಯಶಸ್ವಿಯಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ. ಭಾರತದಲ್ಲಿ ಇರುವ ಶೇ.90 ರಷ್ಟು ಹಿಂದೂಗಳು ವಿಶಾಲ ಹೃದಯದವರು. ಬಾಕಿ ಶೇ 10 ರಷ್ಟು ಮತೀಯವಾದಿಗಳಿದ್ದಾರೆ, ಅದು ಎಲ್ಲ ಧರ್ಮಗಳಲ್ಲೂ ಇರ್ತಾರೆ. ಇದು ತಮ್ಮ ಚಲಾವಣೆಗೋಸ್ಕರ ಮಾಡುತ್ತಿರೋ ಅಭಿಯಾನ. ಒಂದು ವರ್ಷದಿಂದ ಎಷ್ಟು ಅಭಿಯಾನ ಮಾಡಿದರು? ಇವರ ಅಭಿಯಾನದಿಂದ ಏನೂ ಮಾಡೋಕೆ ಆಗೊಲ್ಲ ಎಂದು ಹೇಳಿದರು.
ಗಣೇಶೋತ್ಸವಕ್ಕೆ ಧರ್ಮ ದಂಗಲ್
Date: