ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಮನೆ ಕೆಲಸಗಾರ ನಾಪತ್ತೆಯಾಗಿದ್ದ ಪ್ರಕರಣ ಇದೀಗ ಸುಖಾಂತ್ಯವಾಗಿದೆ. ಪಶ್ಚಿಮ ಬಂಗಾಳ ಮೂಲದ ಸಂಜು ಶರ್ಮಾ ಎರಡು ದಿನದ ಹಿಂದೆ ಆರ್ ಟಿ ನಗರದ ಮನೆ ಬಿಟ್ಟು ಪರಾರಿಯಾಗಿದ್ದ. ಈ ಹಿನ್ನೆಲೆ ಕುಟುಂಬಸ್ತರು ದಿನೇಶ್ ಗುಂಡುರಾವ್ ಗೆ ಮಾಹಿತಿ ನೀಡಿದ್ದರು. ನಂತರ ಸಂಜಯ್ ನಗರ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗಿತ್ತು. ಈ ಹಿನ್ನೆಲೆ ಸಂಜು ಶರ್ಮಾ ಮಾಹಿತಿ ಕಲೆಹಾಕಿದ ಪೊಲೀಸರು, ಘಟನೆ ಸಂಬಂಧ ಸಂಜು ಶರ್ಮಾ ಫೋಟೊವನ್ನ ರೈಲ್ವೆ ಸ್ಟೇಷನ್ ಹಾಗೂ ಬಸ್ ನಿಲ್ದಾಣಗಳಿಗೆ ರವಾನಿಸುತ್ತಾರೆ.. ಸದ್ಯ ಈತ ಹೊರ ರಾಜ್ಯದ ರೈಲ್ವೆ ನಿಲ್ದಾಣದಲ್ಲಿ ಸಂಜು ಶರ್ಮಾ ಮಾಹಿತಿ ದೊರೆತಿದ್ದು ಸಂಜಯ್ ನಗರ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ.. ಸಂಜು ಶರ್ಮಾನನ್ನ ವಿಚಾರಣೆ ನಡೆಸಿದ ಪೊಲೀಸ್ರಿಗೆ ನನಗೆ ಬೆಂಗಳೂರಿನಲ್ಲಿ ಕೆಲಸ ಮಾಡುಲು ಇಷ್ಟವಿಲ್ಲ ಮನೆಯಲ್ಲಿ ಹೇಳಿದರೆ ನನ್ನನ್ನ ಬಿಡೋದಿಲ್ಲ ಹಿಗಾಗಿ ನಾನು ಮನೆ ಬಿಟ್ಟು ಹೋಗಿದ್ದೆ ಎಂದಿದ್ದಾನೆ.. ಸಂಜು ಶರ್ಮಾ ಹೇಳಿಕೆ ಪಡೆದು ಹಾಗೂ ಆತನಿಂದ ಮುಚ್ವಳಿಕೆ ಪತ್ರ ಬರೆಸಿಕೊಂಡು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಮನೆ ಕೆಲಸಗಾರ ಹೇಳಿದ್ದೇನು ?
Date: