ಕಳ್ಳತನ ಕಡಿಮೇ ಆಯ್ತು ಅನ್ನುವಷ್ಟರಲ್ಲಿ , ಸರಣಿಗಳ್ಳತನ ಪ್ರಕರಣ ಬೆಳಕಿಗೆ ಬಂದಿದೆ . ಬೆಂಗಳೂರಿನ ರೈನ್ ಬೋ ಲೇಔಟ್ನಲ್ಲಿ ಸರಣಿ ಕಳ್ಳತನವಾಗಿದ್ದು, ಐಶಾರಾಮಿ ಮನೆಗಳಲ್ಲಿದ್ದ ಚಿನ್ನಾಭರಣ ಕಳ್ಳರು ದೋಚಿದ್ಧಾರೆ. ಮನೆಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ, ಕರೆಂಟ್ ಇಲ್ಲದೇ ಇರುವ ವೇಳೆ ಮನೆಗೆ ನುಗ್ಗಿ ಕಳವು ಮಾಡಿದ್ಧಾರೆ. ಸಿಸಿಟಿವಿ ವರ್ಕ್ ಆಗ್ತಿಲ್ಲ ಅನ್ನೋದನ್ನ ಖಾತ್ರಿ ಮಾಡ್ಕೊಂಡು ಲೂಟಿ ಮಾಡಿದ್ದಾರೆ.
ಮನೆಯವರು ವಾಪಸ್ ಬಂದು ನೋಡಿದಾಗ ಕಳ್ಳತನ ಪತ್ತೆಯಾಗಿದೆ. ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ರೈನ್ ಬೋ ಲೇಔಟ್ನ ಮೂರು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಉದ್ಯಮಿ ಧರ್ಮತೇಜ್, IT ಸಿಬ್ಬಂದಿ ಮಂಜುನಾಥ್, ಉದಯ ಭಾಸ್ಕರ್ ಮನೆ ಲೂಟಿ ಮಾಡಿದ್ಧಾರೆ. ಖತರ್ನಾಕ್ ಕಳ್ಳರು ಫ್ಲಾಟ್ಗಳಲ್ಲಿ ಕಳವು ಮಾಡಿದ್ಧಾರೆ. ಎರಡು ವಜ್ರದ ಬಳೆ, ಡೈಮೆಂಡ್ ಚೈನ್, ಮೂರು ಓಲೆ , 10 ಜೊತೆ ಚಿನ್ನದ ಓಲೆ, ಚಿನ್ನದ ಬಳೆ, ಗೋಲ್ಡ್ ಬ್ರಾಸ್ಲೆಟ್, 2 ಗೋಲ್ಡ್ ಪೆಂಡೆಂಟ್, 3 ಚಿನ್ನದ ಉಂಗುರ, ವಜ್ರ ಸಹಿತ ಚಿನ್ನದ ಸರ ಕಳ್ಳತನವಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರೈನ್ ಬೋ ಲೇಔಟ್ ನಲ್ಲಿ ಕಳ್ಳರ ಹಾವಳಿ
Date: