ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಅಪರಾಧ ಕೃತ್ಯ ತಡೆಯಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಕೇಂದ್ರ ಸರ್ಕಾರ ಪರಿಚಯಿಸಿದ್ದ ಸಿಸಿಟಿಎನ್‌ಎಸ್ ಮೊಬೈಲ್ ಅಪ್ಲಿಕೇಷನ್ ಮೂಲಕ ಕಳೆದ 2 ತಿಂಗಳಿಂದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ನಗರದಲ್ಲಿ ಪೊಲೀಸರು ರಾತ್ರಿ 11 ಗಂಟೆ ನಂತರ ಸಿಸಿಟಿಎನ್‌ಎಸ್ ಅಪ್ಲಿಕೇಷನ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಅನುಮಾನಸ್ಪದ ವ್ಯಕ್ತಿಗಳು, ವಾಹನಗಳನ್ನು ತಪಾಸಣೆ ನಡೆಸಿ ಅಪ್ಲಿಕೇಷನ್ ಮೂಲಕ ಪಾತಾಕಿಗಳನ್ನು ಪತ್ತೆ ಹಚ್ಚಲಾಗುತ್ತಿಸದೆ. ಈ ವೇಳೆ ಎಂಸಿಸಿಟಿಎನ್‌ಎಸ್ ಅಪ್ಲಿಕೇಷನ್ ನಲ್ಲಿ ಬೆರಳಚ್ಚುಗಳ ಪರಿಶೀಲನೆ ನಡೆಸಲಾಗುತ್ತದೆ. ಈಗಾಗಲೇ ಪೊಲೀಸರ ಬಳಿಯಿರುವ ಅಪರಾಧಿಗಳ ಪಿಂಗರ್ ಪ್ರಿಂಟ್ ಜೊತೆ ಮ್ಯಾಚ್ ಮಾಡಲಾಗುತ್ತದೆ. ಬೆರಳಚ್ಚು ಪರಿಶೀಲನೆ ವೇಳೆ ಆತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರೋದು ಕಂಡು ಬಂದರೆ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ.
ಅಪರಾಧ ಕೃತ್ಯ ತಡೆಯಲು ಮಾಸ್ಟರ್ ಪ್ಲ್ಯಾನ್
Date: