ಕೇರಳ ಸಿಎಂ ಮಾಡಿದ ಹಲವು ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಪಿಣರಾಯಿ ವಿಜಯನ್ ಭೇಟಿ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಕೇರಳ ಸಿಎಂ ಬಂದಿದ್ದರು.
ಎರಡು ಮೂರು ವಿಚಾರಗಳನ್ನು ಚರ್ಚೆ ಮಾಡಿದ್ದರು. ಕನ್ಯೂರು ರೈಲ್ವೆ ಲೈನ್ ವಿಚಾರವಾಗಿಯೂ ಚರ್ಚಿಸಿದರು. ಇದು 45 ಕಿ.ಮೀ.ನಷ್ಟು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಭಾಗದಲ್ಲಿ ಬರುತ್ತದೆ. ಆದರೆ ಇದು ಎಕೋಸೆನ್ಸಿಟಿವ್ ಜೋನ್ ಎಂದು ಕೇಂದ್ರ ರಿಜೆಕ್ಟ್ ಮಾಡಿದೆ ಎಂದರು. ಮೈಸೂರು ಲೈನ್ ಬಗ್ಗೆಯೂ ಪ್ರಸ್ತಾಪ ಮಾಡಿದರು. ಇದು ಬಂಡಿಪುರ ಎಕೋಸೆನ್ಸಿಟಿವ್ ಝೋನ್ ಎಂದು ಪರಿಗಣಿಸಲ್ಪಡುತ್ತದೆ. ಹಾಗಾಗಿ ಎರಡೂ ಯೋಜನೆಗಳನ್ನು ರಿಜೆಕ್ಟ್ ಮಾಡಿದೆವು. ಟನಲ್ ಲೈನ್ ಮಾಡೋಣ ಅಂದ್ರು. ಆದರೆ ಅರಣ್ಯ ಸಂಪತ್ತು ನಾಶವಾಗುತ್ತೆ ಎಂಬ ಕಾರಣಕ್ಕೆ ಅದೂ ಕೂಡ ರಿಜೆಕ್ಟ್ ಮಾಡಿದ್ದೇವೆ.
ಇನ್ನು ರಾತ್ರಿ ವೇಳೆ ಎರಡು ಬಸ್ ಬದಲು 4 ಬಸ್ ಓಡಾಟಕ್ಕೆ ಪ್ರಸ್ತಾಪಿಸಿದರು. ಆದರೆ ಆ ಪ್ರಸ್ತಾವನೆಯನ್ನೂ ನಾವು ತಿರಸ್ಕಾರ ಮಾಡಿದ್ದೇವೆ ಎಂದು ಹೇಳಿದರು.