ಟೈಮ್ಸ್ ನೌ ಸುದ್ದಿವಾಹಿನಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ದ ಈಗ 500 ಕೋಟಿ ರೂ ಮಾನನಷ್ಟ ಮೊಕದ್ದಮೆಯ ಕೇಸ್ ಅವರ ಮೇಲೆ ಬೀಳಲಿದೆ.
ಇವರ ಮೇಲೆ ಮಾನನಷ್ಟ ಮೊಕದ್ದಮೆಯ ದಾವೆ ಹೂಡುತ್ತಿರುವುದು ವಿವಾದಾತ್ಮಕ ಧರ್ಮ ಪ್ರವಚನಾಕಾರ ಹಾಗೂ ಖ್ಯಾತ ವಿದ್ವಾಂಸ ಝಾಕೀರ್ ನಾಯ್ಕ. ಇವರ ಹೇಳಿಕೆಯ ಪ್ರಕಾರ ಅರ್ನಬ್ ತಮ್ಮ ವಿರುದ್ದ ಚಾನಲ್‍ಗಳಲ್ಲಿ ದ್ವೇಶದ ಅಭಿಯಾನ ಸಾರಲಾಗುತ್ತಿದ್ದು, ಮಾಧ್ಯಮ ತನಿಖೆಯ ಮೂಲಕ ತಮ್ಮನ್ನು ಒಬ್ಬ ತಪ್ಪಿತಸ್ಥನಂತೆ ಬಿಂಬಿಸುತ್ತಿದ್ದಾರೆ. ಅಲ್ಲದೇ ಇವರ ಟಿವಿ ಚಾನಲ್‍ಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿದೆ, ಜೊತೆಗೆ ಕೋಮುವಾದ ಸೃಷ್ಠಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ತಮ್ಮ ವಿರುದ್ದ ಮಾನ ನಷ್ಟ ಹೇಳಿಕೆಗಳನ್ನು ನೀಡಿರುವ ಸುದ್ದಿ ವಾಹಿನಿಯ ಮೇಲೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ನ್ಯಾಯಾವಾದಿ ಮಬಿನ್ ಸೋಲ್ಕರ್ ಹೇಳಿದ್ದಾರೆ. ಟೌಮ್ಸ್ ನೌ ಮೇಲೆ ಮಾನನಷ್ಟ ಮೊಕ್ಕದ್ದಮೆ ಹೂಡಲಾಗಿದ್ದು 500 ಕೋಟಿ ರೂ ಮಾನನಷ್ಟ ಕೇಳಿದ್ದೇವೆ ಎಂದಿದ್ದಾರೆ. ಬಾಂಗ್ಲಾದೇಶದ ಢಾಕಾದಲ್ಲಿನ ನಡೆದ ಉಗ್ರರ ಧಾಳಿಗೆ ಪ್ರಚೋದನೆ ನೀಡಿರುವ ಆಪಾದನೆಯನ್ನು ಝಾಕೀರ್ ಹೊತ್ತಿದ್ದು, ಅವರ ವಿರುದ್ದ ಈಗ ತನಿಖೆ ನಡೆಯುತ್ತಿದೆ.
POPULAR STORIES :
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!