ಆನೆ ಹಾವಳಿಯಿಂದ ಉಂಟಾದ ಬೆಳೆ ಹಾನಿಯ ಪರಿಹಾರವನ್ನು ದುಪ್ಪಟ್ಟು ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಆನೆ ದಾಳಿಯಿಂದ ಮೃತರ ಕುಟುಂಬಕ್ಕೆ ನೀಡುತ್ತಿದ್ದ 7.5 ಲಕ್ಷ ರೂ. ಪರಿಹಾರವನ್ನು 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗುವುದು. ಇದರ ಜೊತೆಗೆ ಮಾನವ ಹಾಗೂ ಆನೆಗಳ ಸಂಘರ್ಷ ತಡೆಗೆ ಈ ವರ್ಷ 100 ಕೋಟಿ ರೂ. ವೆಚ್ಚದಲ್ಲಿ 74 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಆನೆಗಳ ಹಾವಳಿಯಿಂದ ಆಗುತ್ತಿರುವ ಬೆಳೆ ಹಾನಿಗೆ ಪ್ರಸ್ತುತ ಇರುವ ಪರಿಹಾರ ಸಾಲದು ಎಂಬುದು ಗಮನದಲ್ಲಿದೆ. ಇದನ್ನು ದುಪ್ಪಟ್ಟು ಮಾಡಲಾಗುವುದು. ಜೊತೆಗೆ, ಆನೆ ದಾಳಿಯಿಂದ ಮೃತರ ಕುಟುಂಬಗಳಿಗೆ 7.5 ರೂ. ಮಾತ್ರ ಪರಿಹಾರ ನೀಡುತ್ತಿದ್ದು, ಇದನ್ನು ದ್ವಿಗುಣಗೊಳಿಸಲಾಗುವುದು ಎಂದು ಹೇಳಿದರು.
ಆನೆ ಹಾವಳಿಯಿಂದ ಉಂಟಾದ ಬೆಳೆ ಹಾನಿಯ ಪರಿಹಾರ ದುಪ್ಪಟ್ಟು
Date: