ಬೆಂಗಳೂರಿನಲ್ಲಿರುವ ಪಿಎಫ್‌ಐ ನ್ಯಾಷನಲ್ ಸೆಕ್ರೆಟರಿ ನಿವಾಸದ ಮೆಲೆ ಎನ್‌ಐಎ ದಾಳಿ ಮಾಡಿರುವ ಹಿನ್ನೆಲೆ ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪುಲಿಕೇಶಿನಗರ ಪಿಎಫ್ ಐ ಕಚೇರಿ ಮುಂದೆ ಐವತ್ತು ಹೆಚ್ಚು ಜನರಿಂದ ಪ್ರತಿಭಟನೆ ನಡೆಸಿದ್ದು, ಗೋ ಬ್ಯಾಕ್ ಎನ್ ಐ ಎ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಗಂಭೀರ ಆರೋಪಗಳ ಮೇರೆಗೆ ಮಂಗಳೂರು, ಬೆಂಗಳೂರು ಸೇರಿದಂತೆ ಪಿಎಫ್‌ಐನ ಎಂಟು ನಾಯಕರ ನಿವಾಸ ಹಾಗೂ ಕಚೇರಿಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿರುವ ಪಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್, ಪಾದರಾಯನಪುರದಲ್ಲಿ ವಾಸವಾಗಿರುವ ಪಿಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ನಾಸೀರ್ ಪಾಷಾ, ಪುಲಕೇಶಿನಗರ, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ವಾಸವಾಗಿರುವ ಸಂಘಟನೆಯ ಇತರೆ ಸದಸ್ಯರ ಮನೆಗಳ ಮೇಲೆ ದಾಳಿ ಮಾಡಿರುವ ಎನ್‌ಐಎ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಈ ಹಿನ್ನೆಲೆ ಪಿಎಫ್ ಐ ಕಾರ್ಯಕರ್ತರು NIA ದಾಳಿ ಖಂಡಿಸಿ ಪ್ರತಿಭಟನೆ ಮಾಡಿದ್ದಾರೆ.
ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆ
Date: