ಶೈಲಪುತ್ರಿಯ ಬಗ್ಗೆ ನಿಮಗೇಷ್ಟು ಗೊತ್ತು ?

Date:

ನವರಾತ್ರಿ ವೈಭವ ಆರಂಭ ಆಗೇ ಬಿಡ್ತು . ಪ್ರಥಮ ದಿನ ನವರಾತ್ರಿಯಂದು ಶೈಲಪುತ್ರಿಯನ್ನ ಪೂಜಿಸುತ್ತಾರೆ .

ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬವೇ ನವರಾತ್ರಿ .  ನವರಾತ್ರಿಯ ಈ ದಿನಗಳಲ್ಲಿ ದುರ್ಗಾಮಾತೆಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ . ಒಂಬತ್ತು ದಿನಗಳಲ್ಲಿ ಮೊದಲ ದಿನ ಪೂಜಿಸುವ ಶಕ್ತಿ ದೇವಿಯ ಮೊದಲ ಅವತಾರವೇ ಶೈಲಪುತ್ರಿ.ದಕ್ಷನ ಪುತ್ರಿಯಾಗಿದ್ದ ಸತಿದೇವಿಯು ಶಿವನನ್ನ ಮದುವೆ ಆಗ್ತಾಳೆ . ಅದು ದಕ್ಷಪ್ರಜಾಪತಿಗೆ ಇಷ್ಟವಿರುವುದಿಲ್ಲ . ಒಂದು ದಿನ ದಕ್ಷಪ್ರಜಾಪತಿ ಯಜ್ಞ ಮಾಡುವಾಗ ಸತಿದೇವಿ ತವರು ಮನೆಗೆ ಬರುತ್ತಾಳೆ . ಆದರೆ ಅಲ್ಲಿ ಅವಳಿಗೆ ಅವಮಾನಿಸಲಾಗುತ್ತೆ . ಕುಪಿತಗೊಂಡ ಸತಿಯು ಹೋಮಕುಂಡದಲ್ಲಿ ಬಿದ್ದು ಬಿಡುತ್ತಾಳೆ . ಶಿವನಿಂದ ದೂರವಾದ ಸತಿ  ಪರ್ವತರಾಜನ ಪುತ್ರಿಯಾಗಿ ಜನಿಸಿ ಶಿವನನ್ನ ವಿವಾಹವಾಗುತ್ತಾಳೆ . ಶೈಲಪುತ್ಪರಿಯು ಪರ್ವತರಾಜನ ಪುತ್ರಿ . ಪರ್ವತ ಅಂದರೆ ಪ್ರಕೃತಿ . ಪ್ರಕೃತಿಯೇ ತಾನಾಗುವ ಹೆಣ್ಣಿನ ಗುಣ, ಪ್ರಕೃತಿಯನ್ನು ಪ್ರೀತಿಸಿ, ಪೂಜಿಸುವ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವ ಗುಣವನ್ನು ಈಕೆಯಲ್ಲಿ ಕಾಣಬಹುದು.

ಶೈಲಪುತ್ರಿಯು ಬಿಳಿ ವಸ್ತ್ರದಲ್ಲಿ ಇರುತ್ತಾಳೆ . ಈಕೆಯನ್ನ ಬಿಳಿ ಹೂಗಳಿಂದ ಪೂಜಿಸುತ್ತಾರೆ . ಶೈಲಪುತ್ರಿಗೆ ಹಾಲಿನಿಂದ ಮಾಡಿದ ಸಿಹಿ ಪದಾರ್ಥಗಳು ತುಂಬಾ ಇಷ್ಟ . ಹೀಗಾಗಿ ಹಾಲಿನಿಂದ ಸಿಹಿ ಪದಾರ್ಥ ಮಾಡಿ ನೈವೇದ್ಯ ಮಾಡುತ್ತಾರೆ .

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...