ಕೆಲವರು ಆಗಾಗ್ಗೆ ಅನ್ನುತ್ತಿರುತ್ತಾರೆ ಜೀವನ ಕ್ಷಣಿಕ, ನಿಮ್ಮ ಕಣ್ಣ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಎಲ್ಲಾ ಮುಗಿದೋಗತ್ತೆ ಅಂತಾರೆ ನೋಡಿ. ಅದೇ ಈ ಪದ ಪ್ರಯೋಗನ ನಾವು ಹೆಚ್ಚಾಗಿ ವೇಗದ ಪ್ರತಿಸ್ಪಂದನಗಳಿಗೆ ಹೋಲಿಕೆ ಮಾಡುವಾಗ ಉಪಯೋಗಿಸುತ್ತೇವೆ.
ನಮಗೆಲ್ಲಾರಿಗೊ ನಮ್ಮ ಕಣ್ಣಿನ ರೆಪ್ಪೆ ಮಿಟುಕಿಸುವಿಕೆಯ ಬಗ್ಗೆ ಗೊತ್ತಿರುವಂತಹ ವಿಷಯವೇ..ಆದರೆ ಅದು ಯಾವ ಕಾರಣಕ್ಕೆ ಮಿಟುಕುತ್ತಿರುವುದು ಅಂತ ಗೊತ್ತಿದೆಯಾ? ಬಹುಶಃ ಇರಲಾರದು.
ಮನುಷ್ಯ ಸಾಮಾನ್ಯವಾಗಿ 1 ನಿಮಿಷಕ್ಕೆ 20 -25 ಬಾರಿ ತನ್ನ ಕಣ್ನ ರೆಪ್ಪೆಯನ್ನ ಮಿಟುಕಿಸುತ್ತಾನಂತೆ. ಅಂದರೆ ನಮ್ಮ ಎಚ್ಚರವಿದ್ದ ಸಮಯದ 10% ನಾವು ನಮ್ಮ ಕಣ್ಣುಗಳನ್ನು ಮುಚ್ಚುತ್ತೇವೆ ಎಂದಾಗುತ್ತದೆ.
ನಮ್ಮಕಣ್ಣಿನ ಹೊರಗಿನ ಭಾಗದ ಮೂಲೆಯಲ್ಲಿರೋ ಕಣ್ಣೀರ ಗ್ರಂಥಿಗಳು ಸ್ರವಿಸುವ ಕಣ್ಣೀರುಗಳು ನಮ್ಮ ದೃಷ್ಟಿಯನ್ನು ದುರ್ಬಲವಾಗದಂತೆ ತಡೆಯುತ್ತದೆ.ನಮ್ಮ ರೆಪ್ಪೆ ಮಿಟುಕಿಸುವಿಕೆಯಿಂದ ನಮ್ಮ ಕಣ್ಣೀರನ್ನು ಒರೆಸಲು ನಮಗೆ ಸಾಧ್ಯ.ಇದು ನಮ್ಮ ಕಣ್ಣನ್ನು ಶುಚಿಯಾಗಿರಿಸುವುದಲ್ಲದೆ ಕಣ್ಣನ್ನು ತೇವವಾಗಿರಿಸುತ್ತದೆ.ರೆಪ್ಪೆ ಮಿಟುಕಿಸುವಿಕೆಯಿಂದ ಧೂಳ ಕಣಗಳು ದೂರಕ್ಕೆ ಸರಿಯಲ್ಪಡುತ್ತದೆ.ಅದಲ್ಲದೆ,ಇದರಿಂದ ತೆಳುವಾದ ದ್ರವವು ಕಣ್ಣುಗುಡ್ದೆಯುದ್ದಕ್ಕೂ ಹರಡುವಂತೆ ಮಾಡುತ್ತದೆ.ಇದೊಂದು ಎಣ್ಣೆಯ ರೂಪದಲ್ಲಿರೋ ದ್ರವವಾಗಿದ್ದು,ನಾವು ಕಣ್ಣು ರೆಪ್ಪೆ ಮುಚ್ಚುವುದರಿಂದ,ಅದು ಕಣ್ಣುಗುಡ್ಡೆಯ ತನಕ ಸಾಗಿಸಲ್ಪಟ್ಟು ನಿಮ್ಮ ಕಣ್ಣುಗುಡ್ಡೆಯ ಮೇಲ್ಮೈಯನ್ನು ಯಾವಾಗಲೂ ತೇವವಾಗಿರುವಂತೆ ನೋಡಿಕೊಳ್ಳುತ್ತದೆ.ಅದಲ್ಲದೆ,ಹೊರಗಿನ ತೀಕ್ಷ್ಣ ಪ್ರಕಾಶವನ್ನು ತಡೆಹಿಡಿದು ಕಣ್ಣಿಗಾಗುವ ಹಾನಿಯನ್ನು ತಪ್ಪಿಸುತ್ತದೆ.
ರೆಪ್ಪೆ ಮಿಟುಕಿಸುವಿಕೆಯು ತನ್ನಿಂತಾನೇ ಆಗೋ ಒಂದು ಪ್ರಕ್ರಿಯೆ.ನರಗಳ ಸ್ವಯಂ ಪ್ರೇರಿತ ಚಲನೆ.ಇವುಗಳಿಗೆ ಯಾವಾಗ ಮಿಟುಕಬಾರದು ಎಂದು ಗೊತ್ತಿರಲ್ಲ,ಇದೊಂದು ಉತ್ತಮವಾದ ಪ್ರಕ್ರಿಯೆನೂ ಹೌದು,ನಮ್ಮ ಮುಖದ ಬಳಿ ಏನೇ ಅಪಾಯ ಬರುತ್ತಿದ್ದರೂ ನಮ್ಮ ರೆಪ್ಪೆ ತಕ್ಷಣ ಮುಚ್ಚಿಕೊಳ್ಳುತ್ತದೆ.ಇದರಿಂದ ನಮ್ಮ ಕಣ್ಣು ಸೇಫಾಗಿರುತ್ತದೆ.
ಹೌದು!ನಿಸ್ಸಂದೇಹವಾಗಿಯೂ ನೀವು ಇದನ್ನೆಲ್ಲಾ ಓದುತ್ತಾ ಓದುತ್ತಾ ನಿಮ್ ಕಣ್ಣು ರೆಪ್ಪೆನ ತುಂಬ ಕಡಿಮೆ ಮಿಟುಕಿಸಿರಬಹುದು.ಅದಕ್ಕೆ ಕಾರಣ ನಮ್ಮ ಆರ್ಟಿಕಲ್ ಅಂತೂ ಖಂಡಿತ ಅಲ್ಲ ಬದಲಾಗಿ ಇದೊಂದು ಸಾಬೀತಾದ ವಿಷಯ ಏನು ಗೊತ್ತೇ?ಕಂಪ್ಯೂಟರ್ ನೋಡುವಾಗ ನಾವು ಸಾಧಾರಣವಾಗಿ ಒಂದು ನಿಮಿಷಕ್ಕೆ ಕೇವಲ ಏಳು ಬಾರಿ ಮಾತ್ರ ಕಣ್ಣು ಮಿಟುಕಿಸುತ್ತೇವೆ.ಇದೇ ಕಾರಣಕ್ಕಾಗಿಯೇ ನಿರಂತರ ಕಂಪ್ಯೂಟರ್ ಉಪಯೋಗಿಸುವ ಮಂದಿಗೆ ಕಣ್ಣಿನ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತದೆ.
ಇದಕ್ಕೆ ನಾವು ಹೇಳೋದು…ಪದೇ ಪದೇ ಕಣ್ಣು ರೆಪ್ಪೆ ಮಿಟುಕಿಸುತ್ತಿರಿ.
- ಸ್ವರ್ಣಲತ ಭಟ್
POPULAR STORIES :
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!