ಸೌದೀ ಅರೇಬಿಯಾದಲ್ಲಿ ಭಾರತೀಯ ನಾಗರೀಕರು ಉದ್ಯೋಗ ಕಳೆದುಕೊಂಡವರು ಕೇವಲ 800 ಮಂದಿ ಅಲ್ಲ 10000 ಮಂದಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡದ್ದಾರೆ. ಈಗಾಲೇ ಇಲ್ಲಿನ ಭಾರತೀಯ ಸಮುದಾಯದಿಂದ ಉದ್ಯೋಗ ವಂಚಿತ ಹಸಿದ ಭಾರತೀಯರಿಗೆ 16 ಸಾವಿರ ಕೆ.ಜಿ ಆಹಾರ ವಿತರಣೆ ಮಾಡಲಾಗಿದೆ. ಅಲ್ಲದೆ ಉದ್ಯೋಗ ಕಳೆದುಕೊಂಡ ಸೌದೀ ಭಾರತೀಯರಿಗೆ ಭಾರತೀಯರು ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
ಸೌದೀ ಅರೇಬಿಯಾದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀರಿಗೆ ಭಾರತದ ವಿದೇಶಾಂಗ ಸಚಿವಾಲಯ ಸೌದೀ ಅರೇಬಿಯಾದ ಭಾರತದ ರಾಯಭಾರಿ ಕಛೇರಿ ಮತ್ತು ಜೆಡ್ಡಾ ದೂತವಾಸ ಕಛೇರಿ ಮೂಲಕ ಒಟ್ಟಾರೆ 10 ಸಾವಿರಕ್ಕೂ ಅಧಿಕ ಭಾರತೀಯ ಕಾರ್ಮಿಕರಿಗೆ 16 ಸಾವಿರ ಕೆಜಿ ಆಹಾರ ಪದಾರ್ಥಗಳನ್ನು ಪೂರೈಸಿದೆ. ಅಲ್ಲದೇ ಸೌದೀ ಅರೇಬಿಯಾದಲ್ಲಿರುವ ಭಾರತೀಯ ಸಮುದಾಯವೂ ಸಹಾಯ ಹಸ್ತ ಚಾಚುತ್ತಿದ್ದಾರೆ.
ಜೆಡ್ಡಾದಲ್ಲಿ ಸಂಕಷ್ಟದಲ್ಲಿರುವ ಭಾರತೀಯ ಕಾರ್ಮಿಕರಿಗೆ ಆಹಾರ ಪದಾರ್ಥ ವಿತರಿಸಲಾಗಿದೆ, ಅಲ್ಲಿನ ದೂತವಾಸ ಕಛೇರಿಯು ನಿರಂತರ ಸಂಪರ್ಕದಲ್ಲಿದೆ ಎಂದಿದ್ದಾರೆ.
ಕಚ್ಚಾ ತೈಲ ಕುಸಿತದಿಂದ ಸೌದೀ ಅರೇಬಿಯಾ ಮತ್ತು ಕುವೈತ್‍ನಲ್ಲಿ ಅರ್ಥ ವ್ಯವಸ್ಥೆ ಮಂದಗತಿಯಲ್ಲಿತ್ತು. ಅಲ್ಲದೇ ಇಲ್ಲಿನ ನಾನಾ ಕಂಪನಿಗಳು ಮುಚ್ಚಲ್ಪಡುತ್ತಿದೆ. ಇದರಿಂದ ಭಾರತೀಯ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ, ಜೊತೆಗೆ ಹಲವಾರು ಕಂಪನಿಗಳು ಸರಿಯಾದ ವೇತನವನ್ನೂ ನೀಡದೆ ಫ್ಯಾಕ್ಟರಿಗಳನ್ನು ಮುಚ್ಚಿದೆ, ಈ ಕಾರಣದಿಂದ ಭಾರತೀಯ ಕಾರ್ಮಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಉದ್ಯೊಗ ಕಳೆದುಕೊಂಡಿರುವ ಕಾರ್ಮಿಕರಿಗೆ ನೆರವಾಗಲು ಐದು ಶಬಿರಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಅವರಿಗೆ ಆಹಾರ ಮತ್ತು ಪರಿಹಾರ ಸಾಮಾಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಭಾರತೀಯರ ಕಾರ್ಮಿಕರು ಎದುರಿಸುತ್ತಿರು ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಾರತೀಯರೆಲ್ಲರೂ ಒಟ್ಟುಗೂಡಿ ತಮ್ಮ ಇಚ್ಚಾ ಶಕ್ತಿ ಪ್ರದರ್ಶಿಸಿ ಭಾರತೀಯ ಸಹೋದರ ಸಹೋದರಿಯರಿಗೆ ಹೆಗಲು ನೀಡಬೇಕು ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ
ಸೌದೀ ಅರೇಬಿಯಾದಲ್ಲಿ ಸುಮಾರು 10 ಸಾವಿರ ಭಾರತೀಯ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಅಲ್ಲಿ ಅವರ ಆಹಾರ ಬಿಕ್ಕಟ್ಟಿನ ತೀರ್ವತೆ ಅರಿಯಲು ಮತ್ತು ಅದಕ್ಕೆ ಪರಿಹಾರ ಒದಗಿಸಲು ವಿದೇಶಾಂಗ ಖಾತೆ ಸಹಾಯಕ ವಿ.ಕೆ ಸಿಂಗ್ ಅವರು ಶೀಘ್ರವೇ ಸೌದಿಗೆ ಪ್ರಯಾಣ ಬೆಳೆಸಲಿದ್ದಾರೆ. ತೀವ್ರ ಸಮಸ್ಯೆ ಎದುರಿಸುತ್ತಿರುವ ಕೆಲವು ಭಾರತೀಯರು ತಾಯ್ನಾಡಿಗೆ ಹಿಂದಿರುಗಲು ಒಲವು ತೋರಿಸಿದ್ದು, ಅವರ ಸುರಕ್ಷಿತ ವಾಪಾಸಾತಿ ಸೇರಿದಂತೆ ಇಡೀ ಬಿಕ್ಕಟ್ಟಿಗೆ ಪರಿಹಾರ ಒದಗಿಸುವುದು ಸಿಂಗ್ ಅವರ ಭೇಟಿಯ ಉದ್ದೇಶವಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
I appeal to 30 lakhs Indians in Saudi Arabia. Please help your fellow brothers and sisters. /1
— Sushma Swaraj (@SushmaSwaraj) July 30, 2016
@Imran_khokhar84 @SushmaSwaraj @Gen_VKSingh @mjakbar @ajxtopcop @123nrs Food stff being delievred at Sisten/ Macrona pic.twitter.com/rAJhXsJZ8Z
— India in Jeddah (@CGIJeddah) July 30, 2016
POPULAR STORIES :
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!