ಆಂಧ್ರ ಪ್ರದೇಶಕ್ಕೆ ವಿಷೇಶ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಇಂದು ವೈಎಸ್‍ಆರ್ ಕಾಂಗ್ರೇಸ್ ಹಾಗೂ ಎಡ ಪಕ್ಷಗಳು ಕರೆ ನೀಡಿದ್ದ ಬಂದ್ ಹಿನ್ನಲೆಯಲ್ಲಿ ಆಂಧ್ರ ಪ್ರದೇಶದಾದ್ಯಂತ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರಿಂದ ರಾಜ್ಯದಾದ್ಯಂತ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಬಸ್‍ಗಳಿಲ್ಲದೇ ಪ್ರಯಾಣಿಕರು ಎಲ್ಲಿಂದರಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲದೇ ಅಂಗಡಿ ಮುಂಗಟ್ಟುಗಳೂ, ಹೊಟೇಲ್, ಸಿನಿಮಾ ಮಂದಿರಗಳು, ಪೆಟ್ರೋಲ್ ಬಂಕ್‍ಗಳು ಬಂದ್‍ಗೆ ಬೆಂಬಲ ಸೂಚಿಸಿದ್ದವು. ವಾಹನಗಳು ರಸ್ತೆಗಿಳಿಯದೇ ಹಲವು ನಗರಗಳು ಬಿಕೋ ಎನ್ನುತ್ತಿತ್ತು. ಮುನ್ನಚ್ಚರಿಕೆ ಕ್ರಮವಾಗಿ ಆಂಧ್ರ ಸರ್ಕಾರ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಬಂದ್ ಹನ್ನಲೆಯಲ್ಲಿ ಕರ್ನಾಟಕದಿಂದ ಆಂಧ್ರ ಪ್ರದೇಶಗಳಿಗೆ ಹೋಗುವ ಕೆಎಸ್‍ಆರ್‍ಟಿಸಿ ಬಸ್‍ಗಳು ನಿಂತಲ್ಲೇ ನಿಂತಿದ್ದವು. ಕರ್ನಾಟಕದ ಗಡಿ ಪ್ರದೇಶಗಳಾದ ಕೋಲಾರ ತುಮಕೂರು ಬಳ್ಳಾರಿ ಚಿತ್ರದುರ್ಗ ಕಡೆಯಿಂದಲೂ ರಾಜ್ಯ ರಸ್ತೆ ಸಾರಿಗೆ ಬಸ್‍ಗಳು ಆಂಧ್ರಕ್ಕೆ ಚಲಿಸಲಿಲ್ಲ. ಕೋಲಾರದಿಂದ ತಿರುಪತಿ, ಚಿತ್ತುರು, ಬಳ್ಳಾರಿಯಿಂದ ಅನಂತಪುರ ಕರ್ನೂಲು, ಮಂತ್ರಾಲಯದತ್ತ ಸಾಗುವ ರಾಜ್ಯ ಸಾರಿಗೆ ಬಸ್‍ಗಳು ನಿಂತಲ್ಲಿಂದ ಕದಡಲಿಲ್ಲ.
POPULAR STORIES :
ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?
ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!
ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ
ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!
ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…! ಹುಷಾರ್…!
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!